ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ: 30 ಲಕ್ಷ ರೂ.ಗೆ ಬೇಡಿಕೆ

ಕಿರು ಚಿತ್ರ ನಿರ್ಮಿಸಲು ಹಣ ಬೇಕೆಂದು ಯುವಕನೊಬ್ಬ ತಾನು ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ಮೆಸೇಜ್​ ಮಾಡಿ 30 ಲಕ್ಷ ರೂ ಗೆ ಬೇಡಿಕೆ ಇಟ್ಟ ಘಟನೆ ನಡೆದಿದೆ. 24 ವರ್ಷದ ಪಿ. ಕೃಷ್ಣಪ್ರಸಾದ್​ ಎನ್ನುವ ಯುವಕ ಈ ನಕಲಿ ಕಿಡ್ನಾಪ್​ ನಾಟಕವಾಡಿದ್ದಾನೆ.

ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ: 30 ಲಕ್ಷ ರೂ.ಗೆ ಬೇಡಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 19, 2022 | 12:20 PM

ಚೆನ್ನೈ: ಕಿರು ಚಿತ್ರ ನಿರ್ಮಿಸಲು ಹಣ ಬೇಕೆಂದು ಯುವಕನೊಬ್ಬ ತಾನು ಕಿಡ್ನಾಪ್ (Kidnap)​ ಆಗಿದ್ದೇನೆ ಎಂದು ತಂದೆಗೆ ಮೆಸೇಜ್​ ಮಾಡಿ 30 ಲಕ್ಷ ರೂ ಗೆ ಬೇಡಿಕೆ ಇಟ್ಟ ಘಟನೆ ನಡೆದಿದೆ. 24 ವರ್ಷದ ಪಿ. ಕೃಷ್ಣಪ್ರಸಾದ್​ ಎನ್ನುವ ಯುವಕ ಈ ನಕಲಿ ಕಿಡ್ನಾಪ್ (Fake Kidnap)​ ನಾಟಕವಾಡಿದ್ದಾನೆ. ಕೃಷ್ಣಪ್ರಸಾದ್​ ತನ್ನ ಅಪಹರಣವಾಗಿದೆ ಎಂದು ತಂದೆಗೆ ಮೆಸೇಜ್​ ಮಾಡಿ 30 ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದನು. ಕೃಷ್ಣಪ್ರಸಾದ್​ ತಂದೆ ಪೆನ್ಸಿಲಾಯಾ ಚೆನ್ನೈನ ವಡಪಲನಿಯ ಉದ್ಯಮಿಯಾಗಿದ್ದು, ಮಗ ಕಾಣೆಯಾಗಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಚೆನ್ನೈ ನಗರ ಪೊಲೀಸರು (Chennai City Police) ಕೃಷ್ಣಪ್ರಸಾದ್​ನನ್ನು ಸಿಂಕದರಾಬಾದ್​ನಲ್ಲಿ ಪತ್ತೆ ಮಾಡಿ  ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ. 

ನ್ಯೂಸ್​ 18 ವರದಿಯ ಪ್ರಕಾರ, ಕೃಷ್ಣಪ್ರಸಾದ್​ ತಂದೆ ಜ.14ರಂದು ಪೊಲೀಸರಿಗೆ ದೂರು ನೀಡುವ ವೇಳೆ, ಆತ ಹಿಂದಿನ ದಿನ ಮಾಲ್​ಗೆ​ ತೆರಳಿದ್ದನು ಮತ್ತೆ ಮನೆಗೆ ಮರಳಲಿಲ್ಲ. ಮರುದಿನ ಫೋನ್​ಗೆ ನಿಮ್ಮ ಮಗನನ್ನು ಕಿಡ್ನಾಪ್​ ಮಾಡಲಾಗಿದೆ ಆತನನ್ನು ಬಿಡುಗಡೆ ಮಾಡಲು 30 ಲಕ್ಷ ರೂ . ಹಣ ನೀಡಿ ಎಂಬ ಸಂದೇಶ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಸೈಬರ್​ ಕ್ರೈಮ್​ ಪೊಲೀಸರ ತಂಡವನ್ನು ರಚಿಸಿದ್ದರು. ನಂತರ ಮೆಸೆಜ್​ ಕಳುಹಿಸಿದ ಮೊಬೈಲ್​ ಲೊಕೇಷನ್​ ಹುಡುಕುವ ಮೂಲಕ ಸಿಕಂದರಾಬಾದ್​ನಲ್ಲಿ ಕೃಷ್ಣ ಪ್ರಸಾದ್​ನನ್ನು ಪತ್ತೆ ಮಾಡಿದ್ದಾರೆ. ಆ ಬಳಿಕ ತಂದೆಯ ಒತ್ತಾಯದ ಮೇರೆಗೆ ಆತನಿಗೆ ಎಚ್ಚರಿಗೆ ನೀಡಿ ಪೊಲೀಸರು ಮನೆಗೆ ಕಳಿಹಿಸಿದ್ದಾರೆ.

ಮನೆಯಿಂದ ಹಣ ಪಡೆಯಲು ಅಥವಾ ತಮ್ಮ ಹೇಳಿಕೆಗಳನ್ನು ಈಡೇರಿಸಿಕೊಳ್ಳಲು ಈ ಹಿಂದೆಯೂ ಈ ರೀತಿಯ ನಕಲಿ ಅಪಹರಣ ಪ್ರಕರಣಗಳು ಸಾಕಷ್ಟು ನಡೆದಿವೆ.  ಈ ಹಿಂದೆ ಲುಧಿಯಾನದ ಅವಳಿ ಮಕ್ಕಳು ಸ್ನೇಹಿತರನ್ನು ಭೇಟಿಯಾಗಲು ಹೋದ ವೇಳೆ ತಮಾಷೆಗೆಂದು ತಾವು ಅಪಹರಣವಾಗಿದ್ದೇವೆ ಎಂದು ಕುಟುಂಬಕ್ಕೆ ತಿಳಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದ ಘಟನೆ ನಡೆದಿತ್ತು.

ಇದನ್ನೂ ಓದಿ:

Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ

Published On - 12:20 pm, Wed, 19 January 22