Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್ ಲೈವ್ನಲ್ಲೇ ಎದ್ದು ಡ್ಯಾನ್ಸ್ ಮಾಡಿದ ಪ್ಯಾನಲಿಸ್ಟ್
ರಿಪಬ್ಲಿಕ್ ಬಾಂಗ್ಲಾ ಚಾನೆಲ್ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ ಕಾರ್ಯಕ್ರಮದ ಚರ್ಚೆಯಲ್ಲಿ ಪ್ಯಾನಲಿಸ್ಟ್ ಒಬ್ಬರು ಮಾತನಾಡಲು ಅವಕಾಶ ಸಿಗಲಿಲ್ಲವೆಂದು ನೇರಪ್ರಸಾರದಲ್ಲೇ ಎದ್ದು ನಿಂತು ಡ್ಯಾನ್ಸ್ ಮಾಡಿದ್ದಾರೆ.
ಕೆಲವೊಮ್ಮೆ ಜನ ತಮ್ಮಡೆಗೆ ಇತರರು ಗಮನಹರಿಸಬೇಕೆಂದು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ. ಅಂತಹದ್ದೇ ಒಂದು ಘಟನೆ ಟಿವಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ನಡೆದಿದೆ. ರಿಪಬ್ಲಿಕ್ ಬಾಂಗ್ಲಾ (Republic Bangla) ಚಾನೆಲ್ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ ಕಾರ್ಯಕ್ರಮದ ಚರ್ಚೆಯಲ್ಲಿ ಪ್ಯಾನಲಿಸ್ಟ್ (Panelist) ಒಬ್ಬರು ಮಾತನಾಡಲು ಅವಕಾಶ ಸಿಗಲಿಲ್ಲವೆಂದು ನೇರಪ್ರಸಾರದಲ್ಲೇ ಎದ್ದು ನಿಂತು ಡ್ಯಾನ್ಸ್ (Dance) ಮಾಡಿದ್ದಾರೆ. ಇದು ಒಂದು ವರ್ಷದ ಹಳೆಯ ವಿಡಿಯೋ. ಆದರೆ ಈಗ ವೈರಲ್ ಆಗಿದೆ. ಎದ್ದು ನಿಂತು ಡ್ಯಾನ್ಸ್ ಮಾಡಿದ ಪ್ಯಾನಲಿಸ್ಟ್ ಅನ್ನು ಪರಿಸರವಾದಿ ರೋಶನಿ ಅಲಿ (Roshni Ali) ಎಂದು ಗುರುತಿಸಲಾಗಿದೆ. ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಬೇಕು ಎನ್ನುವ ಕುರಿತಾದ ಚರ್ಚೆಯ ವೇಳೆ ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಎದ್ದು ನಿಂತು ಡ್ಯಾನ್ಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
See what the participant in green kurti does when not given a fair chance to speak! ??? pic.twitter.com/M58kKkbpxB
— Elizabeth (@Elizatweetz) January 16, 2022
ರೋಶನಿ ಅಲಿ ಈ ಹಿಂದೆ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಪಟಾಕಿಯಿಂದ ವಾಯು ಮಾಲಿನ್ಯದಿಂದ ಕೊರೋನಾ ಸೋಂಕು ಹೆಚ್ಚುತ್ತದೆ ಎಂದು ಹೇಳಿದ್ದರು. ಇದೀಗ ವಿಡಿಯೋದಲ್ಲಿ ಡಿಬೇಟ್ ವೇಳೆ ಪಟಾಕಿಯನ್ನು ನಿಷೇಧಿಸಬೇಕು. ಅದು ಪರಿಸರಕ್ಕೆ ಮಾರಕವಾಗಿದೆ. ಅಲ್ಲದೆ ಕೊರೋನಾ ಹರಡಲೂ ಕಾರಣವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಬಯಸಿದ್ದರು. ಆದರೆ ಅವಕಾಶ ಸಿಗದೆ ಎದ್ದು ನಿಂತು ಡ್ಯಾನ್ಸ್ ಮಾಡಿದ್ದಾರೆ. ರೋಶನಿ ಅವರು ಎದ್ದು ನಿಂತು ಡ್ಯಾನ್ಸ್ ಮಾಡುತ್ತಿದ್ದಂತೆಯೆ ಉಳಿದ ಪ್ಯಾನಲಿಸ್ಟ್ಗಳು ಗಾಬರಿಗೊಂಡಿದ್ದಾರೆ. ನಂತರ ಅವರ ವರ್ತನೆ ನೋಡಿ ಮಾತನಾಡಲು ಅವಕಾಶ ನೀಡಲಾಯಿತು. ಈ ಕುರಿತು ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.
2021ರ ನವೆಂಬರ್ನಲ್ಲಿ ಸುಪ್ರೀಮ್ ಕೋರ್ಟ್ ವಾಯು ಮಾಲಿನ್ಯ ಹೆಚ್ಚಿರುವ ಮತ್ತು ಕೊರೋನಾ ರೋಗಿಗಳು ಐಸೋಲೇಟ್ ಆಗಿರುವ ಪ್ರದೇಶಗಳಲ್ಲಿ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಿತ್ತು. ಉಳಿದ ಪ್ರದೇಶಗಳಲ್ಲಿಯೂ ಹಸಿರು ಪಟಾಕಿಯನ್ನು ಮಾತ್ರ ಸಿಡಿಸಲು ಅವಕಾಶ ನೀಡಿತ್ತು. ಈ ಕುರಿತು ವಾದ ಮಂಡಿಸಿದ್ದ ರೋಶನಿ ಅವರ ವಿಡಯೋವನ್ನು ಎಲಿಜಬೇತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಮಸಾಲಾ ದೋಸೆ ಐಸ್ಕ್ರೀಮ್ ಕಂಡು ಮೂಗುಮುರಿದ ನೆಟ್ಟಿಗರು
Published On - 5:17 pm, Wed, 19 January 22