‘ಕೆಜಿಎಫ್​ 2’ ರಿಲೀಸ್​ಗೂ ಮುನ್ನ ಓಟಿಟಿಗೆ ಬರ್ತಾರೆ ರವೀನಾ ಟಂಡನ್​; ಡಿ.10ಕ್ಕಾಗಿ ಅಭಿಮಾನಿಗಳ ಕಾತರ

Raveena Tandon: ಡಿ.10ರಂದು ರಿಲೀಸ್​ ಆಗಲಿರುವ ‘ಅರಣ್ಯಕ್​’ ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಈಗ ಟೀಸರ್​ ಬಿಡುಗಡೆ ಆಗಿದೆ. ಭಯಾನಕವಾದ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯಲ್ಲಿ ರವೀನಾ ಟಂಡನ್​ ಅವರಿಗೆ ಪೊಲೀಸ್​ ಅಧಿಕಾರಿ ಪಾತ್ರವಿದೆ.

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನ ಓಟಿಟಿಗೆ ಬರ್ತಾರೆ ರವೀನಾ ಟಂಡನ್​; ಡಿ.10ಕ್ಕಾಗಿ ಅಭಿಮಾನಿಗಳ ಕಾತರ
ರವೀನಾ ಟಂಡನ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 11, 2021 | 8:11 AM

ನಟಿ ರವೀನಾ ಟಂಡನ್​ (Raveena Tandon) ಅವರು ಬಾಲಿವುಡ್​ನ ಬಹುಬೇಡಿಕೆಯ ಕಲಾವಿದೆ. ​90ರ ದಶಕದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದರು. ಪ್ರತಿ ವರ್ಷ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಖತ್​ ಚ್ಯೂಸಿ ಆಗಿದ್ದಾರೆ. ತಮ್ಮ ಈಗಿನ ಇಮೇಜ್​ಗೆ ಸರಿಹೊಂದುವಂತಹ ಪಾತ್ರಗಳನ್ನು ಮಾತ್ರ ರವೀನಾ ಟಂಡನ್​ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ‘ಕೆಜಿಎಫ್​: ಚಾಪ್ಟರ್​ 2’ (KGF 2) ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಆದರೆ ಆ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಭಿಮಾನಿಗಳನ್ನು ವಿಶ್ವಾದ್ಯಂತ ರಂಜಿಸಲು ರವೀನಾ ಟಂಡನ್​ ಬರುತ್ತಿದ್ದಾರೆ. ಆದರೆ ಚಿತ್ರಮಂದಿರದಲ್ಲಿ ಅಲ್ಲ, ಓಟಿಟಿಯಲ್ಲಿ ಎಂಬುದು ವಿಶೇಷ. ಅವರು ನಟಿಸಿದ ಮೊದಲ ವೆಬ್​ ಸಿರೀಸ್​ ‘ಅರಣ್ಯಕ್​’ (Aranyak) ಈಗ ಬಿಡುಗಡೆಗೆ ಸಜ್ಜಾಗಿದೆ. ಡಿ.10ರಂದು ನೆಟ್​ಫ್ಲಿಕ್ಸ್​ (Netflix) ಮೂಲಕ ಇದು ಬಿಡುಗಡೆ ಆಗಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಇಷ್ಟುಹೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ರವೀನಾ ಟಂಡನ್​ ನಿಭಾಯಿಸಿರುವ ರಮಿಕಾ ಸೇನ್​ ಪಾತ್ರ ಧೂಳೆಬ್ಬಿಸಿರಬೇಕಿತ್ತು. ಆದರೆ ಕೊರೊನಾ ವೈರಸ್​ ಕಾರಣದಿಂದ ‘ಕೆಜಿಎಫ್​ 2’ ಚಿತ್ರದ ಕೆಲಸಗಳು ತಡವಾದ್ದರಿಂದ ಸಿನಿಮಾ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿತು. ಆ ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ಬೇರೊಂದು ಅವತಾರದಲ್ಲಿ ರವೀನಾ ಟಂಡನ್​ ಕಾಣಿಸಿಕೊಂಡಿರುವ ‘ಅರಣ್ಯಕ್​’ ವೆಬ್​ ಸರಣಿ ಬಿಡುಗಡೆ ಆಗುತ್ತಿದೆ.

ಡಿ.10ರಂದು ರಿಲೀಸ್​ ಆಗಲಿರುವ ‘ಅರಣ್ಯಕ್​’ ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಈಗ ಟೀಸರ್​ ಬಿಡುಗಡೆ ಆಗಿದೆ. ಭಯಾನಕವಾದ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯನ್ನು ಈ ವೆಬ್​ ಸರಣಿ ಹೊಂದಿರಲಿದೆ. ಇದರಲ್ಲಿ ರವೀನಾ ಟಂಡನ್​ ಅವರಿಗೆ ಪೊಲೀಸ್​ ಅಧಿಕಾರಿ ಪಾತ್ರ ಇದೆ. ಅನುಮಾನಾಸ್ಪದವಾಗಿ ಕಾಡಿನಲ್ಲಿ ನಡೆಯುವ ಕೊಲೆಗಳ ರಹಸ್ಯವನ್ನು ಭೇದಿಸುವ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಈ ಟೀಸರ್​ ಮೂಲಕ ಬಿಟ್ಟುಕೊಡಲಾಗಿದೆ.

ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರು ವೆಬ್​ ಸಿರೀಸ್​ಗಳಲ್ಲಿ ನಟಿಸಿ ಭಾರಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಸೈಫ್​ ಅಲಿ ಖಾನ್​, ಅಭಿಷೇಕ್​ ಬಚ್ಚನ್​, ನವಾಜುದ್ದೀನ್​ ಸಿದ್ದಿಕಿ, ರಾಧಿಕಾ ಆಪ್ಟೆ ಮುಂತಾದ ಕಲಾವಿದರಿಗೆ ವೆಬ್​ ಸರಣಿಗಳು ಕೈ ಹಿಡಿದಿವೆ. ಈಗ ‘ಅರಣ್ಯಕ್’ ಮೂಲಕ ಓಟಿಟಿ ವೇದಿಕೆಯಲ್ಲಿ ರವೀನಾ ಟಂಡನ್​ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇದರಲ್ಲಿ ಅವರ ಜೊತೆ ಪರಂಬ್ರತ ಚಟರ್ಜಿ, ಆಶುತೋಶ್​ ರಾಣಾ, ಮೇಘನಾ ಮಲಿಕ್​, ಜಾಕಿರ್​ ಹುಸೇನ್​ ಮುಂತಾದವರು ನಟಿಸಿದ್ದಾರೆ. ರೋಹನ್​ ಸಿಪ್ಪಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಮೋಹನ್​ಲಾಲ್ ‘ಮರಕ್ಕರ್​’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಭವಿಷ್ಯವೇನು?

‘ಸಲಗ’ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಓಟಿಟಿ ರಿಲೀಸ್​ ಕುರಿತು ದುನಿಯಾ ವಿಜಯ್​ ಸ್ಪಷ್ಟನೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ