AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ

ಹರ್ಷ ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಿದ್ದಾನೆ ಎನ್ನೋದು ನಿಜ. ಆದರೆ, ಭುವಿ ಕಡೆಯಿಂದ ಹರ್ಷನಿಗೆ ಯಾವುದೇ ಉತ್ತರ ಬಂದಿರಲಿಲ್ಲ. ಪ್ರಪೋಸ್​ ಮಾಡಿದ ದಿನ ಪೊಲೀಸರು ಬಂದು ಹರ್ಷನನ್ನು ಕರೆದುಕೊಂಡು ಹೋಗಿದ್ದರು.

ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ
ಹರ್ಷ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 10, 2021 | 9:31 AM

Share

ಕನ್ನಡತಿ ಧಾರಾವಾಹಿ (Kannadathi Serial) ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಹಲವು ಎಪಿಸೋಡ್​ಗಳ ನಂತರ ಭುವಿಗೆ ಹರ್ಷ (Harsha) ಪ್ರಪೋಸ್​ ಮಾಡಿದ್ದಾನೆ. ಭರ್ಜರಿ ಈವೆಂಟ್​ ಒಂದನ್ನು ಮಾಡಿ ಭುವಿಗೆ  (Bhuvi) ಪ್ರಪೋಸ್​ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿದೆ. ಮಾಲಾ ಕೆಫೆ ಮಾಲೀಕ ಹರ್ಷ, ಭುವಿಯನ್ನು ಪ್ರೀತಿಸುತ್ತಿದ್ದಾನೆ ಎನ್ನುವ ವಿಚಾರದಲ್ಲಿ ಯಾರಿಗೂ ಅನುಮಾನ ಬಂದಿಲ್ಲ. ಹರ್ಷನಿಗೆ-ಭುವಿಗೆ ಜೋಡಿ ಆಗೋಕೆ ಸಾಧ್ಯವೇ ಇಲ್ಲ ಎಂಬುದು ಸಾನಿಯಾ ನಂಬಿಕೆ. ಈ ಕಾರಣಕ್ಕೆ ಭುವಿ ಮೇಲೆ ಆಕೆಗೆ ಅನುಮಾನ ಬಂದಿಲ್ಲ. ಈ ಮಧ್ಯೆ, ಹರ್ಷನ ಪ್ರಪೋಸ್​ಗೆ ಭುವಿ ಉತ್ತರಿಸಿದ್ದಾಳೆ. ಆದರೆ, ಈ ಉತ್ತರ ಅಡ್ಡಗೋಡೆ ಮೇಲೆ ದೀಪ ಇಟ್ಟಂತಿತ್ತು ಅನ್ನೋದು ಬೇಸರದ ಸಂಗತಿ.

ಹರ್ಷ ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಿದ್ದಾನೆ ಎನ್ನೋದು ನಿಜ. ಆದರೆ, ಭುವಿ ಕಡೆಯಿಂದ ಹರ್ಷನಿಗೆ ಯಾವುದೇ ಉತ್ತರ ಬಂದಿರಲಿಲ್ಲ. ಪ್ರಪೋಸ್​ ಮಾಡಿದ ದಿನ ಪೊಲೀಸರು ಬಂದು ಹರ್ಷನನ್ನು ಕರೆದುಕೊಂಡು ಹೋಗಿದ್ದರು. ಭುವಿ ಎಲ್ಲವನ್ನೂ ವಿವರಿಸುವ ಮೊದಲೇ ಹರ್ಷ ಅಲ್ಲಿಂದ ತೆರಳಿದ್ದ.

ಹರ್ಷನ ಮೇಲೆ ಭುವಿಗೆ ಪ್ರೀತಿ ಇದೆ. ಹರ್ಷ ಎಂದರೆ ಆಕೆಗೆ ತುಂಬಾನೇ ಇಷ್ಟ. ಆದರೆ, ಭುವಿ ಗೆಳತಿ ವರುಧಿನಿಗೂ ಹರ್ಷನ ಮೇಲೆ ಅಪಾರ ಪ್ರೀತಿ ಇದೆ. ಈ ಕಾರಣಕ್ಕೆ ಹರ್ಷನ ಪ್ರೀತಿಗೆ ಓಕೆ ಎನ್ನಬೇಕೋ ಅಥವಾ ಬೇಡವೋ ಎನ್ನುವ ಗೊಂದಲ ಮೂಡಿದೆ. ಈ ಕಾರಣಕ್ಕೆ ಹರ್ಷನ ಪ್ರಪೋಸ್​ಅನ್ನು ಹೋಲ್ಡ್​ನಲ್ಲಿ ಇರಿಸಿದ್ದಾಳೆ. ಹರ್ಷ ಎದುರಾದಾಗ ಭುವಿ ತನ್ನ ಪ್ರತಿಕ್ರಿಯೆ ನೀಡಿದ್ದಾಳೆ.

ಹರ್ಷನಿಂದ ಭುವಿ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಈ ಬಗ್ಗೆ ಹರ್ಷ ನೇರವಾಗಿಯೇ ಕೇಳಿದ್ದಾನೆ. ‘ನಾನು ಪ್ರೀತಿ ಹೇಳಿಕೊಂಡಿದ್ದೇನೆ. ಅದು ನಿಜಕ್ಕೂ ತಪ್ಪಲ್ಲ’ ಎಂದನು ಹರ್ಷ. ಇದಕ್ಕೆ ಉತ್ತರಿಸಿದ ಭುವಿ, ‘ನನಗೆ ಸಮಯ ಬೇಕು’ ಎಂದಳು. ಈ ಮಾತನ್ನು ಕೇಳಿ ಹರ್ಷನಿಗೆ ಬೇಸರವಾಗಿದೆ. ‘ನಾನು ಮಾಡಿದ ತಪ್ಪಾದರೂ ಏನು? ಯಾವ ಕಾರಣಕ್ಕೆ ನೀವು ಪ್ರೀತಿ ಒಪ್ಪಿಕೊಳ್ಳುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ’ ಎಂದಿದ್ದಾನೆ ಹರ್ಷ.

ಇದನ್ನೂ ಓದಿ: ಕೊನೆಗೂ ಪ್ರಪೋಸ್​ ಮಾಡಿದ ಹರ್ಷ; ಇದು ವರುಧಿನಿಗೆ ಮೋಸ ಮಾಡಿದಂತೆ ಎಂದ ಭುವಿ, ಮುಂದೇನು?

‘ಕನ್ನಡತಿ’ ಸಾನಿಯಾಗೆ ಇದೆ ದೊಡ್ಡ ಕಂಟಕ; ಇದರಿಂದ ಅವರು ಪಾರಾಗೋದು ಕಷ್ಟ ಇದೆ

Published On - 9:57 pm, Tue, 9 November 21