ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿಯನ್ನು 365 ಬಗೆಯ ತಿನಿಸಿನ ಎದುರು ಕೂರಿಸಲಾಗಿದ್ದು, ಇಬ್ಬರೂ ಸಿಹಿಯೊಂದನ್ನು ತಿನಿಸುತ್ತಿರುವ ವಿಡಿಯೋ ಇದಾಗಿದೆ. ಈ ವಿಶೇಷ ಕಾರ್ಯಕ್ರಮದ ಬಗ್ಗೆ ಹುಡುಗಿಯ ತಾಯಿ ಮಾತನಾಡಿದ್ದು, ಭಾವೀ ಅಳಿಯ ಮತ್ತು ಮಗಳಿಗೆ ಈ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಕ್ಕೆ ಸಂತಸವಿದೆ. ಇದಕ್ಕೆ ಸಂಬಂಧಿಕರನ್ನೂ ಕೂಡ ಅಹ್ವಾನಿಸಲಾಗಿದೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಈ ಔತಣಕೂಟವನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದ್ದು, ಜೋಡಿಯು ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೀಗಾಗಿ ಹುಡುಗಿಯ ಅಜ್ಜಿ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಜ.14ರಂದು ಮಕರ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗಿದೆ. ಚಳಿಗಾಲದ ಅಂತ್ಯದ ದಿನವೆಂದು ಕರೆಯುವ ಸಂಕ್ರಾಂತಿಯನ್ನು ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಸೂರ್ಯ ಪಥದಲಿಸಿ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪುಣ್ಯ ಕಾಲವನ್ನು ಸಂಕ್ರಮಣ ಕಾಲ ಎನ್ನುತ್ತಾರೆ.
ಇದನ್ನೂ ಓದಿ:
ಐಫೋನ್ ರಿಂಗ್ಟೋನ್ ಶಬ್ದದಂತೆ ಧ್ವನಿ ಹೊರಡಿಸುವ ಗಿಳಿ: ವಿಡಿಯೋ ವೈರಲ್