ರವಿ ಅಣ್ಣ: ಉತ್ತರ ಕನ್ನಡದ ಬಡ ಯುವಕನನ್ನು ಟ್ರೋಲ್​ ಮಾಡುವ ಮುನ್ನ ಕುಟುಂಬದ ಕಷ್ಟವನ್ನೊಮ್ಮೆ ನೋಡಿ

TV9 Digital Desk

| Edited By: ಮದನ್​ ಕುಮಾರ್​

Updated on:Oct 07, 2021 | 12:41 PM

ಮಗನ ಪರಿಸ್ಥಿತಿ ಕಂಡು ರವಿ ತಾಯಿ ಕಣ್ಣೀರು ಹಾಕಿದ್ದಾರೆ. ‘ದಯವಿಟ್ಟು ನನ್ನ ಮಗನನ್ನು ಅಪಹಾಸ್ಯ ಮಾಡಬೇಡಿ. ನಾವು ಬಡವರು’ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.

ರವಿ ಅಣ್ಣ: ಉತ್ತರ ಕನ್ನಡದ ಬಡ ಯುವಕನನ್ನು ಟ್ರೋಲ್​ ಮಾಡುವ ಮುನ್ನ ಕುಟುಂಬದ ಕಷ್ಟವನ್ನೊಮ್ಮೆ ನೋಡಿ
ತಾಯಿ ಜೊತೆ ರವಿ ಅಣ್ಣ

Follow us on


ಸೋಶಿಯಲ್​ ಮೀಡಿಯಾ ಇಂದು ಸಖತ್​ ಪ್ರಭಾವಶಾಲಿ ಆಗಿದೆ. ಜನಸಾಮಾನ್ಯ ವ್ಯಕ್ತಿಗಳು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್​ ಆಗಿ ಬಿಡುತ್ತಾರೆ. ಈ ಹಿಂದೆ ಅನೇಕ ವ್ಯಕ್ತಿಗಳು ರಾತ್ರೋರಾತ್ರಿ ಫೇಮಸ್​ ಆದ ಉದಾಹರಣೆಗಳಿವೆ. ಅದೇ ರೀತಿ ಉತ್ತರ ಕನ್ನಡದ ರವಿ ಅಣ್ಣ ಎಂಬ ಯುವಕ ಕೂಡ ಕಳೆದೊಂದು ವರ್ಷದಿಂದ ಜನಪ್ರಿಯತೆ ಪಡೆದುಕೊಂಡಿದ್ದರು. ಮನಬಂದಂತೆ ಹಾಡುವ ಅವರನ್ನು ಕೆಲವು ಇಷ್ಟಪಟ್ಟಿದ್ದರು. ಆದರೆ ಟ್ರೋಲ್​ ಮಾಡಿದವರ ಸಂಖ್ಯೆಯೇ ಹೆಚ್ಚು. ಇತ್ತೀಚೆಗಂತೂ ಟ್ರೋಲ್​ಗಳ ಕಾಟ ಮಿತಿಮೀರಿತ್ತು. ಆ ಬಗ್ಗೆ ರವಿ ಅಣ್ಣನ ಕುಟುಂಬ ಬೇಸರ ವ್ಯಕ್ತಪಡಿಸಿದೆ. ವಿಡಿಯೋ ಮೂಲಕ ತಮ್ಮ ಕಷ್ಟದ ಕಥೆಯನ್ನು ರವಿ ಹೇಳಿಕೊಂಡಿದ್ದಾರೆ.

ರವಿ ಬೋರೋಡಿ ಎಂಬುದು ಅವರ ಹೆಸರು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ರವಿ ಅಣ್ಣ ಎಂಬ ಹೆಸರಿನಿಂದ ಅವರು ಫೇಮಸ್​ ಆಗಿದ್ದಾರೆ. ಅವರನ್ನು ಟ್ರೋಲ್​ ಮಾಡುವವರು ಒಮ್ಮೆ ಅವರ ಮನೆ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲೇಬೇಕು. ಗುಡಿಸಲಿನಂತಹ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ. ಕುಮುಟದ ಹೋಟೆಲ್​ನಲ್ಲಿ ರವಿ ಕೆಲಸ ಮಾಡುತ್ತಿದ್ದಾರೆ. ಬಡತನದ ಕಾರಣದಿಂದ ಅವರಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಹಾಡುವಾಗ ಉಚ್ಚಾರಣೆ ತಪ್ಪಾಗುತ್ತದೆ. ಅದನ್ನೇ ಇಟ್ಟುಕೊಂಡು ಜನರು ಟ್ರೋಲ್​ ಮಾಡುತ್ತಿರುವುದು ರವಿ ಕುಟುಂಬದವರಿಗೆ ನೋವು ತರಿಸಿದೆ.

‘ನನಗೆ ಸಂಗೀತದಲ್ಲಿ ಆಸಕ್ತಿ ಇದೆ. ಹಾಡುವುದು ತುಂಬಾ ಇಷ್ಟ. ನನ್ನ ಹಾಡನ್ನು ಜನರು ಕೆಟ್ಟದಾಗಿ ಟ್ರೋಲ್​ ಮಾಡಿದ್ದಾರೆ. ನಾನು ತಿದ್ದಿಕೊಳ್ಳುತ್ತೇನೆ. ಅಕ್ಷರ ಕಲಿತುಕೊಂಡು ಹಾಡುತ್ತೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಯಾರೂ ನೋವು ಕೊಡಬೇಡಿ ಪ್ಲೀಸ್​. ಕಾಮಿಡಿ ಮಾಡಿದರೆ ಬೇಜಾರಿಲ್ಲ. ಆದರೆ ಟ್ರೋಲ್​ ಮಾಡಬೇಡಿ. ನಿಮ್ಮ ಕೆಟ್ಟ ಟ್ರೋಲ್​ ನೋಡಿಕೊಂಡು ನಮ್ಮ ಊರಿನವರು ಮಾತನಾಡುತ್ತಿದ್ದಾರೆ’ ಎಂದು ರವಿ ಅಣ್ಣ ಅಳಲು ತೋಡಿಕೊಂಡಿದ್ದಾರೆ.

‘ರವಿ ನಮ್ಮ ಊರಿನ ಬಡಕುಟುಂಬದ ಹುಡುಗ. ಅವರಿನ್ನು ಯಾರೂ ಟ್ರೋಲ್​ ಮಾಡಬೇಡಿ. ಯಾಕೆಂದರೆ ಅವನ ತಂಗಿ, ತಮ್ಮ ಕಾಲೇಜಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಅಪಹಾಸ್ಯ ಆಗುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ. ನೀವು ಸಪೋರ್ಟ್​​ ಮಾಡದೇ ಇದ್ದರೂ ಪರವಾಗಿಲ್ಲ. ಆದರೆ ಅವನಿಗೆ ಆಸೆ ತೋರಿಸಿ ಅಟ್ಟಕ್ಕೆ ಏರಿಸಬೇಡಿ. ಅವರ ಮನೆ ಪರಿಸ್ಥಿತಿ ನೋಡಿ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

‘ಕುಮಟಾದಲ್ಲಿ ಕೆಲಸ ಮಾಡುತ್ತಿರುವ ರವಿಗೆ ಅನುಭವ ಕಮ್ಮಿ. ಅವರ ಮನೆಯವರೆಲ್ಲ ಕೂಲಿ ಕೆಲಸ ಮಾಡುತ್ತಾರೆ. ನೋಡಿದರೆ ಬೇಜಾರು ಎನಿಸುತ್ತದೆ. ಅವನು ಬೆಳೆದರೆ ನಮಗೆ ಖುಷಿ ಆಗುತ್ತದೆ. ಟ್ರೋಲ್​ನಿಂದ ಅವರ ಕುಟುಂಬಕ್ಕೆ ನೋವು ಕೊಡಬೇಡಿ’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮಗನ ಪರಿಸ್ಥಿತಿ ಕಂಡು ರವಿ ತಾಯಿ ಕಣ್ಣೀರು ಹಾಕಿದ್ದಾರೆ. ‘ದಯವಿಟ್ಟು ನನ್ನ ಮಗನನ್ನು ಅಪಹಾಸ್ಯ ಮಾಡಬೇಡಿ. ನಾವು ಬಡವರು. ಅವನಿಗೆ ಪ್ರೋತ್ಸಾಹ ಮಾಡುವಷ್ಟು ಶಕ್ತಿ ನಮ್ಮಲ್ಲಿ ಇಲ್ಲ. ನೀವು ಟ್ರೋಲ್​ ಮಾಡುವುದರಿಂದ ಅವನ ಒಡಹುಟ್ಟಿದವರಿಗೆ ಅವಮಾನ ಆಗುತ್ತಿದೆ. ಅವಮಾನವನ್ನು ಮನಸ್ಸಿಗೆ ಹಚ್ಚಿಕೊಂಡು ರವಿ ಏನಾದರೂ ಮಾಡಿಕೊಂಡರೆ ಅದನ್ನು ಸಹಿಸುವ ಶಕ್ತಿ ನಮಗಿಲ್ಲ’ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

(ಮನನೊಂದು ಮಾತನಾಡಿದ ರವಿ ತಾಯಿ)

(ಸೋಶಿಯಲ್​ ಮೀಡಿಯಾದಲ್ಲಿ ರವಿ ಅಣ್ಣ ಟ್ರೋಲ್​)

ಇದನ್ನೂ ಓದಿ:

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಕಾಟ ತಾಳಲಾರದೆ WWE ಕುಸ್ತಿಪಟು ದಿ ಗ್ರೇಟ್ ಖಲಿ ಮಾಡಿದ್ದೇನು ಗೊತ್ತಾ?

Ranu Mondal: ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada