AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salaga Movie: ‘ಸಲಗ’ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಓಟಿಟಿ ರಿಲೀಸ್​ ಕುರಿತು ದುನಿಯಾ ವಿಜಯ್​ ಸ್ಪಷ್ಟನೆ

Duniya Vijay: ‘ಯಾರೋ ನಮ್ಮ ಯಶಸ್ಸನ್ನು ಸಹಿಸೋಕೆ ಆಗದವರು ಈ ಚಿತ್ರ ಓಟಿಟಿಯಲ್ಲಿ ಬರುತ್ತೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಖಂಡಿತವಾಗಿ ಇದು ಓಟಿಟಿಗೆ ಬರುವುದಿಲ್ಲ’ ಎಂದು ಸಲಗ ಸಿನಿಮಾದ ನಟ, ನಿರ್ದೇಶಕ ದುನಿಯಾ ವಿಜಯ್​ ಹೇಳಿದ್ದಾರೆ.

Salaga Movie: ‘ಸಲಗ’ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಓಟಿಟಿ ರಿಲೀಸ್​ ಕುರಿತು ದುನಿಯಾ ವಿಜಯ್​ ಸ್ಪಷ್ಟನೆ
ದುನಿಯಾ ವಿಜಯ್​
TV9 Web
| Edited By: |

Updated on: Oct 18, 2021 | 2:04 PM

Share

ಮಾಸ್​ ಕಮರ್ಷಿಯಲ್​ ಶೈಲಿಯಲ್ಲಿ ಮೂಡಿಬಂದಿರುವ ‘ಸಲಗ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ದುನಿಯಾ ವಿಜಯ್​ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಚೊಚ್ಚಲ ಪ್ರಯತ್ನದಲ್ಲೇ ದೊಡ್ಡ ಗೆಲುವು ಪಡೆದುಕೊಂಡಿದ್ದಾರೆ. ಬಹುತೇಕ ಕಡೆಗಳಲ್ಲಿ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವುದು ಇಡೀ ತಂಡಕ್ಕೆ ಖುಷಿ ನೀಡಿದೆ. ಅದರ ನಡುವೆ ಚಿತ್ರದ ಬಗ್ಗೆ ಒಂದು ಗಾಸಿಪ್​ ಹಬ್ಬಿದೆ. ಈ ಸಿನಿಮಾ ಓಟಿಟಿಯಲ್ಲಿ ಲಭ್ಯವಾಗಲಿದೆ ಎಂದು ಹರಡಿರುವ ಗಾಳಿ ಸುದ್ದಿ ಬಗ್ಗೆ ಈಗ ಸ್ವತಃ ದುನಿಯಾ ವಿಜಯ್​ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಆತಂಕವನ್ನು ಮರೆತು ಜನರು ಚಿತ್ರಮಂದಿರಕ್ಕೆ ಬಂದು ‘ಸಲಗ’ ಚಿತ್ರವನ್ನು ನೋಡುತ್ತಿದ್ದಾರೆ. ಆದರೆ ಕೆಲವರು ಈ ಚಿತ್ರ ಓಟಿಟಿಗೆ ಬಂದ ಮೇಲೆ ನೋಡೋಣ ಎಂದುಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವರು ಗಾಸಿಪ್​ ಹಬ್ಬಿಸುತ್ತಿದ್ದಾರೆ. ಅದು ಚಿತ್ರತಂಡದ ಗಮನಕ್ಕೆ ಬಂದಿದೆ. ‘ಸದ್ಯಕ್ಕಂತೂ ನಮ್ಮ ಸಿನಿಮಾ ಓಟಿಟಿಗೆ ಬರುವುದಿಲ್ಲ’ ಎಂದು ದುನಿಯಾ ವಿಜಯ್​ ನೇರವಾಗಿ ಹೇಳಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಸಲಗ ಚಿತ್ರಕ್ಕೆ ದೊಡ್ಡ ಯಶಸ್ಸು ನೀಡಿರುವ ಎಲ್ಲರಿಗೂ ನಾವು ಚಿರಋಣಿ ಆಗಿರುತ್ತೇವೆ. ಆದರೆ ಒಂದು ವಿಷಯ ಓಡಾಡುತ್ತಿದೆ. ಯಾರೋ ನಮ್ಮ ಯಶಸ್ಸನ್ನು ಸಹಿಸೋಕೆ ಆಗದವರು ಈ ಚಿತ್ರ ಓಟಿಟಿಯಲ್ಲಿ ಬರುತ್ತೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಖಂಡಿತವಾಗಿ ಇದು ಓಟಿಟಿಗೆ ಬರುವುದಿಲ್ಲ. ಚಿತ್ರಮಂದಿರದಲ್ಲೇ ಪ್ರದರ್ಶನ ಕಾಣುತ್ತದೆ. ಚಿತ್ರಮಂದಿರದಲ್ಲಿಯೇ ಜನರು ನೋಡಬೇಕು ಅಂತ ನಾವು ಎರಡು ವರ್ಷದಿಂದ ಕಾದಿದ್ದೆವು. ಮೊದಲೇ ನಮಗೆ ಓಟಿಟಿ ಆಫರ್​ ಬಂದಿತ್ತು. ಆದರೂ ನಾವೂ ಕೊಟ್ಟಿರಲಿಲ್ಲ. ಓಟಿಟಿಗೆ ಬರುತ್ತದೆ ಎಂದುಕೊಂಡು ಚಿತ್ರವನ್ನು ಮಿಸ್​ ಮಾಡಿಕೊಳ್ಳಬೇಡಿ. ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

ಕೆ.ಪಿ. ಶ್ರೀಕಾಂತ್​ ನಿರ್ಮಾಣ ಮಾಡಿರುವ ಈ ಸಿನಿಮಾ ಅ.14ರಂದು ಬಿಡುಗಡೆಯಾಗಿ ಒಳ್ಳೆಯ ಓಪನಿಂಗ್​ ಪಡೆದುಕೊಂಡಿತು. ಮೊದಲ ವೀಕೆಂಡ್​ ಕಳೆದ ಬಳಿಕವೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಂಜನಾ ಆನಂದ್​, ಡಾಲಿ ಧನಂಜಯ, ಕಾಕ್ರೋಜ್​ ಸುಧಿ, ಯಶ್​ ಶೆಟ್ಟಿ, ಚನ್ನಕೇಶವ, ಶ್ರೀಧರ್​, ಶ್ರೇಷ್ಠ ಮುಂತಾದವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?