Nykaa IPO: ಅಬ್ಬಬ್ಬಾ.. ನೈಕಾ ಕಂಪನಿಯಲ್ಲಿ ಹೂಡಿಕೆ ಮಾಡಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಗಳಿಸಿದ್ದು ಇಷ್ಟೊಂದಾ?
ಕತ್ರಿನಾ ಕೈಫ್ 2018ರಲ್ಲಿ ನೈಕಾ ಸಂಸ್ಥೆ ಮೇಲೆ 2.02 ಕೋಟಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಈ ಮೂಲಕ ಕಂಪೆನಿಯ ಷೇರುಗಳನ್ನು ಅವರು ಪಡೆದುಕೊಂಡಿದ್ದರು. ಆಲಿಯಾ ಕೂಡ ಈ ಸಂಸ್ಥೆ ಮೇಲೆ ಹೂಡಿಕೆ ಮಾಡಿದ್ದರು.
ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರ ಬೇರೆಬೇರೆ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗುವ ಆಫರ್ ಸಿಗುತ್ತದೆ. ಇದಕ್ಕೆ ದೊಡ್ಡ ಮೊತ್ತದ ಹಣವನ್ನು ಅವರು ಜೇಬಿಗೆ ಇಳಿಸಿಕೊಳ್ಳುತ್ತಾರೆ. ಇದರ ಜತೆಗೆ ಸಿನಿಮಾದಿಂದ ಹಾಗೂ ಬೇರೆಬೇರೆ ಜಾಹೀರಾತುಗಳಿಂದ ಬರುವ ದೊಡ್ಡ ಮೊತ್ತದ ಸಂಭಾವನೆಯನ್ನು ಸುರಕ್ಷಿತ ಜಾಗ ನೋಡಿ ಹೂಡಿಕೆ ಮಾಡೋಕೆ ನಟ-ನಟಿಯರು ಆದ್ಯತೆ ಕೊಡುತ್ತಾರೆ. ಈಗ ಬಾಲಿವುಡ್ (Bollywood) ನಟಿಯರಾದ ಕತ್ರಿನಾ ಕೈಫ್ (Katrina Kaif) ಹಾಗೂ ಆಲಿಯಾ ಭಟ್ (Alia Bhatt) ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಫಾಲ್ಗುಣಿ ನಾಯರ್ (Falguni Nayar) ಒಡೆತನದ ನೈಕಾ (Nykaa) ಬ್ರ್ಯಾಂಡ್ ಮೇಲೆ ಈ ನಟಿಯರು ಹೂಡಿಕೆ ಮಾಡಿದ್ದರು. ಇದರಿಂದ ಇವರು ದೊಡ್ಡ ಮೊತ್ತದ ಹಣ ಬಾಚಿಕೊಂಡಿದ್ದಾರೆ.
ನೈಕಾ ಐಪಿಒಗೆ (Initial public offering) ಬಿಡ್ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. 1085-1125 ರೂಪಾಯಿಗೆ ಐಪಿಒ ಬೆಲೆಯನ್ನು ಇದಕ್ಕೆ ನಿಗದಿ ಮಾಡಲಾಗಿತ್ತು. ಒಂದು ಲಾಟ್ನಲ್ಲಿ 12 ಷೇರುಗಳಿದ್ದವು. ಈಗ ಈ ಐಪಿಒ BSE ಹಾಗೂ NSEನಲ್ಲಿ ಲಿಸ್ಟಿಂಗ್ ಆಗಿದ್ದು, ಐಪಿಒ ಮೊತ್ತಕ್ಕಿಂತ ದ್ವಿಗುಣ ಬೆಲೆಯಲ್ಲಿ ಈ ಷೇರು ವಹಿವಾಟು ನಡೆಸುತ್ತಿದೆ. ಈ ಕಂಪನಿ ಮೇಲೆ ಕತ್ರಿನಾ ಹಾಗೂ ಆಲಿಯಾ ಆರಂಭದಲ್ಲೇ ಹೂಡಿಕೆ ಮಾಡಿದ್ದರು. ಇದರಿಂದ ಇವರಿಗೆ ಭಾರೀ ಮೊತ್ತದ ಲಾಭ ಆಗಿದೆ.
ಕತ್ರಿನಾ ಕೈಫ್ 2018ರಲ್ಲಿ ನೈಕಾ ಸಂಸ್ಥೆ ಮೇಲೆ 2.02 ಕೋಟಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಈ ಮೂಲಕ ಕಂಪೆನಿಯ ಷೇರುಗಳನ್ನು ಅವರು ಪಡೆದುಕೊಂಡಿದ್ದರು. ಆಲಿಯಾ ಭಟ್ ಅವರಿಗೆ ನೈಕಾ ಮೇಲೆ ಹೆಚ್ಚು ಭರವಸೆ ಇತ್ತು. ಈ ಕಾರಣಕ್ಕೆ ಅವರು 2020ರ ಜುಲೈನಲ್ಲಿ 4.95 ಕೋಟಿ ಬಂಡವಾಳ ಹೂಡಿದ್ದರು ಎಂದು ವರದಿ ಆಗಿದೆ. ಈಗ ಇವರು ಹೂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಹಣವನ್ನು ಇವರು ಬಾಚಿಕೊಂಡಿದ್ದಾರೆ ಎಂದು ಕೆಲ ತಜ್ಞರು ಲೆಕ್ಕಾಚಾರ ನೀಡಿದ್ದಾರೆ. ಇದರ ಪ್ರಕಾರ ಕತ್ರಿನಾ ಕೈಫ್ ಹೂಡಿಕೆ ಮೊತ್ತ ಈಗ 22 ಕೋಟಿ ತಲುಪಿದರೆ, ಆಲಿಯಾ ಭಟ್ ಹೂಡಿಕೆ 54 ಕೋಟಿ ರೂಪಾಯಿ ತಲುಪಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಗುಟ್ಟಾಗಿ ನಡೆಯಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ರೋಕಾ ಕಾರ್ಯಕ್ರಮ?; ಹಿಂದೂ ಹಬ್ಬದಂದು ಅಭಿಮಾನಿಗಳಿಗೆ ಸರ್ಪ್ರೈಸ್
Alia Bhatt: ಕರಣ್ ಜೋಹರ್ ಕೇಳಿದ ಸಿಂಪಲ್ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್; ಇಲ್ಲಿದೆ ವಿಡಿಯೋ