Alia Bhatt: ಕರಣ್​ ಜೋಹರ್​ ಕೇಳಿದ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

Karan Johar: ಶೂಟಿಂಗ್​ ಬಿಡುವಿನಲ್ಲಿ ಕರಣ್​ ಜೋಹರ್​ ಅವರು ಆಲಿಯಾ ಭಟ್​ಗೆ ಕೆಲವು ರ‍್ಯಾಪಿಡ್​ ಫೈರ್​ ಪ್ರಶ್ನೆಗಳನ್ನು ಕೇಳಿದ್ದಾರೆ. ಹಾಗಂತ ಆ ಪ್ರಶ್ನೆಗಳೇನು ಕಷ್ಟಕರ ಆಗಿರಲಿಲ್ಲ. ಅವುಗಳಿಗೆ ಆಲಿಯಾ ತಡವರಿಸುತ್ತಲೇ ಉತ್ತರಿಸಿದ್ದಾರೆ.

Alia Bhatt: ಕರಣ್​ ಜೋಹರ್​ ಕೇಳಿದ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ
ಆಲಿಯಾ ಭಟ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 12, 2021 | 1:12 PM

ನಟಿ ಆಲಿಯಾ ಭಟ್ (Alia Bhatt)​ ಶೀಘ್ರವೇ ಹಸೆಮಣೆ ಏರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಅವರು ಸಿನಿಮಾ ಕೆಲಸಗಳ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅವರು ರಣಬೀರ್ ಕಪೂರ್​ ಜೊತೆ ಪ್ರೀತಿ-ಪ್ರೇಮದಲ್ಲಿ ಮುಳುಗಿದ್ದಾರೆ. ಅವರ ರಿಲೇಷನ್​ಶಿಪ್​ನಿಂದಾಗಿ ಸಿನಿಮಾ ಕೆಲಸಗಳಿಗೇನೂ ಧಕ್ಕೆ ಆಗಿಲ್ಲ. ಸದ್ಯ ಆಲಿಯಾ ನಟನೆಯ ‘ಆರ್​ಆರ್​ಆರ್​’ ಮತ್ತು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಅಲ್ಲದೇ ಹಲವು ಚಿತ್ರಗಳ ಶೂಟಿಂಗ್​ನಲ್ಲೂ ಅವರು ಬ್ಯುಸಿ ಆಗಿದ್ದಾರೆ. ಆ ಪೈಕಿ ಕರಣ್​ ಜೋಹರ್​ (Karan Johar) ನಿರ್ದೇಶನ ಮಾಡುತ್ತಿರುವ ‘ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್​ ವೇಳೆ ಆಲಿಯಾಗೆ ಕರಣ್​ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಿಗೆ ಉತ್ತರಿಸಲು ಆಲಿಯಾ ಕೊಂಚ ತಡವರಿಸಿದ್ದಾರೆ.

ರಾತ್ರಿ ವೇಳೆ ನಡೆಯುತ್ತಿದ್ದ ಶೂಟಿಂಗ್​ ಬಿಡುವಿನಲ್ಲಿ ಕರಣ್​ ಜೋಹರ್​ ಅವರು ಆಲಿಯಾಗೆ ಕೆಲವು ರ‍್ಯಾಪಿಡ್​ ಫೈರ್​ ಪ್ರಶ್ನೆಗಳನ್ನು ಕೇಳಿದ್ದಾರೆ. ಹಾಗಂತ ಆ ಪ್ರಶ್ನೆಗಳೇನು ಕಷ್ಟಕರ ಆಗಿರಲಿಲ್ಲ. ‘ನಾವು ಈಗ ಯಾವ ಸಿನಿಮಾದ ಶೂಟಿಂಗ್​ ಮಾಡುತ್ತಿದ್ದೇವೆ’ ಎಂದು ಕರಣ್​ ಕೇಳಿದರು. ‘ರಾಖಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಎಂದು ಉತ್ತರಿಸುವಾಗ ಆಲಿಯಾ ತಡವರಿಸಿದರು. ‘ಈಗ ರಾಖಿ (ರಣವೀರ್​ ಸಿಂಗ್​) ಎಲ್ಲಿದ್ದಾರೆ’ ಎಂಬ ಪ್ರಶ್ನೆಗೂ ಆಲಿಯಾ ತಡವರಿಸುತ್ತಲೇ ಉತ್ತರಿಸಿದರು. ‘ಇವೆಲ್ಲ ತುಂಬ ಸರಳ ಪ್ರಶ್ನೆಗಳು. ನೀವು ಯಾಕೆ ಹೀಗೆ ಮಾಡುತ್ತಿದ್ದೀರಿ’ ಎಂದು ಕರಣ್​ ಕೇಳಿದರು. ‘ನನಗೆ ಈ ರೀತಿ ರ‍್ಯಾಪಿಡ್​ ಫೈರ್​ ಇಷ್ಟ ಆಗುವುದಿಲ್ಲ’ ಎಂದು ನಗುತ್ತಲೇ ತಮ್ಮ ಕಷ್ಟ ಹೇಳಿಕೊಂಡರು ಆಲಿಯಾ.

ಕರಣ್​ ಜೋಹರ್​ ಅವರು ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದಲ್ಲಿ ನೂರಾರು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ ಅನುಭವ ಹೊಂದಿದ್ದಾರೆ. ರ‍್ಯಾಪಿಡ್​ ಫೈರ್​ ಪ್ರಶ್ನೆಗಳನ್ನು ಕೇಳುವಲ್ಲಿ ಅವರು ಫೇಮಸ್​. ಸದ್ಯ ಆಲಿಯಾ ಮತ್ತು ಕರಣ್​ ಜೋಹರ್​ ನಡುವಿನ ಈ ಪ್ರಶ್ನೋತ್ತರದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇತ್ತೀಚೆಗೆ ತಾವು ಹೆಚ್ಚು ಇಷ್ಟಪಟ್ಟ ಹಾಡು ಮತ್ತು ಸಿನಿಮಾ ಯಾವುದು ಎಂಬುದನ್ನೂ ಆಲಿಯಾ ತಿಳಿಸಿದ್ದಾರೆ. ಕರಣ್​ ಜೋಹರ್​ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ನೋಡಿ ತಾವು ಖುಷಿಪಟ್ಟಿರುವುದಾಗಿ ಆಲಿಯಾ ಹೇಳಿದ್ದಾರೆ.

View this post on Instagram

A post shared by Karan Johar (@karanjohar)

‘ರಾಖಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ‘ಗಲ್ಲಿ ಬಾಯ್​’ ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಷನ್​ ಮೋಡಿ ಮಾಡಿತ್ತು. ಶೀಘ್ರದಲ್ಲೇ ರಣವೀರ್​ ಸಿಂಗ್​ ಜೊತೆಗೂ ಈ ರೀತಿ ರ‍್ಯಾಪಿಡ್​ ಫೈರ್​ ವಿಡಿಯೋ ಮಾಡುವುದಾಗಿ ಕರಣ್​ ಹೇಳಿದ್ದಾರೆ.

ಇದನ್ನೂ ಓದಿ:

ಮದುವೆ ದಿನಾಂಕ ಮುಂದೂಡಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಈ ನಿರ್ಧಾರಕ್ಕಿದೆ ಮುಖ್ಯ ಕಾರಣ

ಹಲವು ಸೂಟ್​ಕೇಸ್​ಗಳಲ್ಲಿ ಒಳಉಡುಪು ತುಂಬಿಕೊಂಡು ವಿದೇಶಕ್ಕೆ ಹೋಗುವ ಕರಣ್​ ಜೋಹರ್​; ಏನಿದು ವಿಚಿತ್ರ ವರ್ತನೆ?

Published On - 12:53 pm, Fri, 12 November 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ