ಪುನೀತ್ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು
Puneeth Rajkumar: ‘ಯಾರ ಮನಸ್ಸಿಗೂ ಘಾಸಿ ಮಾಡುವ ಉದ್ದೇಶ ನಮಗಿಲ್ಲ. ಸತ್ಯಾಂಶ ಹೊರಗೆ ಬರಲಿ. ಸತ್ಯ ಏನು ಎಂಬುದು ಅಭಿಮಾನಿಗಳಿಗೆ ಗೊತ್ತಾಗಲಿ’ ಎಂದು ದೂರುದಾರರು ಹೇಳಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರು ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಂಥ ವ್ಯಕ್ತಿಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ. ಅಲ್ಲದೇ, ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭದಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಯಿತು? ಸಡನ್ ಆಗಿ ಅಪ್ಪು ಕೊನೆಯುಸಿರೆಳೆಯಲು ಹೇಗೆ ಸಾಧ್ಯ? ಇಂಥ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹಾಗಾಗಿ ಪುನೀತ್ ಅಭಿಮಾನಿ ಅರುಣ್ ಪರಮೇಶ್ವರ್ ಅವರು ದೂರು ನೀಡಿದ್ದಾರೆ. ಪುನೀತ್ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆಗೆ ಒಳಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
‘ಯಾರ ಮನಸ್ಸಿಗೂ ಘಾಸಿ ಮಾಡುವ ಉದ್ದೇಶ ನಮಗಿಲ್ಲ. ಕ್ಲಿನಿಕ್ನಿಂದ ವಿಕ್ರಂ ಆಸ್ಪತ್ರೆ ತಲುಪಲು ಪುನೀತ್ ಅವರಿಗೆ 40 ನಿಮಿಷ ಹಿಡಿಯಿತು ಅಂತ ಹೇಳಲಾಗುತ್ತಿದೆ. ಅಷ್ಟು ತಡ ಆಗಿದ್ದು ಯಾಕೆ? ಸತ್ಯಾಂಶ ಹೊರಗೆ ಬರಲಿ. ಸತ್ಯ ಏನು ಎಂಬುದು ಅಭಿಮಾನಿಗಳಿಗೆ ಗೊತ್ತಾಗಲಿ’ ಎಂದು ಅರುಣ್ ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ:
ರಸ್ತೆ, ಪಾರ್ಕ್, ಮೈದಾನಕ್ಕೆ ಪುನೀತ್ ಹೆಸರು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳೋದೇನು?
Puneeth Rajkumar: ಪುನೀತ್ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್ ಸ್ಟಾರ್ ಹೀರೋ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

