‘ಕನ್ನಡತಿ’ ಸಾನಿಯಾಗೆ ಇದೆ ದೊಡ್ಡ ಕಂಟಕ; ಇದರಿಂದ ಅವರು ಪಾರಾಗೋದು ಕಷ್ಟ ಇದೆ

ರತ್ನಮಾಲಾ ತನ್ನ ಮನೆಗೆ ಸೌಪರ್ಣಿಕಾಳನ್ನು ಸೊಸೆಯಾಗಿ ತರಬೇಕು ಎಂದುಕೊಂಡಿದ್ದಾಳೆ. ಅವಳ ಹೆಸರಿನಲ್ಲೇ ವಿಲ್​ ಕೂಡ ಬರೆದಿಟ್ಟಿದ್ದಾಳೆ. ಇದರ ಸೂಚನೆ ಸಾನಿಯಾಗೆ ಸಿಕ್ಕಿದೆ.

‘ಕನ್ನಡತಿ’ ಸಾನಿಯಾಗೆ ಇದೆ ದೊಡ್ಡ ಕಂಟಕ; ಇದರಿಂದ ಅವರು ಪಾರಾಗೋದು ಕಷ್ಟ ಇದೆ
ಸಾನಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 02, 2021 | 1:50 PM

‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ದಾಟಿದೆ. ಇಷ್ಟು ದಿನ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ಭುವಿ ಮುಂದೆ ಹರ್ಷ ವ್ಯಕ್ತಪಡಿಸಿದ್ದಾನೆ. ಅವಳ ಕಡೆಯಿಂದ ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. ಹರ್ಷನ ಪ್ರೀತಿ ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಭುವಿ ಇದ್ದಾಳೆ. ಈ ಎಲ್ಲಾ ಘಟನೆಗಳ ಮಧ್ಯೆ ಸಾನಿಯಾಗೆ ಸಂಕಷ್ಟವೊಂದು ಎದುರಾಗುವ ಸೂಚನೆ ಸಿಕ್ಕಿದೆ. ಸಾನಿಯಾ ಈ ಕಂಟಕದಿಂದ ಪಾರಾಗೋದು ಕಷ್ಟ ಇದೆ ಅನ್ನೋದು ವೀಕ್ಷಕರ ಅಭಿಪ್ರಾಯ.

ರತ್ನಮಾಲಾ ತನ್ನ ಮನೆಗೆ ಸೌಪರ್ಣಿಕಾಳನ್ನು ಸೊಸೆಯಾಗಿ ತರಬೇಕು ಎಂದುಕೊಂಡಿದ್ದಾಳೆ. ಅವಳ ಹೆಸರಿನಲ್ಲೇ ವಿಲ್​ ಕೂಡ ಬರೆದಿಟ್ಟಿದ್ದಾಳೆ. ಇದರ ಸೂಚನೆ ಸಾನಿಯಾಗೆ ಸಿಕ್ಕಿದೆ. ಈ ಕಾರಣಕ್ಕೆ ಸೌಪರ್ಣಿಕಾ ಪತ್ತೆ ಹಚ್ಚುವ ಕಾರ್ಯದಲ್ಲಿ ಆಕೆ ಬ್ಯುಸಿ ಆಗಿದ್ದಳು. ಇದೇ ಸಂದರ್ಭದಲ್ಲಿ ಹರ್ಷ ಸಂಬಂಧವೇ ಇಲ್ಲದ ನಕಲಿ ಸೌಪರ್ಣಿಕಾಳನ್ನು ಕರೆದುಕೊಂಡು ಬಂದಿದ್ದ. ಇವಳೇ ನಿಜವಾದ ಸೌಪರ್ಣಿಕಾ ಎಂದು ತಿಳಿದ ಸಾನಿಯಾ ಆಕೆಯನ್ನು ಕೊಲ್ಲೋಕೆ ಸುಪಾರಿ ನೀಡಿದ್ದಳು.

ಸುಪಾರಿ ಕಿಲ್ಲರ್​ ಸೌಪರ್ಣಿಕಾಳನ್ನು ಕರೆದುಕೊಂಡು ಹೋಗಿ ಕೊಲ್ಲೋಕೆ ಪ್ರಯತ್ನ ನಡೆಸಿದ್ದ. ಇದು ಯಶಸ್ವಿ ಆಗುವುದರಲ್ಲಿತ್ತು. ಆದರೆ, ತಾನು ತೋಡಿದ ಗುಂಡಿಗೆ ಆತನೇ ಬಿದ್ದಿದ್ದ. ಆಕೆಯನ್ನು ಕೊಲ್ಲಲು ಹೋಗಿ ಕಿಲ್ಲರ್​ ತಾನೇ ಹತನಾಗಿದ್ದ. ಆತನ ಶವ ಪೊಲೀಸರಿಗೆ ಸಿಕ್ಕಿದೆ. ಇದರ ಜೊತೆಗೆ ಅವನ ಮೊಬೈಲ್​ ಕೂಡ ಸಿಕ್ಕಿದೆ.

ಆತ ಸಾಯುವುದಕ್ಕೂ ಮೊದಲು ಸಾನಿಯಾಗೆ ಕರೆ ಮಾಡಿ ಮಾತನಾಡಿದ್ದ. ಇದು ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಒಂದೊಮ್ಮೆ ಪೊಲೀಸರು ಕಿಲ್ಲರ್​​ನ ಮೊಬೈಲ್​ ತೆರೆದು ನೋಡಿದರೆ ಸಾನಿಯಾ ಕರ್ಮಕಾಂಡ ಹೊರಬೀಳಲಿದೆ. ಆಗ, ಆಕೆ ಜೈಲು ಸೇರೋದು ಪಕ್ಕಾ. ಇದು ಸಾನಿಯಾಗೂ ಅರಿವಾಗಿದೆ. ಇದರಿಂದ ತಪ್ಪಿಸಿಕೊಳ್ಳೋಕೆ ಆಕೆ ಯಾವ ರೀತಿಯ ಸಂಚು ರೂಪಿಸುತ್ತಾಳೆ ಅನ್ನೋದು ಸದ್ಯದ ಕುತೂಹಲ. ಒಟ್ಟಿನಲ್ಲಿ ‘ಕನ್ನಡತಿ’ ನಾನಾ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ.

ಇದನ್ನೂ ಓದಿ: ‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್