AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪುನೀತ್​ಗೆ ಸುದೀಪ್​ ನುಡಿ ನಮನ; ಅಂತ್ಯಕ್ರಿಯೆ ವೇಳೆ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಟ್ಟ ಕಿಚ್ಚ

Kichcha Sudeep: ‘ಪುನೀತ್​ ರಾಜ್​ಕುಮಾರ್​ ಅಂತ್ಯಕ್ರಿಯೆ ವೇಳೆ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಅಂತ ಚಿಂತೆ ಆಯಿತು. ಕುಟುಂಬದ ಹಿರಿಯರಿಗೆ ಹೇಗೆ ಆಗಿರಬಹುದು? ಇದನ್ನೆಲ್ಲ ಯೋಚಿಸುತ್ತ ಪ್ರಜ್ಞೆ ತಪ್ಪಿದಂತಾಯಿತು’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

Puneeth Rajkumar: ಪುನೀತ್​ಗೆ ಸುದೀಪ್​ ನುಡಿ ನಮನ; ಅಂತ್ಯಕ್ರಿಯೆ ವೇಳೆ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಟ್ಟ ಕಿಚ್ಚ
ಕಿಚ್ಚ ಸುದೀಪ್​​​, ಪುನೀತ್​ ರಾಜ್​ಕುಮಾರ್​
TV9 Web
| Edited By: |

Updated on:Oct 31, 2021 | 11:55 AM

Share

ಪುನೀತ್​ ಇನ್ನಿಲ್ಲ ಎಂಬ ಮಾತನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಅದನ್ನು ಒಪ್ಪಿಕೊಂಡು ಬದುಕು ಸಾಗಿಸಲೇಬೇಕಿದೆ. ಅವರನ್ನು ಕಳೆದುಕೊಂಡ ಸ್ನೇಹಿತರು, ಸೆಲೆಬ್ರಿಟಿಗಳು ಪರಿಪರಿಯಾಗಿ ನೋವು ಅನುಭವಿಸುತ್ತಿದ್ದಾರೆ. ಬಾಲ್ಯದಿಂದಲೂ ಪುನೀತ್​ ಜೊತೆ ಗೆಳೆತನ ಹೊಂದಿದ್ದ ಕಿಚ್ಚ ಸುದೀಪ್​ ಅವರು ಈ ಘಟನೆಯಿಂದ ವಿಚಲಿತರಾಗಿದ್ದಾರೆ. ಅಗಲಿದ ಗೆಳೆಯನ ಬಗ್ಗೆ ಅವರು ಸರಣಿ ಟ್ವೀಟ್​ ಮಾಡುತ್ತಿದ್ದಾರೆ. ಭಾನುವಾರ (ಅ.31) ಮುಂಜಾನೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್​ ಅಂತ್ಯಕ್ರಿಯೆ ನೆರವೇರಿದೆ. ಇದರಲ್ಲಿ ಭಾಗವಹಿಸಿ ಬಂದ ಬಳಿಕ ಸುದೀಪ್​ ಅವರು ಭಾವುಕವಾಗಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ಎಲ್ಲವೂ ಮುಗಿದಿದೆ. ಸಹಜ ಸ್ಥಿತಿಯಲ್ಲಿ ಬರಲು ಇನ್ನೂ ಸ್ವಲ್ಪ ದಿನ ಹಿಡಿಯಲಿದೆ. ಇದು ಕೇವಲ ನಷ್ಟವಲ್ಲ. ಜನರು ಮತ್ತು ಚಿತ್ರರಂಗಕ್ಕೆ ಆಗಿರುವ ಸಡನ್​​ ಆಘಾತ. ಈ ದಿನ ಒಂದು ಸುಂದರ ಅಧ್ಯಾಯ ಕೊನೆ ಆಗಿದೆ. ಅಂತ್ಯಕ್ರಿಯೆ ವೇಳೆ ಕುಳಿತಿರುವಾಗ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಅಂತ ಚಿಂತೆ ಆಯಿತು. ಕುಟುಂಬದ ಹಿರಿಯರಿಗೆ ಹೇಗೆ ಆಗಿರಬಹುದು? ಇದನ್ನೆಲ್ಲ ಯೋಚಿಸುತ್ತ ಪ್ರಜ್ಞೆ ತಪ್ಪಿದಂತಾಯಿತು’ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.

‘ಪುನೀತ್​ ಎಲ್ಲರ ಪ್ರೀತಿಪಾತ್ರ ವ್ಯಕ್ತಿ ಆಗಿದ್ದರು. ಇಂದು ತಂದೆ-ತಾಯಿ ಪಕ್ಕದಲ್ಲಿ ಅವರನ್ನು ಮಲಗಿಸಿದ ಬಳಿಕ ನಾನು ಅಲ್ಲಿಂದ ಹೊರಟೆ. ಆಗ ಮನದಲ್ಲಿ ಹೀಗೆ ಅನಿಸಿತು; ಪುನೀತ್​ ರಾಯಲ್​ ಆಗಿ ಹುಟ್ಟಿದರು, ರಾಯಲ್​ ಆಗಿ ಬೆಳೆದರು, ರಾಯಲ್​ ಆಗಿ ಬಾಳಿದರು, ರಾಯಲ್​ ಆಗಿಯೇ ಹೊರಟುಹೋದರು. ಈ ತಮ್ಮ ತಾರೆ ಈಗ ಆಕಾಶಕ್ಕೆ ಸೇರಿದೆ. ರಾತ್ರಿ ಆಗಸ ನೋಡಿದಾಗ ಬೇರೆಲ್ಲರಿಗಿಂತ ನೀವು ಹೆಚ್ಚು ಮಿನುಗುತ್ತೀರಿ ಎಂಬ ಭರವಸೆ ನನಗಿದೆ’ ಎಂದಿದ್ದಾರೆ ಸುದೀಪ್​.

‘ಈ ಮೂರು ದಿನಗಳ ಕಾಲ ನಮ್ಮ ಸರ್ಕಾರ ಮತ್ತು ಪ್ರೀತಿಯ ಮುಖ್ಯಮಂತ್ರಿಗಳ ಕೆಲಸ ಅತ್ಯುತ್ತಮವಾಗಿತ್ತು. ಎಲ್ಲವನ್ನೂ ತುಂಬ ಘನತೆ ಮತ್ತು ಶಿಸ್ತಿನಿಂದ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿ ಮುಖ್ಯಮಂತ್ರಿ ಮತ್ತು ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು. ಪುನೀತ್​ ಅವರನ್ನು ಯೋಗ್ಯವಾದ ರೀತಿಯಲ್ಲಿ ಬೀಳ್ಗೊಡುವಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದ್ದು’ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

Puneeth Rajkumar Last Rites: ಪುನೀತ್ ಅಂತ್ಯಕ್ರಿಯೆ ವೇಳೆ ಶಿವಣ್ಣ ಆಕ್ರಂದನ; ಅಭಿಮಾನಿಗಳ ಕರುಳು ಹಿಂಡುವಂತಿತ್ತು ಆ ನೋವಿನ ಕ್ಷಣ

Puneeth Rajkumar Funeral: ಅಪ್ಪನ ಸಮಾಧಿಗೆ ಪುನೀತ್ ಪುತ್ರಿಯರಿಂದ ಪೂಜೆ; ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರ ವಿದಾಯ

Published On - 11:49 am, Sun, 31 October 21

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!