Marakkar: ಮೋಹನ್​ಲಾಲ್ ‘ಮರಕ್ಕರ್​’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಭವಿಷ್ಯವೇನು?

Mohanlal: ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ‘ಮರಕ್ಕರ್​’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಇಂಥ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಲು ಬಯಸುತ್ತಾರೆ ಪ್ರೇಕ್ಷಕರು. ಆದರೆ ‘ಮರಕ್ಕರ್​’ ನಿರ್ಮಾಪಕರು ಓಟಿಟಿ ಹಾದಿ ಹಿಡಿದಿದ್ದಾರೆ.

Marakkar: ಮೋಹನ್​ಲಾಲ್ ‘ಮರಕ್ಕರ್​’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಭವಿಷ್ಯವೇನು?
‘ಮರಕ್ಕರ್​’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 07, 2021 | 8:55 AM

ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ ಕಲಾವಿದ ಮೋಹನ್​ಲಾಲ್​ ಅವರ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕವರ್ಗವಿದೆ. ಮಲಯಾಳಂ ಮಾತ್ರವಲ್ಲದೇ ಇತರೆ ಭಾಷೆಯ ಸಿನಿಪ್ರಿಯರು ಕೂಡ ಮೋಹನ್​​ಲಾಲ್​​ ನಟನೆಯ ಚಿತ್ರಗಳನ್ನು ಕಣ್ಣರಳಿಸಿ ನೋಡುತ್ತಾರೆ. ಈ ವರ್ಷ ಫೆಬ್ರವರಿಯಲ್ಲಿ ತೆರೆಕಂಡ ‘ದೃಶ್ಯಂ 2’ ಸಿನಿಮಾ ಭರ್ಜರಿ ಗೆಲುವು ಪಡೆಯಿತು. ಅದರ ಬೆನ್ನಲ್ಲೇ ‘ಮರಕ್ಕರ್​: ಲಯನ್​ ಆಫ್​ ದಿ ಅರೇಬಿಯನ್​ ಸೀ’ ಸಿನಿಮಾ ಘರ್ಜಿಸಲು ಸಜ್ಜಾಗಿದೆ. ಚಿತ್ರಮಂದಿರದಲ್ಲಿಯೇ ಈ ಸಿನಿಮಾ ರಿಲೀಸ್​ ಆಗಲಿದೆ ಎಂದು ಊಹಿಸಲಾಗಿತ್ತು. ಆದರೆ ನೇರವಾಗಿ ಓಟಿಟಿ ಮೂಲಕ ಬಿಡುಗಡೆ ಮಾಡಲು ‘ಮರಕ್ಕರ್​’ ನಿರ್ಮಾಪಕರು ನಿರ್ಧರಿಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ‘ಮರಕ್ಕರ್​’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಾಮಾನ್ಯವಾಗಿ ಇಂಥ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಲು ಬಯಸುತ್ತಾರೆ ಪ್ರೇಕ್ಷಕರು. ಸಿನಿಮಾ ಚೆನ್ನಾಗಿದ್ದರೆ ಥಿಯೇಟರ್​ನಲ್ಲೇ ದುಪ್ಪಟ್ಟು ಲಾಭ ಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಿದ್ದರೂ ಕೂಡ ‘ಮರಕ್ಕರ್​’ ಚಿತ್ರವನ್ನು ಓಟಿಟಿ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

‘ಮರಕ್ಕರ್​’ ನಿರ್ಮಾಪಕರ ಈ ನಡೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಕ್ರಾಂತಿಕಾರಕ ಬೆಳವಣಿಗೆ ಆಗಿದೆ. ಸಾಂಪ್ರದಾಯಿಕವಾಗಿ ಪ್ರಬಲವಾಗಿದ್ದ ಚಿತ್ರಮಂದಿರಗಳ ವ್ಯವಹಾರಕ್ಕೆ ಇದು ತೀವ್ರ ಪೆಟ್ಟು ಕೊಡಬಹುದು. ಒಂದು ಬಿಗ್​ ಬಜೆಟ್​ ಸಿನಿಮಾ ತೆರೆಕಂಡರೆ ಅದರಿಂದ ಚಿತ್ರಮಂದಿರಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ಆಗುತ್ತದೆ. ಅನೇಕ ಜನ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಆದರೆ ಓಟಿಟಿಯಲ್ಲಿ ತೆರೆಕಂಡರೆ ಚಿತ್ರಮಂದಿರಗಳಿಗಾಗಲೀ, ಸ್ಥಳೀಯ ಜನರಿಗಾಗಲಿ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ.

ಎಷ್ಟು ಕೋಟಿಗೆ ‘ಮರಕ್ಕರ್​’ ಸಿನಿಮಾ ಸೇಲ್​ ಆಗಿದೆ ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’, ಯಶ್​ ನಟನೆಯ ‘ಕೆಜಿಎಫ್​ 2’ ಸಿನಿಮಾಗಳಿಗೂ ಕೂಡ ಓಟಿಟಿ ಸಂಸ್ಥೆಗಳಿಂದ ಬೇಡಿಕೆ ಬಂದಿತ್ತು. ಆದರೆ ಈ ಸಿನಿಮಾಗಳ ನಿರ್ಮಾಪಕರು ಅದನ್ನು ಒಪ್ಪಿಕೊಂಡಿಲ್ಲ. ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕು ಎಂಬುದು ಅವರ ಉದ್ದೇಶ. ಒಂದು ವೇಳೆ ‘ಮರಕ್ಕರ್​’ ಸಿನಿಮಾ ಓಟಿಟಿಯಲ್ಲಿ ಅದ್ಭುತವಾದ ಬ್ಯುಸಿನೆಸ್​ ಮಾಡಿದರೆ ಅದು ‘ಕೆಜಿಎಫ್​ 2’, ‘ಆರ್​ಆರ್​ಆರ್​’ ಮುಂತಾದ ಬಿಗ್​ ಬಜೆಟ್​ ಸಿನಿಮಾಗಳ ನಿರ್ಮಾಪಕರನ್ನು ಆಕರ್ಷಿಸಬಹುದು. ಮುಂಬರುವ ದಿನಗಳಲ್ಲಿ ಹೀಗೆ ಬಿಗ್​ ಬಜೆಟ್​ನಲ್ಲಿ ತಯಾರಾಗುವ ಹೊಸ ಸಿನಿಮಾಗಳ ನಿರ್ಮಾಪಕರು ನೇರವಾಗಿ ಓಟಿಟಿಯನ್ನೇ ಆಯ್ಕೆ ಮಾಡಿಕೊಂಡರೂ ಅಚ್ಚರಿ ಏನಿಲ್ಲ.

ಕೊವಿಡ್​ ಕಾರಣದಿಂದ ‘ಮರಕ್ಕರ್​’ ಸಿನಿಮಾದ ಬಿಡುಗಡೆ ದಿನಾಂಕ ಪದೇಪದೇ ಮುಂದೂಡಲ್ಪಡುತ್ತಲೇ ಬಂದಿತ್ತು. ಹಾಗಾಗಿ ಅಂತಿಮವಾಗಿ ಓಟಿಟಿ ಮೊರೆ ಹೋಗಲಾಗಿದೆ. ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಬಿಡುಗಡೆ ದಿನಾಂಕ ಕೂಡ ಎರಡೆರಡು ಬಾರಿ ಮುಂದೂಡಿಕೆ ಆಗಿತ್ತು. ಅಂತಿಮವಾಗಿ 2022ರ ಜ.7ರಂದು ‘ಆರ್​ಆರ್​ಆರ್​’ ಹಾಗೂ 2022ರ ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಕಪಾಳಮೋಕ್ಷ ಕಾಂಟ್ರವರ್ಸಿ: ಟೀಕೆ ಮಾಡಿದವರಿಗೆ ‘ಜೈ ಭೀಮ್​’ ನಟ ಪ್ರಕಾಶ್​ ರಾಜ್​ ಖಡಕ್​ ತಿರುಗೇಟು

ನವೆಂಬರ್​ ತಿಂಗಳು ಪೂರ್ತಿ ಕನ್ನಡ ಸಿನಿಮಾಗಳ ಉತ್ಸವ; ರಿಲೀಸ್​ ಆಗುತ್ತಿವೆ ಮಸ್ತ್​ ಚಿತ್ರಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ