AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಪ್ರಪೋಸ್​ ಮಾಡಿದ ಹರ್ಷ; ಇದು ವರುಧಿನಿಗೆ ಮೋಸ ಮಾಡಿದಂತೆ ಎಂದ ಭುವಿ, ಮುಂದೇನು?

ಭುವಿ ಜನ್ಮದಿನದಂದು ಹರ್ಷ ಪ್ರಪೋಸ್ ಮಾಡೋಕೆ ಸಿದ್ಧತೆ ಮಾಡಿಕೊಂಡಿದ್ದ. ಅದ್ದೂರಿಯಾಗಿ ವೇದಿಕೆ ಸಿದ್ಧಪಡಿಸಿ ಭುವಿಯ ಎದುರು ತನ್ನ ಪ್ರೀತಿಯನ್ನು ಹರ್ಷ ನಿವೇದನೆ ಮಾಡಿಕೊಂಡಿದ್ದಾನೆ.

ಕೊನೆಗೂ ಪ್ರಪೋಸ್​ ಮಾಡಿದ ಹರ್ಷ; ಇದು ವರುಧಿನಿಗೆ ಮೋಸ ಮಾಡಿದಂತೆ ಎಂದ ಭುವಿ, ಮುಂದೇನು?
ಭುವಿ ಮತ್ತು ಹರ್ಷ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 29, 2021 | 11:20 AM

Share

‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟವನ್ನು ದಾಟಿದೆ. ಇಷ್ಟು ದಿನ ಮನಸ್ಸಲ್ಲೇ ಗುಟ್ಟಾಗಿ ಇರಿಸಿಕೊಂಡಿದ್ದ ಪ್ರೀತಿಯನ್ನು ಭುವಿ ಮುಂದೆ ಹರ್ಷ ವ್ಯಕ್ತಪಡಿಸಿದ್ದಾನೆ. ಆದರೆ, ಭುವಿಗೆ ಯಾವ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ತಿಳಿಯುತ್ತಿಲ್ಲ. ಈ ಮಧ್ಯೆ ಹರ್ಷನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

ಭುವಿ ಜನ್ಮದಿನದಂದು ಹರ್ಷ ಪ್ರಪೋಸ್ ಮಾಡೋಕೆ ಸಿದ್ಧತೆ ಮಾಡಿಕೊಂಡಿದ್ದ. ಅದ್ದೂರಿಯಾಗಿ ವೇದಿಕೆ ಸಿದ್ಧಪಡಿಸಿ ಭುವಿಯ ಎದುರು ತನ್ನ ಪ್ರೀತಿಯನ್ನು ಹರ್ಷ ನಿವೇದನೆ ಮಾಡಿಕೊಂಡಿದ್ದಾನೆ. ಇದು ಭುವಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೆ, ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಆಕೆಗೆ ತಿಳಿಯುತ್ತಿಲ್ಲ. ಹರ್ಷನ ಪ್ರಪೋಸ್​ ಆಕೆಗೆ ಬಿಸಿ ತುಪ್ಪದಂತೆ ಆಗಿದೆ. ನುಂಗಲೂ ಆಗದೆ, ಉಗುಳಲೂ ಆಗದೇ ಇರುವ ಸ್ಥಿತಿ ತಲುಪಿದ್ದಾಳೆ ಅವಳು.

ಭುವಿ ಗೆಳತಿ ವರುಧಿನಿ ಹರ್ಷನನ್ನು ಪ್ರೀತಿ ಮಾಡುತ್ತಿದ್ದಾಳೆ. ಹರ್ಷನ ಮುಂದೆ ಆಕೆ ಪ್ರೇಮ ನಿವೇದನೆ ಕೂಡ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ, ಇದು ಹರ್ಷನಿಗೆ ಇಷ್ಟವೇ ಆಗಿರಲಿಲ್ಲ. ನಾವಿಬ್ಬರೂ ಗೆಳೆಯರಷ್ಟೇ ಎಂದು ವರುಧಿನಿಗೆ ಹರ್ಷ ನೇರವಾಗಿಯೇ ಹೇಳಿದ್ದ. ಇದು ಆಕೆಗೆ ಬೇಸರ ತರಿಸಿತ್ತು. ಈ ವಿಚಾರ ಭುವಿಗೂ ತಿಳಿದಿದೆ. ಹೀಗಾಗಿ ಹರ್ಷನ ಪ್ರಪೋಸ್​ ಆಕೆಗೆ ನಿಜಕ್ಕೂ ಶಾಕಿಂಗ್​ ಆಗಿತ್ತು.

‘ವರುಧಿನಿಯಿಂದ ನಾನು ನಿಮ್ಮನ್ನು ಕಿತ್ತುಕೊಂಡಂತೆ ಆಗುತ್ತದೆ. ನಿಮಗೋಸ್ಕರ ವರು ಎಷ್ಟು ಒದ್ದಾಡುತ್ತಾಳೆ ಎಂದು ನನಗೆ ಗೊತ್ತು. ಅವಳ ಎದುರಿರುವಾಗ ನಾನು ನಿಮ್ಮ ಜೊತೆ ಹೇಗೆ ಸುಖವಾಗಿ ಬದುಕಲಿ? ಆ ಪಶ್ಚಾತಾಪವನ್ನು ನಾನು ಹೇಗೆ ಜೀರ್ಣಿಸಿಕೊಳ್ಳಲಿ? ಅದನ್ನು ನೆನಸಿಕೊಂಡರೆ ಮೈ ನಡುಕ ಬರುತ್ತದೆ. ನಿಮ್ಮ ಜೊತೆ ಬದುಕ ಬೇಕು ಎನ್ನುವ ಆಸೆಗೆ ಬಿದ್ದು ವರುಗೆ ಮೋಸ ಮಾಡಲಾ ಅಥವಾ ಸ್ನೇಹಿತೆಗೆ ಬೇಸರ ಆಗುತ್ತದೆ ಎಂದು ನಿಮ್ಮನ್ನು ತ್ಯಾಗ ಮಾಡಿ ದಡ್ಡಿ ಎನಿಸಿಕೊಳ್ಳಲಾ’ ಎಂದು ಹರ್ಷನಿಗೆ ಭುವಿ ಕೇಳಿದಳು. ಆಗಲೇ ಪೊಲೀಸರು ಬಂದಾಗಿತ್ತು. ಹೀಗಾಗಿ, ಪೊಲೀಸರ ಜತೆ ಹರ್ಷ ತೆರಳಿದ್ದಾನೆ.

ಪ್ರೀತಿ ನಿವೇದನ ನಂತರ ಭುವಿಗೆ ಪ್ರತಿಕ್ರಿಯೆ ನೀಡೋಕೆ ಹರ್ಷ ಸಮಯ ನೀಡಿದ್ದಾನೆ. ಆಕೆ, ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?

Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು