A Suitable Boy: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ‘ಎ ಸೂಟಬಲ್​ ಬಾಯ್​’ ನಿರ್ದೇಶಕಿ ಮೀರಾ ನಾಯರ್​ಗೆ ಲೀಗಲ್​ ನೋಟೀಸ್​

Mira Nair: ‘ಎ ಸೂಟಬಲ್​ ಬಾಯ್​’ ವೆಬ್​ ಸಿರೀಸ್​ ವಿವಾದ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿಯ ಕೆಲವು ಮುಖಂಡರು ಕೂಡ ಈ ವೆಬ್​ ಸಿರೀಸ್​ ವಿರುದ್ಧ ಗುಡುಗಿದ್ದರು.

A Suitable Boy: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ‘ಎ ಸೂಟಬಲ್​ ಬಾಯ್​’ ನಿರ್ದೇಶಕಿ ಮೀರಾ ನಾಯರ್​ಗೆ ಲೀಗಲ್​ ನೋಟೀಸ್​
ಮೀರಾ ನಾಯರ್​, ಇಶಾನ್​, ಟಬು
Follow us
TV9 Web
| Updated By: ಮದನ್​ ಕುಮಾರ್​

Updated on:Nov 10, 2021 | 10:08 AM

ವೆಬ್​ ಸಿರೀಸ್​ಗಳಿಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಓಟಿಟಿ ಪ್ಲಾಟ್​ಫಾರ್ಮ್​ಗಳ ಮೂಲಕ ಬಿಡುಗಡೆ ಆಗುವ ಈ ವೆಬ್​ ಸರಣಿಗಳು ಒಂದಿಲ್ಲೊಂದು ಕಿರಿಕ್​ ಮಾಡಿಕೊಳ್ಳುತ್ತಲೇ ಇರುತ್ತವೆ. ಈಗ ‘ಎ ಸೂಟಬಲ್​ ಬಾಯ್​’ ವೆಬ್​ ಸರಣಿ ಒಂದು ವಿವಾದ ಮಾಡಿಕೊಂಡಿದೆ. ಈ ವೆಬ್​ ಸಿರೀಸ್​ನಲ್ಲಿ ಬರುವ ಒಂದು ದೃಶ್ಯವು ಮುಸ್ಲೀಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ ನಿರ್ದೇಶಕಿ ಮೀರಾ ನಾಯರ್​ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ನಿರ್ದೇಶಕಿ ಮೀರಾ ನಾಯರ್​ ಅವರಿಗೆ ‘ಅಖಿಲ ಭಾರತ ಶಿಯಾ ಪರ್ಸನಲ್​ ಲಾ ಬೋರ್ಡ್​’ ಕಡೆಯಿಂದ ನೋಟೀಸ್​ ಕಳಿಸಲಾಗಿದೆ. ಕೋಟ್ಯಂತರ ಜನರು ಪವಿತ್ರ ಎಂದು ಪರಿಗಣಿಸಲ್ಪಡುವ ‘Tazia’ ಅನ್ನು ನೆಲದ ಮೇಲೆ ಬೀಳಿಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರಲಾಗಿದೆ. ನಾಲ್ಕನೇ ಎಪಿಸೋಡ್​ನಲ್ಲಿ ಈ ದೃಶ್ಯ ಬರುತ್ತದೆ. ಅದನ್ನು ವೆಬ್​ ಸಿರೀಸ್​ನಿಂದ ತೆಗೆದುಹಾಕಬೇಕು ಎಂದು ಈ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿದೆ.

‘ಎ ಸೂಟಬಲ್​ ಬಾಯ್​’ ವೆಬ್​ ಸಿರೀಸ್​ ವಿವಾದ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿಯ ಕೆಲವು ಮುಖಂಡರು ಕೂಡ ಈ ವೆಬ್​ ಸಿರೀಸ್​ ವಿರುದ್ಧ ಗುಡುಗಿದ್ದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ನೆಟ್​ಫ್ಲಿಕ್ಸ್​ ಮೂಲಕ ‘ಎ ಸೂಟಬಲ್​ ಬಾಯ್​’ ಬಿಡುಗಡೆ ಆಗಿತ್ತು. ಮೀರಾ ನಾಯರ್​ ನಿರ್ದೇಶನದಲ್ಲಿ ಮೂಡಿಬಂದ ಈ ವೆಬ್ ಸಿರೀಸ್​ನಲ್ಲಿ ಇಶಾನ್​ ಕಟ್ಟರ್​, ಟಬು, ತಾನ್ಯಾ ಮುಂತಾದವರು ನಟಿಸಿದ್ದಾರೆ.

ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆದ ಅನೇಕ ವೆಬ್​ ಸರಣಿಗಳು ಕೂಡ ವಿವಾದ ಮಾಡಿಕೊಂಡ ಉದಾಹರಣೆ ಇದೆ. ಅನುಷ್ಕಾ ಶರ್ಮಾ ನಿರ್ಮಾಣ ಮಾಡಿದ್ದ ‘ಪಾತಾಳ್​ ಲೋಕ್​’ ವೆಬ್​ ಸಿರೀಸ್​ನ ಹಲವು ದೃಶ್ಯಗಳನ್ನು ಅನೇಕರು ಖಂಡಿಸಿದ್ದರು. ಸೈಫ್​ ಅಲಿ ಖಾನ್​ ನಟಿಸಿದ್ದ ‘ತಾಂಡವ್​’ ವೆಬ್​ ಸಿರೀಸ್​ನ ಕೆಲವು ದೃಶ್ಯಗಳಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂಬ ಆರೋಪ ಎದುರಾಗಿತ್ತು. ಆ ಎಲ್ಲ ವೆಬ್​ ಸರಣಿಗಳು ಸೂಪರ್​ ಹಿಟ್​ ಆದವು.

ಮೊದಲನೇ ಲಾಕ್​ ಡೌನ್​ ಬಳಿಕ ಜನರು ಓಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಹೆಚ್ಚು ಒಗ್ಗಿಕೊಂಡರು. ಹಾಗಾಗಿ ಅಮೇಜಾನ್​ ಪ್ರೈಂ, ನೆಟ್​ಫ್ಲಿಕ್ಸ್​, ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​, ಜೀ5 ಮುಂತಾದ ಓಟಿಟಿ ಸಂಸ್ಥೆಗಳ ವಹಿವಾಟು ವೃದ್ಧಿಸಿದೆ. ವೆಬ್​ ಸಿರೀಸ್​ಗಳ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಆಗಿದೆ.

ಇದನ್ನೂ ಓದಿ:

Marakkar: ಮೋಹನ್​ಲಾಲ್ ‘ಮರಕ್ಕರ್​’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಭವಿಷ್ಯವೇನು?

Salaga Movie: ‘ಸಲಗ’ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಓಟಿಟಿ ರಿಲೀಸ್​ ಕುರಿತು ದುನಿಯಾ ವಿಜಯ್​ ಸ್ಪಷ್ಟನೆ

Published On - 9:27 am, Wed, 10 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ