Keerthy Suresh: ಕೀರ್ತಿ ಸುರೇಶ್​ಗೆ ಕೊವಿಡ್ ಪಾಸಿಟಿವ್; ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ನಟಿ

Covid 19: ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​ಗೆ ಕೊವಿಡ್ ದೃಢಪಟ್ಟಿದೆ. ಈ ಕುರಿತು ಟ್ವಿಟರ್​ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Keerthy Suresh: ಕೀರ್ತಿ ಸುರೇಶ್​ಗೆ ಕೊವಿಡ್ ಪಾಸಿಟಿವ್; ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ನಟಿ
ಕೀರ್ತಿ ಸುರೇಶ್

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​ಗೆ (Keerthy Suresh) ಕೊವಿಡ್ ದೃಢಪಟ್ಟಿದೆ. ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ‘‘ನನಗೆ ಕೊವಿಡ್ ಕಾಣಿಸಿಕೊಂಡಿದ್ದು, ಸೌಮ್ಯ ಲಕ್ಷಣಗಳಿವೆ’’ ಎಂದಿದ್ದಾರೆ. ದೇಶದಲ್ಲಿ ಕೊವಿಡ್ ತೀವ್ರ ಪ್ರಮಾಣದಲ್ಲಿ ಏರುತ್ತಿದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡ ಸೋಂಕು ತಗುಲಿದೆ ಎಂದು ನಟಿ ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲಾ ಅಭಿಮಾನಿಗಳಿಗೆ ಸೋಂಕನ್ನು ನಿರ್ಲಕ್ಷಿಸದಂತೆ ಕರೆ ನೀಡಿರುವ ಕೀರ್ತಿ, ‘‘ಎಲ್ಲರೂ ಮುನ್ನೆಚ್ಚರಿಕೆಗಳನ್ನು ಪಾಲಿಸಿ. ಒಂದು ವೇಳೆ ಇನ್ನೂ ಲಸಿಕೆ ಪಡೆದಿಲ್ಲ ಎಂದರೆ, ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ. ಇದರಿಂದ ಸೋಂಕಿನ ಪರಿಣಾಮ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ತೀವ್ರತರ ಸೋಂಕಿನಿಂದ ಪಾರಾಗಬಹುದು’’ ಎಂದು ನಟಿ ಬರೆದುಕೊಂಡಿದ್ದಾರೆ.

ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕೀರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಟಿಯ ಪೋಸ್ಟ್​ಗೆ ಅಭಿಮಾನಿಗಳು ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಕೀರ್ತಿ ಸುರೇಶ್ ಟ್ವೀಟ್ ಇಲ್ಲಿದೆ:

ಕೀರ್ತಿ ಸುರೇಶ್ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೀರ್ತಿ ಅಭಿನಯದ ಚಿತ್ರಗಳು ತೆರೆಕಂಡಿದ್ದವು. ರಜಿನಿಕಾಂತ್ ಅಭಿನಯದ ‘ಅಣ್ಣಾಥೆ’, ಮೋಹನ್​ಲಾಲ್ ಸೇರಿದಂತೆ ಖ್ಯಾತ ತಾರೆಯರು ಕಾಣಿಸಿಕೊಂಡಿದ್ದ ‘ಮರಕ್ಕಾರ್: ಅರಬ್ಬಿ ಕಡಲಿಂಟೆ ಸಿಂಹಮ್’ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದವು.

ಕೀರ್ತಿ ಬತ್ತಳಿಕೆಯಲ್ಲಿ ಸದ್ಯ ಐದು ಚಿತ್ರಗಳಿದ್ದು, ಅದರಲ್ಲಿ ‘ಸಾನಿ ಕಾಯಿಧಾಮ್’ ಚಿತ್ರೀಕರಣ ಮುಗಿಸಿದ್ದಾರೆ. ‘ಸರ್ಕಾರಿ ವಾರು ಪಾಟ’, ‘ಭೋಲಾ ಶಂಕರ್’ ‘ವಾಶಿ’, ‘ದಸರಾ’ ಚಿತ್ರದ ಕೆಲಸಗಳು ನಡೆಯುತ್ತಿವೆ. ಮಹೇಶ್ ಬಾಬು, ಚಿರಂಜೀವಿ ಮೊದಲಾದ ಖ್ಯಾತ ತಾರೆಯರೊಂದಿಗೆ ಈ ಚಿತ್ರಗಳಲ್ಲಿ ಕೀರ್ತಿ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ:

ನಮ್ಮ ಗುರುತನ್ನು ಸಾಬೀತುಪಡಿಸಲು ಬಟ್ಟೆ ಬಿಚ್ಚಿ ಎಂದರು: ತ್ರಿಪುರಾದಲ್ಲಿ ಬಂಧನಕ್ಕೊಳಗಾದ ತೃತೀಯ ಲಿಂಗಿಗಳಿಂದ ದೂರು

Saina Nehwal: ‘ನನ್ನ ಮಗಳು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ; ನೀವೇನು ಮಾಡಿದ್ದೀರಿ?’ ನಟ ಸಿದ್ಧಾರ್ಥ್​ಗೆ ಸೈನಾ ತಂದೆಯ ನೇರ ಪ್ರಶ್ನೆ

Published On - 5:42 pm, Tue, 11 January 22

Click on your DTH Provider to Add TV9 Kannada