ಟ್ರೋಲ್​ ಆಗುವ ಈ ಗಾಯಕಿ ಬಗ್ಗೆ ನಿಮಗೆಷ್ಟು ಗೊತ್ತು? ಇವರ ಖಾತೆಯಲ್ಲಿವೆ ಹಿಟ್​ ಸಾಂಗ್ಸ್​, ಪ್ರತಿಷ್ಠಿತ ಅವಾರ್ಡ್ಸ್​

Jyoti Nooran: ತಮ್ಮ ವಿಶೇಷವಾದ ಕಂಠದ ಮೂಲಕ ಗಮನ ಸೆಳೆದ ಈ ಗಾಯಕಿಗೆ ಹಿಂದಿ​ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಬಾಲಿವುಡ್​ನಲ್ಲಿ ಹಲವು ಹಿಟ್​ ಗೀತೆಗಳನ್ನು ಹಾಡಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ.

ಟ್ರೋಲ್​ ಆಗುವ ಈ ಗಾಯಕಿ ಬಗ್ಗೆ ನಿಮಗೆಷ್ಟು ಗೊತ್ತು? ಇವರ ಖಾತೆಯಲ್ಲಿವೆ ಹಿಟ್​ ಸಾಂಗ್ಸ್​, ಪ್ರತಿಷ್ಠಿತ ಅವಾರ್ಡ್ಸ್​
ಗಾಯಕಿ ಜ್ಯೋತಿ ನೂರಾ
Follow us
TV9 Web
| Updated By: ಮದನ್​ ಕುಮಾರ್​

Updated on:Nov 12, 2021 | 4:33 PM

ಟ್ರೋಲ್​ ಪೇಜ್​ಗಳಲ್ಲಿ, ಕಾಮಿಡಿ ಮೀಮ್​ಗಳಲ್ಲಿ ಈ ಗಾಯಕಿಯನ್ನು ಎಲ್ಲರೂ ನೋಡಿರುತ್ತಾರೆ. ವಿಚಿತ್ರವಾಗಿ ಹಾಡುವ ಇವರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ಇವರನ್ನು ರೋಸ್ಟ್​ ಮಾಡಿರುವ ಹಲವಾರು ವಿಡಿಯೋಗಳು ಯೂಟ್ಯೂಬ್​ನಲ್ಲಿ ಲಭ್ಯವಾಗಿವೆ. ಈ ಗಾಯಕಿ ಹೆಸರು ಜ್ಯೋತಿ ನೂರಾ (Jyoti Nooran). ಬಹುತೇಕರಿಗೆ ಇವರ ಟ್ರೋಲ್​ (Jyoti Nooran Troll) ವಿಡಿಯೋಗಳ ಬಗ್ಗೆ ಮಾತ್ರ ಗೊತ್ತು. ಆದರೆ ಜ್ಯೋತಿಯ ಪ್ರತಿಭೆ ಕೂಡ ಮೆಚ್ಚುವಂತಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಗಾಯಕಿಯ ಕಂಠ ಎಂದರೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ (A R Rahman)​ ಅವರಿಗೂ ಇಷ್ಟ! ಜ್ಯೋತಿ ಗಾಯನಕ್ಕೆ ಹಲವು ಪ್ರಶಸ್ತಿ ಕೂಡ ಸಿಕ್ಕಿವೆ. ಜ್ಯೋತಿ ಮೂಲತಃ ಪಂಜಾಬ್​ ರಾಜ್ಯದ ಜಲಂಧರ್​ ನಗರದವರು. ಸಹೋದರಿ ಸುಲ್ತಾನಾ (Sultana Nooran) ಜೊತೆ ಸೇರಿ ಅವರು ಅನೇಕ ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಈ ಸಹೋದರಿಯರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಇವರ ಪ್ರತಿಭೆಯನ್ನು ಗುರುತಿಸಿದ ಎ.ಆರ್​. ರೆಹಮಾನ್​ ಅವರು ಮೊದಲ ಬಾರಿಗೆ ‘ಹೈವೇ’ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು. ಆಲಿಯಾ ಭಟ್​, ರಣದೀಪ್​ ಹೂಡಾ ನಟನೆಯ ‘ಹೈವೇ’ ಸಿನಿಮಾದ ‘ಪಟಾಕಾ ಗುಡ್ಡಿ..’ ಹಾಡಿಗೆ ಧ್ವನಿ ನೀಡಿದ್ದು ಇದೇ ಜ್ಯೋತಿ ನೂರಾ ಮತ್ತು ಸುಲ್ತಾನಾ ನೂರಾ. ಆ ಬಳಿಕ ಅನೇಕ ಬಾಲಿವುಡ್​ ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ.

‘ಪಟಾಕಾ ಗುಡ್ಡಿ..’ ಹಾಡಿಗಾಗಿ ಜ್ಯೋತಿ ಮತ್ತು ಸುಲ್ತಾನಾ ಅವರಿಗೆ 2014ರ ‘ಮಿರ್ಚಿ ಮ್ಯೂಸಿಕ್​ ಅವಾರ್ಡ್ಸ್​’ ಕಾರ್ಯಕ್ರಮದಲ್ಲಿ ‘ವರ್ಷದ ಅತ್ಯುತ್ತಮ ಗಾಯಕಿ’ ಪ್ರಶಸ್ತಿ ಸಿಕ್ಕಿತ್ತು. 2015 ಮತ್ತು 2017ರಲ್ಲಿ ಜ್ಯೋತಿ-ಸುಲ್ತಾನಾ ಅವರ ಎರಡು ಗೀತೆಗಳಿಗೆ ‘ಇಂಡಿ ಪಾಪ್​ ಸಾಂಗ್​ ಆಫ್​ ದಿ ಇಯರ್​’ ಪ್ರಶಸ್ತಿ ಸಿಕ್ಕಿತ್ತು.

ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನ ಮಾಡಿದ್ದ ‘ಹೈವೇ’ ಸಿನಿಮಾದಲ್ಲಿ ‘ಪಟಾಕಾ ಗುಡ್ಡಿ…’ ಹಾಡಿಗೆ ಧ್ವನಿ ನೀಡಿದ ಬಳಿಕ ಜ್ಯೋತಿ ಮತ್ತು ಸುಲ್ತಾನಾಗೆ ಹಲವು ಆಫರ್​ಗಳು ಹರಿದುಬರಲು ಆರಂಭಿಸಿದವು. ತನು ವೆಡ್ಸ್​ ಮನು ರಿಟರ್ನ್ಸ್​, ಸಿಂಗ್​ ಈಸ್​ ಬ್ಲಿಂಗ್​, ಧಮ್​ ಲಗಾಕೆ ಹೈಶಾ, ಸುಲ್ತಾನ್​, ದಂಗಲ್​, ಟೈಗರ್​ ಜಿಂದಾ ಹೈ, ಭಾರತ್​ ಮುಂತಾದ ಸಿನಿಮಾಗಳಲ್ಲಿ ಜ್ಯೋತಿ ಹಾಡಿದ್ದಾರೆ.

ಜ್ಯೋತಿ ಅವರದ್ದು ಸಂಗೀತಗಾರರ ಕುಟುಂಬ. ಅವರ ತಂದೆ ಮತ್ತು ಅಜ್ಜ ಸೂಫಿ ಸಂಗೀತದಲ್ಲಿ ಪಳಗಿದವರು. ಬಾಲ್ಯದಲ್ಲಿ ಇರುವಾಗಲೇ ಜ್ಯೋತಿ ಮತ್ತು ಸುಲ್ತಾನಾ ಅವರು ತಂದೆಯ ಬಳಿ ಸಂಗೀತ ಕಲಿತರು. ತಮ್ಮ ವಿಶೇಷವಾದ ಕಂಠದ ಮೂಲಕ ಗಮನ ಸೆಳೆದ ಜ್ಯೋತಿಗೆ ಹಿಂದಿ​ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಕೆಲವು ಗೀತೆಗಳಿಗೆ ಅವರ ಧ್ವನಿಯೇ ಸೂಕ್ತ ಎಂಬಷ್ಟರಮಟ್ಟಿಗೆ ಅವರು ತಮ್ಮತನವನ್ನು ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ:

ರವಿ ಅಣ್ಣ: ಉತ್ತರ ಕನ್ನಡದ ಬಡ ಯುವಕನನ್ನು ಟ್ರೋಲ್​ ಮಾಡುವ ಮುನ್ನ ಕುಟುಂಬದ ಕಷ್ಟವನ್ನೊಮ್ಮೆ ನೋಡಿ

‘ಈಗ ನಾನು ಕಲ್ಲಾಗಿದ್ದೇನೆ’; ಟ್ರೋಲ್​ ಮಾಡುವವರಿಗೆ ತಿರುಗೇಟು ಕೊಟ್ಟ ನಟಿ ರಶ್ಮಿಕಾ ಮಂದಣ್ಣ

Published On - 4:21 pm, Fri, 12 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್