ಸಿನಿಮಾ ಸೆಲಿಬ್ರಿಟಿಗಳು ತಮ್ಮ ಸಂಗಾತಿಗೆ ಡಿವೋರ್ಸ್ ನೀಡಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದೇವೆ ಅನ್ನುವುದು ಹೊಸ ಟ್ರೆಂಡ್!

ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ ಅಂತ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೇಳುವುದು ಇತ್ತೀಚಿನ ನಾರ್ಮ್ ಆದಂತಿದೆ. ಇದು ತಮ್ಮನ್ನು ತಾವು ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಅಥವಾ ತಿಪ್ಪೆ ಸಾರಿಸುವ ಕೆಲಸವೆಂದರೆ ಹೆಚ್ಚು ಸೂಕ್ತವಾದೀತು. ಪರಸ್ಪರ ಒಪ್ಪಿಗೆಯಿಲ್ಲದೆ ಬೇರೆಯವರ ಒಪ್ಪಿಗೆಯಿಂದ ಬೇರೆಯಾಗುತ್ತಾರೆಯೇ? ಇಂಥ ಪದ್ಧತಿಯನ್ನು ಆರಂಭಿಸಿದ ಕುಖ್ಯಾತಿ ಬಾಲಿವುಡ್ ನ ಮಿ. ಪರ್ಫೆಕ್ಷನಿಸ್ಟ್ ಆಮಿರ್ ಖಾನ್​ಗೆ ಸಲ್ಲುತ್ತದೆ!

Arun Belly

|

Jan 19, 2022 | 4:42 PM

ಸೆಲಿಬ್ರಿಟಿಗಳ ಮದುವೆ ಅದರಲ್ಲೂ ವಿಶೇಷವಾಗಿ ಸಿನಿಮಾ ತಾರೆಯರ ಮತ್ತು ಡಿವೋರ್ಸ್ () ಸದಾ ನಮ್ಮ ಕುತೂಹಲದ ಸಂಗತಿಗಳಾಗಿರುತ್ತವೆ. ಅವರ ಮೇಲೆ ಅತಿಯಾದ ಪ್ರೀತಿ ಮತ್ತು ಅಭಿಮಾನವನ್ನು ಇಟ್ಟುಕೊಂಡಿರುವುದರಿಂದ ಅವರ ಖಾಸಗಿ ಬದುಕಿನ ಬಗ್ಗೆಯೂ ನಾವು ಆಸಕ್ತಿ ತಳೆದಿರುತ್ತೇವೆ. ದಕ್ಷಿಣ ಭಾರತ ತಾರೆಯರ ಮದುವೆ ಮತ್ತು ನಿಶ್ಚಿತಾರ್ಥ ಮುರಿದು ಬೀಳುತ್ತಿರುವುದು ಸಾಮಾನ್ಯವಾಗುತ್ತಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪುತ್ರಿ ಐಶ್ವರ್ಯ ಮತ್ತು ತಮಿಳಿನ ಜನಪ್ರಿಯ ನಟ ಧನುಷ್ 18 ವರ್ಷಗಳ ದಾಂಪತ್ಯ ಬದುಕಿನ ಬೇರೆಯಾಗಿರುವ ನಿರ್ಧಾರ ಪ್ರಕಟಿಸಿದ್ದಾರೆ. ಒಂದೇ ಟ್ವೀಟನ್ನು ಶೇರ್ ಮಾಡಿಕೊಂಡಿರುವ ಅವರು ದೂರವಾಗುವ ಸಂದರ್ಭದಲ್ಲೂ ತಮ್ಮ ನಡುವಿನ ಹೊಂದಾಣಿಕೆಯನ್ನು ಪ್ರದರ್ಶಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ ಅಂತ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೇಳುವುದು ಇತ್ತೀಚಿನ ನಾರ್ಮ್ ಆದಂತಿದೆ. ಇದು ತಮ್ಮನ್ನು ತಾವು ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಅಥವಾ ತಿಪ್ಪೆ ಸಾರಿಸುವ ಕೆಲಸವೆಂದರೆ ಹೆಚ್ಚು ಸೂಕ್ತವಾದೀತು. ಪರಸ್ಪರ ಒಪ್ಪಿಗೆಯಿಲ್ಲದೆ ಬೇರೆಯವರ ಒಪ್ಪಿಗೆಯಿಂದ ಬೇರೆಯಾಗುತ್ತಾರೆಯೇ? ಇಂಥ ಪದ್ಧತಿಯನ್ನು ಆರಂಭಿಸಿದ ಕುಖ್ಯಾತಿ ಬಾಲಿವುಡ್ ನ ಮಿ. ಪರ್ಫೆಕ್ಷನಿಸ್ಟ್ ಆಮಿರ್ ಖಾನ್​ಗೆ ಸಲ್ಲುತ್ತದೆ!

ಬಹುಭಾಷಾ ನಟಿ ಸಮಂತಾ ರೂತ್ ಪ್ರಭು ಮತ್ತು ನಾಗ ಚೈತನ್ಯ ಅವರ ವೈವಾಹಿಕ ಬದುಕು ಕಳೆದ ವರ್ಷ ಗಾಂಧಿ ಜಯಂತಿಯಂದು ಕೊನೆಗೊಂಡಿತು. ಅವರು ಬೇರೆಯಾಗಲಿದ್ದ ವದಂತಿ ಅದಕ್ಕೂ ಮೊದಲೇ ಅಂದರೆ ಸುಮಾರು ಅರು ತಿಂಗಳಿಂದ ಚರ್ಚೆಯಾಗುತಿತ್ತು. ಅವರಿಬ್ಬರೂ ಅದನ್ನು ನಿರಾಕರಿಸುತ್ತಿದ್ದರು ಅನ್ನೋದು ಬೇರೆ ಸಂಗತಿ. ಅಂತಿಮವಾಗಿ ಅಕ್ಟೋಬರ್ 2, 2021 ರಂದು ಅಧಿಕೃತವಾಗಿ ಬೇರ್ಪಟ್ಟರು.

ರಜಿನಿಕಾಂತ್ ಅವರ ಇನ್ನೊಬ್ಬ ಮಗಳು ಸೌಂದರ್ಯ ಅವರ ದಾಂಪತ್ಯ ಸಹ ಬಹಳ ದಿನ ಬಾಳಲಿಲ್ಲ. ಉದ್ಯಮಿ ಅಶ್ವಿನಿ ಕುಮಾರ್ ಅವರನ್ನು 2010 ರಲ್ಲಿ ವರಿಸಿದ್ದ ಸೌಂದರ್ಯ 2017ರಲ್ಲಿ ಡಿವೋರ್ಸ್ ಪಡೆದುಕೊಂಡರು. ತಮಿಳು ಸಿನಿಮಾ ನಿರ್ದೇಶಕ ವಿಜಯ್ ಮತ್ತು ನಟಿ ಅಮಲಾ ಪೌಲ್ ಅವರ ವಿವಾಹವೂ ಕೇವಲ ಮೂರು ವರ್ಷಗಳಲ್ಲಿ ಕೊನೆಗೊಂಡಿತು.

ನಾಗಾರ್ಜುನ ಅವರ ಕಿರಿಯ ಮಗ ಅಖಿಲ್ ಅಕ್ಕಿನೇನಿ ಮತ್ತು ತೆಲಂಗಾಣದ ಖ್ಯಾತ ಉದ್ಯಮಿ ಜಿವಿಕೆ ರೆಡ್ಡಿ ಅವರ ಮಗಳು ಶ್ರಿಯಾ ಭೂಪಾಲ್ ನಿಶ್ಚಿತಾರ್ಥ ಮದುವೆಗೆ ಕೆಲ ತಿಂಗಳು ಮೊದಲು ಮುರಿದು ಬಿತ್ತು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕಲ್ಯಾಣ್ ಅವರ ದಾಂಪತ್ಯದಲ್ಲೂ ಬಿರುಕು ಮೂಡಿರುವ ಸಂಗತಿ ಕೇಳಿಬರುತ್ತಿದೆ.

ನಮ್ಮ ಕನ್ನಡದ ಹುಡುಗಿ ಮತ್ತು ‘ಪುಷ್ಪಂ’ ಚಿತ್ರದ ಭರ್ಜರಿ ಯಶಸ್ಸಿನಿಂದ ಆಕಾಶದಲ್ಲಿ ತೇಲಾಡುತ್ತಿರುವ ರಷ್ಮಿಕಾ ಮಂದಣ್ಣ ಸಹ 2018 ರಲ್ಲಿ ಕನ್ನಡದ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು.

ಇದನ್ನೂ ಓದಿ:   Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ

Follow us on

Click on your DTH Provider to Add TV9 Kannada