‘ಕೋಪ ಕಡಿಮೆ ಮಾಡಿಕೊಂಡಿದೀನಿ, ಪ್ರೀತ್ಸೋರ ಮುಂದೆ ಮಗು ತರ ಆಗಿರ್ತೀನಿ’; ಹುಚ್ಚ ವೆಂಕಟ್

Huchcha Venkat: ಹುಚ್ಚ ವೆಂಕಟ್ ಅವರು ಮತ್ತೆ ಜನರೆದುರು ಬಂದಿದ್ದಾರೆ. ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ ಅವರು, ಮುಂದಿನ ಚಿತ್ರವನ್ನು ಮಾಡಿಯೇ ಮಾಡುತ್ತೇನೆ ಎಂದಿದ್ದಾರೆ.

‘ಕೋಪ ಕಡಿಮೆ ಮಾಡಿಕೊಂಡಿದೀನಿ, ಪ್ರೀತ್ಸೋರ ಮುಂದೆ ಮಗು ತರ ಆಗಿರ್ತೀನಿ’; ಹುಚ್ಚ ವೆಂಕಟ್
ಹುಚ್ಚ ವೆಂಕಟ್


ಕಳೆದ ಕೆಲವು ಸಮಯದಿಂದ ತೆರೆಮರೆಯಲ್ಲಿದ್ದ ಹುಚ್ಚ ವೆಂಕಟ್ ಮತ್ತೆ ಜನರೆದುರು ಬಂದಿದ್ದಾರೆ. ತಮಗೆ ಸಿನಿಮಾವೊಂದೇ ಗೊತ್ತಿರೋದು ಎಂದಿರುವ ಅವರು, ಮುಂದೆ ಚಿತ್ರವನ್ನು ಮಾಡಿಯೇ ಮಾಡುತ್ತೇನೆ ಎಂದಿದ್ದಾರೆ. ಕೆಲ ಕಾಲ ತೆರೆಮರೆಯಲ್ಲಿದ್ದ ಸಂದರ್ಭವನ್ನು ಭಾವುಕವಾಗಿಯೇ ನೆನಪಿಸಿಕೊಂಡ ಅವರು, ತಂದೆ ತೀರಿಕೊಂಡ ಸುದ್ದಿಯನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಲಾಕ್​ಡೌನ್​ನಿಂದ ಮನೆಯವರನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯಿತು ಎಂದಿದ್ದಾರೆ. ಹಳೆಯ ಘಟನೆಗಳ ಬಗ್ಗೆ ಕೇಳಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಅದನ್ನು ನೆನಪಿಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ. ಮದುವೆಯ ಕುರಿತು ಮಾತನಾಡಿದ ಅವರು, ಮದುವೆ ಬೇಡ ಎನ್ನಿಸಿದೆ ಎಂದಿದ್ದಾರೆ. ಮೊದಲು ಬಂದವರು ನನ್ನನ್ನು ಅಪಾರ್ಥ ಮಾಡಿಕೊಂಡರು. ಕೋಪ ಕಡಿಮೆ ಮಾಡಿಕೊಂಡಿದ್ದೇನೆ. ಪ್ರೀತಿ ಅಂತ ಬಂದಾಗ ನಾನು ಮಗುವಾಗಿರುತ್ತೇನೆ. ಮುಂದೆ ಸಿನಿಮಾ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ. 

ಸಂಪೂರ್ಣ ಬದಲಾದ ಅವತಾರದಲ್ಲಿ ವೆಂಕಟ್:
ವೆಂಕಟ್ ಮಾತಿನಲ್ಲಿ ಅವರು ಬದಲಾಗಿದ್ದು ಕಾಣುತ್ತಿತ್ತು. ಎಲ್ಲಾ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದ ಅವರು, ಜನರ ಪ್ರೀತಿಗೆ ಧನ್ಯವಾದ ಸಲ್ಲಿಸಿದರು. ಬಹಳ ಬದಲಾಗಿದ್ದೀರಿ, ಮೊದಲಿನಂತೆ ಇಲ್ಲ ಎಂದಿದ್ದಕ್ಕೆ, ‘‘ಇಲ್ಲಾ. ತಪ್ಪು ಮಾಡುವವರ ಮುಂದೆ ಹಾಗಿರ್ತೀನಿ. ನಮ್ಮನ್ನು ಪ್ರೀತಿಸುವವರ ಮುಂದೆ ಮಗುವಿನ ರೀತಿ ಇರ್ತೀನಿ’’ ಎಂದಿದ್ದಾರೆ. ಈ ಹಿಂದೆ ಕೆಲವು ಘಟನೆಗಳಿಂದ ನನ್ನ ವರ್ತನೆ ಹಾಗಿತ್ತು. ಈಗ ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ನಾನೇಕೆ ಕೋಪಗೊಳ್ಳಲಿ’’ ಎಂದು ವೆಂಕಟ್ ಮರುಪ್ರಶ್ನಿಸಿದ್ದಾರೆ. ಅಲ್ಲದೇ ನಾನು ಮೊದಲಿನಿಂದ ಮಗು ತರವೇ ಇದ್ದೇನೆ, ಮುಂದೆಯೂ ಇರುತ್ತೇನೆ. ಜನರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ. ನಾನು ಪ್ರತೀ ಮನೆಯ ಹುಡುಗ ಎಂದಿದ್ದಾರೆ ವೆಂಕಟ್.

ಮುಂದಿನ ಚಿತ್ರದ ತಯಾರಿ ಹೇಗೆ ಎಂದು ವಿವರಿಸಿದ ವೆಂಕಟ್:
ಮುಂದಿನ ಚಿತ್ರ ‘ತಿಕ್ಲ ಹುಚ್ಚ ವೆಂಕಟ್’ ಅನ್ನು ಮಾಡಿಯೇ ಮಾಡುತ್ತೇನೆ ಎಂದಿರುವ ವೆಂಕಟ್, ಅದನ್ನು ಆನ್​​ಲೈನ್ ಮಾಧ್ಯಮಕ್ಕೆ ಹಾಗೂ ಚಿತ್ರಮಂದಿರಗಳಿಗೆ ಎರಡಕ್ಕೂ ಆಗುವಂತೆ ಮಾಡುತ್ತೇನೆ. ಮಿನಿಮಮ್ ಬಜೆಟ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ. ನಮ್ಮ ತಂದೆಯವರ ಆಸೆಯಂತೆ ಚಿತ್ರ ಮಾಡುತ್ತೇನೆ ಎಂದಿದ್ದಾರೆ.

ವೆಂಕಟ್ ಸದ್ಯ ಯಾವೆಲ್ಲಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ?
ಸದ್ಯ ಯಾವೆಲ್ಲಾ ಚಿತ್ರಗಳಲ್ಲಿ ಅತಿಥಿ ಪಾತ್ರನಿರ್ವಹಿಸಿದೆ ಎಂಬುದನ್ನು ಅವರು ಹಂಚಿಕೊಂಡಿದ್ದು, ಜೈಜಗದೀಶ್ ಅವರೊಂದಿಗೆ ‘ಯಾನ’, ‘ಮಾಯಾಬಜಾರ್’, ಎಸ್ ನಾರಾಯಣ್ ಅವರ ‘ನವಮಿ’, ‘ಅಂತಿಮ ಸತ್ಯ’ ಈ ಎಲ್ಲಾ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಖಾಸಗಿ ಚಾನೆಲ್​ನಲ್ಲಿ ‘ಲೈಫ್ ಓಕೆ’ ಎಂಬ ಶೋದಲ್ಲಿ ಕಾಣಿಸಿಕೊಂಡಿದ್ದೇನೆ ಎಂದಿದ್ದಾರೆ ಹುಚ್ಚ ವೆಂಕಟ್. ಜನರು ಶಾರ್ಟ್ ಫಿಲ್ಮ್​ಗೆ, ಫಿಲ್ಮ್​ಗೆ ಬಂದು ಕೇಳುತ್ತಿದ್ದಾರೆ. ಅದನ್ನು ಮಾಡುತ್ತಿದ್ದೇನೆ. ಸಿನಿಮಾವೊಂದೇ ನನಗೆ ಗೊತ್ತಿರೋದು. ನಾನು ಜನರಿಗೆ ದುಡ್ಡನ್ನು ಡಿಮ್ಯಾಂಡ್ ಮಾಡಿಲ್ಲ. ಅವರು ಪ್ರೀತಿಯಿಂದ ಕೊಡುತ್ತಾರೆ. ಎಂದಿದ್ದಾರೆ ವೆಂಕಟ್.

ವೆಂಕಟ್ ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಪುಂಡಾಟ, ಬೆಂಡೆತ್ತಿದ ಕೊಡಗು ಜನತೆ  

Keerthy Suresh: ಕೀರ್ತಿ ಸುರೇಶ್​ಗೆ ಕೊವಿಡ್ ಪಾಸಿಟಿವ್; ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ನಟಿ

Published On - 6:50 pm, Tue, 11 January 22

Click on your DTH Provider to Add TV9 Kannada