ಅಪಘಾತ ಸಂಭವಿಸಿದ್ದು ಹೇಗೆ? ಟಿವಿ9ಗೆ ಎಲ್ಲವನ್ನೂ ವಿವರಿಸಿದ ದಿವ್ಯಾ ಸುರೇಶ್
ನಟಿ ದಿವ್ಯಾ ಸುರೇಶ್ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 8’ಕ್ಕೆ ಎಂಟ್ರಿ ಕೊಡುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಫಿನಾಲೆ ಪ್ರವೇಶಿಸುವ ಮೂಲಕ ದಿವ್ಯಾ ಸುರೇಶ್ ಜನಪ್ರಿಯತೆ ಹೆಚ್ಚಿತು.
ನಟಿ ಹಾಗೂ ಕನ್ನಡ ಬಿಗ್ ಬಾಸ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರು ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆ ಅಪಘಾತ ಸಂಭವಿಸಿದ್ದು ಹೇಗೆ? ಈಗ ಪರಿಸ್ಥಿತಿ ಹೇಗಿದೆ ಎಂಬುದನ್ನು ದಿವ್ಯಾ ಸುರೇಶ್ ಟಿವಿ9 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ. ‘ನಾನು ಕೊವಿಡ್ ಎರಡನೇ ಡೋಸ್ ಪಡೆದುಕೊಂಡು ಮನೆಗೆ ಮರಳುತ್ತಿದೆ. ಸ್ಕೂಟಿಯಲ್ಲಿ ನಾನೊಬ್ಬಳೆ ಇದ್ದೆ. ಈ ವೇಳೆ ಅಪಘಾತ ಸಂಭವಿಸಿದೆ. ಬೈಕ್ಗೆ ನಾಯಿ ಅಡ್ಡ ಬಂದಿದ್ದರಿಂದ ನಾನು ಬಿದ್ದೆ’ ಎಂದಿದ್ದಾರೆ ದಿವ್ಯಾ ಸುರೇಶ್. ನಟಿ ದಿವ್ಯಾ ಸುರೇಶ್ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 8’ಕ್ಕೆ ಎಂಟ್ರಿ ಕೊಡುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಫಿನಾಲೆ ಪ್ರವೇಶಿಸುವ ಮೂಲಕ ದಿವ್ಯಾ ಸುರೇಶ್ ಜನಪ್ರಿಯತೆ ಹೆಚ್ಚಿತು. ಮಂಜು ಪಾವಗಡ ಅವರ ಜತೆಗಿನ ಫ್ರೆಂಡ್ಶಿಪ್ ಮೂಲಕವೂ ಅವರು ಹೆಚ್ಚು ಸುದ್ದಿ ಆದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬರುತ್ತಿವೆ.
ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ
Divya Sures: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?