ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಪುಂಡಾಟ, ಬೆಂಡೆತ್ತಿದ ಕೊಡಗು ಜನತೆ
ಸಾರ್ವಜನಿಕ ಸ್ಥಳದಲ್ಲಿ ಹುಚ್ಚನ ರೀತಿ ವರ್ತಿಸಿ ಪುಂಡಾಟ ಮೆರೆದಿದ್ದಕ್ಕೆ ಹುಚ್ಚ ವೆಂಕಟ್ ನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಲ್ಲೆಸೆದು ಹುಚ್ಚಾಟ ನಡೆಸುತ್ತಿದ್ದ. ಕಾರಿನ ಗ್ಲಾಸ್ ಒಡೆದು ಪುಂಡನಂತೆ ವರ್ತಿಸುತ್ತಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ನನ್ನು ರೊಚ್ಚಿಗೆದ್ದ ಸಾರ್ವಜನಿಕರು ನಡು ರಸ್ತೆಯಲ್ಲೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಹುಚ್ಚ ವೆಂಕಟ್ ಬೀದಿ ಬೀದಿ ಅಲ್ಲೆಯುತ್ತಿದ್ದ. ಇದೀಗ ಕೊಡಗಿನಲ್ಲೂ ನಡು ಬೀದಿಯಲ್ಲೇ ಕಿರಿಕ್ ಮಾಡಿಕೊಂಡಿದ್ದಾನೆ. ಇನ್ನು […]
ಸಾರ್ವಜನಿಕ ಸ್ಥಳದಲ್ಲಿ ಹುಚ್ಚನ ರೀತಿ ವರ್ತಿಸಿ ಪುಂಡಾಟ ಮೆರೆದಿದ್ದಕ್ಕೆ ಹುಚ್ಚ ವೆಂಕಟ್ ನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಲ್ಲೆಸೆದು ಹುಚ್ಚಾಟ ನಡೆಸುತ್ತಿದ್ದ. ಕಾರಿನ ಗ್ಲಾಸ್ ಒಡೆದು ಪುಂಡನಂತೆ ವರ್ತಿಸುತ್ತಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ನನ್ನು ರೊಚ್ಚಿಗೆದ್ದ ಸಾರ್ವಜನಿಕರು ನಡು ರಸ್ತೆಯಲ್ಲೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಹುಚ್ಚ ವೆಂಕಟ್ ಬೀದಿ ಬೀದಿ ಅಲ್ಲೆಯುತ್ತಿದ್ದ. ಇದೀಗ ಕೊಡಗಿನಲ್ಲೂ ನಡು ಬೀದಿಯಲ್ಲೇ ಕಿರಿಕ್ ಮಾಡಿಕೊಂಡಿದ್ದಾನೆ. ಇನ್ನು ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಹುಚ್ಚ ವೆಂಕಟ್ ಮೇಲೆ ಐದು ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡು, ಬಳಿಕ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
Published On - 4:03 pm, Fri, 30 August 19