ನವೆಂಬರ್​ ತಿಂಗಳು ಪೂರ್ತಿ ಕನ್ನಡ ಸಿನಿಮಾಗಳ ಉತ್ಸವ; ರಿಲೀಸ್​ ಆಗುತ್ತಿವೆ ಮಸ್ತ್​ ಚಿತ್ರಗಳು

ನವೆಂಬರ್​ ತಿಂಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಮುಗಿಲ್​ ಪೇಟೆ, 100, ಸಖತ್​, ಗರುಡ ಗಮನ ವೃಷಭ ವಾಹನ ಮುಂತಾದ ಚಿತ್ರಗಳು ನಿರೀಕ್ಷೆ ಮೂಡಿಸಿವೆ.

ನವೆಂಬರ್​ ತಿಂಗಳು ಪೂರ್ತಿ ಕನ್ನಡ ಸಿನಿಮಾಗಳ ಉತ್ಸವ; ರಿಲೀಸ್​ ಆಗುತ್ತಿವೆ ಮಸ್ತ್​ ಚಿತ್ರಗಳು
ನವೆಂಬರ್​ ತಿಂಗಳಲ್ಲಿ ರಿಲೀಸ್​ ಆಗಲಿವೆ ಬಹುನಿರೀಕ್ಷಿತ ಸಿನಿಮಾಗಳು
Follow us
| Updated By: ಮದನ್​ ಕುಮಾರ್​

Updated on: Nov 06, 2021 | 4:03 PM

ಕೊರೊನಾ ಎರಡಲೇ ಅಲೆ ಕಾರಣದಿಂದ ಚಿತ್ರರಂಗಕ್ಕೆ ಮಂಕು ಕವಿದಿತ್ತು. ಅನೇಕ ಸಿನಿಮಾಗಳ ಕೆಲಸಗಳು ನಿಂತಲ್ಲೇ ನಿಂತಿದ್ದವು. ಹಲವು ಸ್ಟಾರ್​ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ಆದರೆ ಈಗ ವಾತಾವರಣ ತಿಳಿ ಆಗಿದೆ. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಹಳೇ ಚಾರ್ಮ್​ ಮರಳುತ್ತಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅದರಲ್ಲೂ ನವೆಂಬರ್​ ತಿಂಗಳಲ್ಲಿ ಕನ್ನಡ ಸಿನಿಪ್ರಿಯರಿಗೆ ವಿಶೇಷ ಸಿನಿಮಾಗಳು ಸಿಗುತ್ತಿವೆ. ಯಾವ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಲಿದ್ದಾರೆ? ಬಾಕ್ಸ್​ ಆಫೀಸ್​ನಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ಕೌತುಕ ಮನೆ ಮಾಡಿದೆ. ನವೆಂಬರ್​ನಲ್ಲಿ ಬಿಡುಗಡೆ ಆಗಲಿರುವ ಪ್ರಮುಖ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..

ನಟ ‘ನೆನಪಿರಲಿ ಪ್ರೇಮ್​’ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ನ.12ರಂದು ತೆರೆ ಕಾಣುತ್ತಿದೆ. ರಿಷಬ್​ ಶೆಟ್ಟಿ, ರಾಜ್​ ಬಿ. ಶೆಟ್ಟಿ ಜೊತೆಯಾಗಿ ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನ.19ರಂದು ಬಿಡುಗಡೆ ಆಗುತ್ತಿದೆ. ‘ಒಂದು ಮೊಟ್ಟೆಯ ಕಥೆ’ ಬಳಿಕ ರಾಜ್​ ಬಿ. ಶೆಟ್ಟಿ ನಿರ್ದೇಶನದ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಮೂಡಿದೆ.

ರವಿಚಂದ್ರನ್​ ಪುತ್ರ ಮನುರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲ್​ಪೇಟ್​’ ಸಿನಿಮಾ ಕೂಡ ನ.19ರಂದು ರಿಲೀಸ್​ ಆಗುತ್ತಿದೆ. ಈ ಚಿತ್ರಕ್ಕೆ ಭರತ್​ ನಾವುಂದ ನಿರ್ದೇಶನ ಮಾಡಿದ್ದಾರೆ. ಸಾಧುಕೋಕಿಲ, ತಾರಾ, ರಂಗಾಯಣ ರಘು ಮುಂತಾದ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಮೇಶ್​ ಅರವಿಂದ್​ ನಿರ್ದೇಶನ ಮತ್ತು ನಟನೆಯ ‘100’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ. ಸೈಬರ್​ ಕ್ರೈಂ ಹಿನ್ನೆಲೆಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ರಮೇಶ್​ ಅರವಿಂದ್​ ನಟಿಸಿದ್ದಾರೆ. ನ.19ರಂದು ‘100’ ಚಿತ್ರ ಬಿಡುಗಡೆ ಆಗುತ್ತಿದೆ.

ನಿರ್ದೇಶಕ ಸಿಂಪಲ್​ ಸುನಿ ಮತ್ತು ‘ಗೋಲ್ಡನ್​ ಸ್ಟಾರ್’ ಗಣೇಶ್​ ಕಾಂಬಿನೇಷನ್​ನ ‘ಸಖತ್​’ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ನ.26ರಂದು ಈ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಟೀಸರ್​ ಮೂಲಕ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ‘ಭಜರಂಗಿ 2, ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳು ಕೂಡ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿವೆ.

ಇದನ್ನೂ ಓದಿ:

ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ಹೆಸರು; ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಹೇಳೋದೇನು?

ಪುನೀತ್​ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ