ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

ಕಾಶ್ಮೀರದಲ್ಲಿ ‘ರಾಕ್​ಸ್ಟಾರ್​’ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ
ರಣಬೀರ್​-ರಿಷಿ
Follow us
| Edited By: Rajesh Duggumane

Updated on: Nov 12, 2021 | 9:52 PM

ರಣಬೀರ್​ ಕಪೂರ್​ (Rishi Kapoor ) ನಟನೆಯ ‘ರಾಕ್​ಸ್ಟಾರ್​’ ಸಿನಿಮಾದ (Rockstar) ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಎ.ಆರ್​. ರೆಹಮಾನ್ (AR Rahman)​ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು. ಸಿನಿಮಾದ ಹಾಡುಗಳನ್ನು ಕೇಳಿ ಜನರು ಇಷ್ಟಪಟ್ಟಿದ್ದರು. ಸಿನಿಮಾ ರಿಲೀಸ್​ ಆಗಿ ನವೆಂಬರ್​ 11ಕ್ಕೆ 10 ವರ್ಷ ತುಂಬಿದೆ. ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರೂ ರಣಬೀರ್​ ಅವರಿಗೆ ಶುಭಾಶಯ ತಿಳಿಸಿದ್ದರು. ಎ.ಆರ್.​ ರೆಹಮಾನ್​, ರಣಬೀರ್​ ಕಪೂರ್​, ಸಿನಿಮಾ ನಿರ್ದೇಶಕ ಇಮ್ತಿಯಾಜ್​ ಅಲಿ ಮತ್ತು ನಟಿ ಸಂಜನಾ ಸಂಘಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಖುಷಿ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಈ ಸಿನಿಮಾದ ಹಾಡುಗಳು ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ಗೆ ಕೊಂಚವೂ ಇಷ್ಟವಾಗಿರಲಿಲ್ಲ. ಈ ಮಾತನ್ನು ಸ್ವತಃ ಎ.ಆರ್​. ರೆಹಮಾನ್​​ ಬಾಯ್ಬಿಟ್ಟಿದ್ದಾರೆ.

‘ಕಾಶ್ಮೀರದಲ್ಲಿ ರಾಕ್​ಸ್ಟಾರ್​ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಿಷಿ ಕಪೂರ್​ಗೆ ಕೇಳಿಸಿದ್ದರು. ಆದರೆ, ಅವರಿಗೆ ಕೊಂಚವೂ ಇಷ್ಟವಾಗಲಿಲ್ಲ. ಒಂದಲ್ಲ ಇಡೀ ಆಲ್ಬಮ್​ ಅವರ ಮನಸ್ಸಿಗೆ ಹತ್ತಿರವಾಗಲೇ ಇಲ್ಲ ಎಂದಿದ್ದಾರೆ’ ರೆಹ್ಮಾನ್​.

‘ನನಗೆ ಏನು ಅರ್ಥವಾಗುತ್ತಿಲ್ಲ. ನನಗೆ ಈ ಹಾಡುಗಳು ಏನು ಎಂಬುದು ತಿಳಿಯುತ್ತಿಲ್ಲ ಎಂದು ರಿಷಿ ಹೇಳಿದ್ದರು. ಆಗ ನಾನು ಏನು ಕಂಪೋಸ್​ ಮಾಡಬೇಕು ಎಂದುಕೊಂಡಿದ್ದೆನೋ ಅದನ್ನು ಮಾಡಿಲ್ಲ. ಹೊಸದನ್ನು ಮಾಡೋಕೆ ಹೋದಾಗ ಹುಟ್ಟಿದ್ದು ‘ನಾದಾನ್​ ಪರಿಂದೆ..’ ಹಾಡು. ರಿಷಿ ಅವರಿಂದ ಹಾಡು ಉತ್ತಮವಾಗಿದೆ ಎನ್ನುವ ಕಮೆಂಟ್​ ಪಡೆಯಬೇಕಿತ್ತು’ ಎಂದಿದ್ದಾರೆ ರೆಹಮಾನ್​.

‘ರಾಕ್​ಸ್ಟಾರ್’​ ಸಿನಿಮಾ 2011ರಲ್ಲಿ ತೆರೆಗೆ ಬಂದಿತ್ತು. ಕಾಲೇಜ್​ಗೆ ತೆರಳುವ ಸಾಮಾನ್ಯ ವಿದ್ಯಾರ್ಥಿ ಜನಾರ್ಧನ್ (ರಣಬೀರ್​). ಆತನಲ್ಲಿ ಕೋಪ ಹುಟ್ಟಿಕೊಳ್ಳುತ್ತದೆ. ರಾಕ್​ಸ್ಟಾರ್​ ಆಗುತ್ತಾನೆ. ತುಂಬಾನೇ ಖ್ಯಾತಿ ಸಿಗುತ್ತದೆ. ಈ ಸಿನಿಮಾದಲ್ಲಿ ಬರೋಬ್ಬರಿ 14 ಹಾಡುಗಳಿವೆ. ​ ‘ನಾದಾನ್​ ಪರಿಂದೆ..’ ‘ಜೋ ಭಿ ಮೇ.. ’ ‘ಸದಾ ಹಕ್​.. ’ ಮೊದಲಾದ ಹಾಡುಗಳು ಕೇಳುಗರಿಗೆ ಇಷ್ಟವಾದವು.

ಇದನ್ನೂ ಓದಿ: ಪ್ರೀತಿ ಒಪ್ಪಿಕೊಂಡ ಆಲಿಯಾ ಭಟ್​-ರಣಬೀರ್​ ಕಪೂರ್​; ದೀಪಾವಳಿ ಹಬ್ಬದಂದು ಗುಡ್​ ನ್ಯೂಸ್​

ಮದುವೆ ದಿನಾಂಕ ಮುಂದೂಡಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಈ ನಿರ್ಧಾರಕ್ಕಿದೆ ಮುಖ್ಯ ಕಾರಣ

ತಾಜಾ ಸುದ್ದಿ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ