ಹೊಸ ಫೋಟೋ ಹಂಚಿಕೊಂಡ ನಟಿ; ಕಂಕುಳ ಕೂದಲ ನೋಡಿ ಕೆಟ್ಟದಾಗಿ ಕಮೆಂಟ್ ಹಾಕಿದ ಅಭಿಮಾನಿಗಳು
ತಿಲೋತಮಾ ಅವರು ನಗುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕೈಯನ್ನು ತಲೆಯ ಹಿಂಭಾಗದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಕಂಕುಳ ಮೇಲೆ ಕೆಲವರ ದೃಷ್ಟಿ ನೆಟ್ಟಿದೆ.
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಆ್ಯಕ್ಟೀವ್ ಆಗಿರೋಕೆ ಇಷ್ಟಪಡುತ್ತಾರೆ. ಆದರೆ, ಅವರು ಮಾಡುವ ಸಣ್ಣಸಣ್ಣ ತಪ್ಪುಗಳಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಅವರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾವುದೋ ಒಂದು ವಿಚಾರ ಇಟ್ಟುಕೊಂಡು ಟೀಕಿಸಲಾಗುತ್ತದೆ. ಈಗ ಬಾಲಿವುಡ್ (Bollywood) ನಟಿಯೊಬ್ಬರಿಗೆ ಹಾಗೆಯೇ ಆಗಿದೆ. ಹಾಕಿದ ಒಂದು ಫೋಟೋಗೆ ಅವರು ಸಾಕಷ್ಟು ಕೆಟ್ಟ ಟೀಕೆಗಳನ್ನು ಎದುರಿಸಿದ್ದಾರೆ. ಅವರ ಅಭಿಮಾನಿಗಳೇ ಈ ಫೋಟೋಗೆ ನಾನಾ ರೀತಿಯ ಟೀಕೆಗಳನ್ನು ಮಾಡಿದ್ದಾರೆ.
ತಿಲೋತಮಾ ಶೋಮೆ ಅವರು ‘ಮಾನ್ಸೂನ್ ವೆಡ್ಡಿಂಗ್’, ‘ಇಂಗ್ಲಿಷ್ ಮೀಡಿಯಮ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂಗ್ಲಿಷ್, ಹಿಂದಿ, ಬೆಂಗಾಲಿ, ನೇಪಾಳಿ, ಪಂಜಾಬಿ ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೇಳಿಕೊಳ್ಳುವಂತಹ ಅಭಿಮಾನಿ ಬಳಗ ಇಲ್ಲ. ಇನ್ಸ್ಟ್ರಾಗ್ರಾಮ್ನಲ್ಲಿ ಅವರನ್ನು 92 ಸಾವಿರ ಜನರು ಹಿಂಬಾಲಿಸುತ್ತಿದ್ದಾರೆ. ಅವರು ಹಂಚಿಕೊಂಡ ಫೋಟೋ ಒಂದು ಈಗ ಸಾಕಷ್ಟು ಚರ್ಚೆ ಆಗುತ್ತಿದೆ.
ತಿಲೋತಮಾ ಅವರು ನಗುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕೈಯನ್ನು ತಲೆಯ ಹಿಂಭಾಗದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಕಂಕುಳ ಮೇಲೆ ಕೆಲವರ ದೃಷ್ಟಿ ನೆಟ್ಟಿದೆ. ‘ಕಂಕುಳ ಕೂದಲನ್ನು ತೆಗೆದಿಲ್ಲ, ಅದು ಕೆಟ್ಟದಾಗಿ ಕಾಣುತ್ತಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಬಹುತೇಕರು ಮಹಿಳೆಯರೇ ಇದ್ದಾರೆ.
‘ಕ್ಷಮಿಸಿ, ಇದು ಅಸಹ್ಯಕರವಾಗಿ ಕಾಣುತ್ತಿದೆ’ ಎಂದು ಮಹಿಳೆ ಒಬ್ಬರು ಕಮೆಂಟ್ ಹಾಕಿದ್ದಾರೆ. ಇನ್ನೂ ಅನೇಕರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ತಿಲೋತಮಾ ಪರ ವಹಿಸಿಕೊಂಡು ಬಂದಿದ್ದಾರೆ. ‘ಬೀದಿಯಲ್ಲಿ ನಡೆಯುವ ಆನೆಯು ಬೊಗಳುವ ನಾಯಿಗಳನ್ನು ಲೆಕ್ಕಿಸುವುದಿಲ್ಲ’ ಎಂದು ಹೇಳುವ ಮೂಲಕ ಅವರ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.
‘ಮಾನ್ಸೂನ್ ವೆಡ್ಡಿಂಗ್’ನಲ್ಲಿ ವಿಜಯ್ ರಾಜ್ ಎದುರು ಆಲಿಸ್ ಹೆಸರಿನ ಪಾತ್ರವನ್ನು ತಿಲೋತಮಾ ನಿರ್ವಹಿಸಿದ್ದರು. ‘ಸರ್’ ಚಿತ್ರದಲ್ಲಿಯೂ ಅವರ ನಟನೆ ಅದ್ಭುತವಾಗಿತ್ತು. ಕೆಲ ಪ್ರಶಸ್ತಿಗಳು ಕೂಡ ಅವರಿಗೆ ಒಲಿದಿವೆ. 2020ರಲ್ಲಿ ತೆರೆಗೆ ಬಂದ ‘ಅಂಗ್ರೇಜಿ ಮೀಡಿಯಂ’ ಚಿತ್ರದಲ್ಲಿ ತಿಲೋತಮಾ ಕಾಣಿಸಿಕೊಂಡಿದ್ದರು. ಆ ಬಳಿಕ ಯಾವುದೇ ಚಿತ್ರಗಳಲ್ಲೂ ಅವರು ನಟಿಸಿಲ್ಲ.
ಇದನ್ನೂ ಓದಿ: Divya Suresh: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?
ಅಪಘಾತ ಸಂಭವಿಸಿದ್ದು ಹೇಗೆ? ಟಿವಿ9ಗೆ ಎಲ್ಲವನ್ನೂ ವಿವರಿಸಿದ ದಿವ್ಯಾ ಸುರೇಶ್