Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ

ಬೈನ ಮಹಿಳೆ ಮತ್ತು ಬಾಲಕಿಯೊಬ್ಬಳು ಮೇರಿ ರಾಣಿ ಹಿಂದಿ ಹಾಡಿಗೆ ಡ್ಯಾನ್ಸ್​ ಮಾಡಿದ ವಿಡಿಯೋ  ಇದಾಗಿದೆ. ಇನ್ಸ್ಟಾಗ್ರಾಮ್​ನಲ್ಲಿ ನೂರಾ ಫತೇಹಿ ವಿಡಿಯೋ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ.

Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ
ಮಹಿಳೆ ಮತ್ತು ಬಾಲಕಿ ಡ್ಯಾನ್ಸ್​ ಮಾಡುತ್ತಿರುವುದು
Follow us
TV9 Web
| Updated By: Pavitra Bhat Jigalemane

Updated on:Jan 19, 2022 | 11:40 AM

ಬಾಲಿವುಡ್​ ಬ್ಯೂಟಿ ನಟಿ ನೂರಾ​ ಫತೇಹಿ (Nora Fatehi)ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದುಬೈನ ಮಹಿಳೆ ಮತ್ತು ಬಾಲಕಿಯೊಬ್ಬಳು ಮೇರಿ ರಾಣಿ ಹಿಂದಿ ಹಾಡಿಗೆ ಡ್ಯಾನ್ಸ್​ ಮಾಡಿದ ವಿಡಿಯೋ  ಇದಾಗಿದೆ. ಇನ್ಸ್ಟಾಗ್ರಾಮ್​ನಲ್ಲಿ ನೂರಾ ಫತೇಹಿ ವಿಡಿಯೋ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ. 2020 ರಲ್ಲಿ ನೂರಾ​ ಫತೇಹಿ ಮೇರಿ ರಾಣಿ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಅದೇ ಹಾಡಿಗೆ ಈಗ ಮಹಿಳೆ ಮತ್ತು ಪುಟ್ಟ ಬಾಲಕಿ ಹೆಜ್ಜೆ ಹಾಕಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಮೂಲತಃ ಈ ವಿಡಿಯೋವನ್ನು ಸಾರಾ ಕಾರಿಟ್ (Sara Karrit)​ ಎನ್ನುವ ಕಂಟೆಂಟ್​ ಕ್ರಿಯೇಟರ್​ (Content Creator) ಒಬ್ಬರು ಹಂಚಿಕೊಂಡಿದ್ದು, ಎನರ್ಜಿ ಎಂದು ಕ್ಯಾಪ್ಷನ್​ ನೀಡಿದ್ದರು. ಇದನ್ನು ನೋಡಿ ನೂರಾ​ ಫತೇಹಿ ಮೆಚ್ಚಿಕೊಂಡಿದ್ದು, ರೀ ಶೇರ್​ ಮಾಡಿದ್ದಾರೆ.

View this post on Instagram

A post shared by Nora Fatehi (@norafatehi)

ವಿಡಿಯೋದಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿದ ಬಾಲಕಿ ಹಾಗೂ ಒಬ್ಬ ಮಹಿಳೆ ಮೇರಿ ರಾಣಿ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿರುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡ​ ನಟಿ ನೂರ್ ಫತೇಹಿ ಅಮೇಜಿಂಗ್​ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ 16 ಗಂಟೆಗಳಲ್ಲಿ 4.7 ಲಕ್ಷ ಲೈಕ್ಸ್​ ಗಳಿಸಿದ್ದು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ನೋರಾ ಫತೇಹಿ ಕೆನಡಾದ ನಟಿ, ರೂಪದರ್ಶಿ, ಡ್ಯಾನ್ಸರ್, ಗಾಯಕಿ ಮತ್ತು ನಿರ್ಮಾಪಕಿ. ಅವರು ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ರಾಣಿ ಹಾಡಿನಲ್ಲಿ ಗುರು ರಾಂದವನ್​ ಜತೆಗೆ ನೂರಾ ಫತೇಹಿ ಸಖತ್​ ಆಗಿ ಕಾಣಿಸಿಕೊಂಡಿದ್ದಾರೆ.  2020ರಲ್ಲಿ ಬಿಡುಗಡೆಯಾದ ಈ ಹಾಡು  700 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದು ವೈರಲ್​ ಆಗಿತ್ತು.

ಇದನ್ನೂ ಓದಿ:

ಭಾವೀ ಅಳಿಯನಿಗಾಗಿ 365 ಬಗೆಯ ತಿನಿಸುಗಳನ್ನು ತಯಾರಿಸಿ ಔತಣಕೂಟ ಆಯೋಜಿಸಿದ ಕುಟುಂಬ

Published On - 11:39 am, Wed, 19 January 22