‘ಕನ್ನಡತಿ’ ಭುವಿಗೆ ಎದುರಾಯ್ತು ಹೊಸ ತಲೆನೋವು; ವರುಧಿನಿಗೆ ಗೊತ್ತಾಗಲಿದೆ ಆ ಸತ್ಯ?

ಭುವಿ ಮತ್ತು ವರುಧಿನಿ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಇಬ್ಬರೂ ಮೊದಲಿನಿಂದಲೂ ಆಪ್ತರಾಗಿದ್ದಾರೆ. ಆದರೆ, ಹರ್ಷನ ವಿಚಾರದಲ್ಲಿ ಇವರ ಗೆಳೆತನದಲ್ಲಿ ಬಿರುಕು ಮೂಡುವ ಸೂಚನೆ ಸಿಕ್ಕಿದೆ.

‘ಕನ್ನಡತಿ’ ಭುವಿಗೆ ಎದುರಾಯ್ತು ಹೊಸ ತಲೆನೋವು; ವರುಧಿನಿಗೆ ಗೊತ್ತಾಗಲಿದೆ ಆ ಸತ್ಯ?
ವರು-ಭುವಿ

‘ಕನ್ನಡತಿ’ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಹುಟ್ಟು ಹಾಕುತ್ತಿದೆ. ಈ ಧಾರಾವಾಹಿ ನಿತ್ಯ ಹೊಸಹೊಸ ಟ್ವಿಸ್ಟ್​ ಪಡೆದುಕೊಂಡು ಸಾಗುತ್ತಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಕೆಲ ವಿಚಾರಗಳು ಪ್ರಮುಖ ಘಟ್ಟ ತಲುಪಿವೆ. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಿದ್ದಾಳೆ. ‘ನಿಮ್ಮ ಮನೆಯ ಸೊಸೆ ಆಗೋಕೆ ನನಗೆ ಇಷ್ಟ’ ಎಂದು ಹರ್ಷನ ತಾಯಿ ರತ್ನಮಾಲಾ ಎದುರು ಹೇಳಿಕೊಂಡಿದ್ದಾಳೆ ಭುವಿ. ಇಬ್ಬರ ಮದುವೆ ಯಾವಾಗ ನೆರವೇರಲಿದೆ ಎನ್ನುವ ಕುತೂಹಲ ಸದ್ಯದ್ದು. ಈ ಮಧ್ಯೆ ಭುವನೇಶ್ವರಿಗೆ ಒಂದು ತಲೆನೋವ ಶುರುವಾಗಿದೆ. ಇದರಿಂದ ಹೇಗೆ ಹೊರಬರಬೇಕು ಎನ್ನುವ ಚಿಂತೆಯಲ್ಲಿ ಅವಳಿದ್ದಾಳೆ.

ಭುವಿ ಮತ್ತು ವರುಧಿನಿ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಇಬ್ಬರೂ ಮೊದಲಿನಿಂದಲೂ ಆಪ್ತರಾಗಿದ್ದಾರೆ. ಆದರೆ, ಹರ್ಷನ ವಿಚಾರದಲ್ಲಿ ಇವರ ಗೆಳೆತನದಲ್ಲಿ ಬಿರುಕು ಮೂಡುವ ಸೂಚನೆ ಸಿಕ್ಕಿದೆ. ಹರ್ಷನನ್ನು ವರುಧಿನಿ ಪ್ರೀತಿ ಮಾಡುತ್ತಿದ್ದಾಳೆ. ಆದರೆ, ಇದನ್ನು ಹರ್ಷ ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ಆಕೆ ದಿನದಿಂದ ದಿನಕ್ಕೆ ಬದಲಾಗುತ್ತಿದ್ದಾಳೆ. ಹರ್ಷನನ್ನು ಪಡೆಯಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾಳೆ. ಆದರೆ, ಆಕೆಗೆ ಭುವಿಯ ಪ್ರೀತಿ ವಿಚಾರ ತಿಳಿದಿಲ್ಲ. ಒಂದೊಮ್ಮೆ ಹರ್ಷ-ಭುವಿ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ತಿಳಿದರೆ ಆಕೆ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಕುತೂಹಲ ಮೂಡಿದೆ.

ಹರ್ಷನನ್ನು ಪ್ರೀತಿಸುತ್ತಿರುವ ವಿಚಾರವನ್ನು ಭುವಿ ಯಾರ ಬಳಿಯೂ ಹೇಳಿಕೊಂಡಿಲ್ಲ. ಆದರೆ, ಭುವಿ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ವರುಗೆ ತಿಳಿದು ಹೋಗಿದೆ. ಮದುವೆ ಆಗುವಂತೆ ವರುಧಿನಿಗೆ ಭುವಿ ಒತ್ತಾಯ ಮಾಡಿದ್ದಾಳೆ. ಈ ವೇಳೆ ವರು ಈ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ‘ನೀನು ಯಾರನ್ನೋ ಪ್ರೀತಿಸುತ್ತಿದ್ದೀಯಾ ಎನ್ನುವ ವಿಚಾರ ನನಗೆ ಗೊತ್ತಾಗಿದೆ. ನನ್ನ ಬಳಿ ಅದನ್ನು ಹೇಳಿಕೊಳ್ಳೋಕೆ ಏನು? ನನ್ನಿಂದ ಯಾಕೆ ಅದನ್ನು ಮುಚ್ಚಿಟ್ಟೆ? ನೀನು ಯಾರನ್ನು ಪ್ರೀತಿಸುತ್ತಿದ್ದೀಯಾ ಎನ್ನುವ ವಿಚಾರ ನನಗೆ ಈಗಲೇ ತಿಳಿಯಬೇಕು’ ಎಂದು ವರುಧಿನಿ ಪಟ್ಟು ಹಿಡಿದಿದ್ದಾಳೆ. ಇದನ್ನು ಕೇಳಿ ಭುವಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ತಿಳಿದಿಲ್ಲ.

ವರುಗೆ ಈ ವಿಚಾರ ತಿಳಿದರೆ ಏನು ಕಥೆ? ಆಕೆಯನ್ನು ಹೇಗೆ ಸಮಾಧಾನ ಮಾಡಬೇಕು ಎನ್ನುವ ಚಿಂತೆಯಲ್ಲಿ ಭೂವಿ ಇದ್ದಾಳೆ. ಮುಂದೆ ಏನಾಗುತ್ತದೆ ಎಂಬುದು ಸದ್ಯದ ಕುತೂಹಲ. ಮತ್ತೊಂದು ಕಡೆ ಸಾನಿಯಾಗೆ ಭುವಿ-ಹರ್ಷನ ಪ್ರೀತಿ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ‘ಕನ್ನಡತಿ’ ಸಾನಿಯಾ ಪಾತ್ರದಿಂದ ಹೊರ ಬಂದ ರಮೋಲಾ; ಇದಕ್ಕಿದೆ ಮಹತ್ವದ ಕಾರಣ

ಹಣ ಉಳಿಸಲು ಅಭಿಮಾನಿಗಳಿಗೆ ಐದು ಕಿವಿಮಾತು ಹೇಳಿದ ‘ಕನ್ನಡತಿ’ ನಟಿ ರಂಜನಿ ರಾಘವನ್​

Click on your DTH Provider to Add TV9 Kannada