ಕಳ್ಳತನ ಮಾಡಲು ಹೇಗೆ ಕಿಟಕಿಯಲ್ಲಿ ನುಗ್ಗಿದ್ದೇನೆ ಎಂದು ಪೊಲೀಸರಿಗೆ ಡೆಮೋ ತೋರಿಸಿದ ಕಳ್ಳ; ವಿಡಿಯೋ ವೈರಲ್​

ಕಳ್ಳತನ ಮಾಡಲು ಹೇಗೆ ಕಿಟಕಿಯಲ್ಲಿ ನುಗ್ಗಿದ್ದೇನೆ ಎಂದು ಪೊಲೀಸರಿಗೆ ಡೆಮೋ ತೋರಿಸಿದ ಕಳ್ಳ; ವಿಡಿಯೋ ವೈರಲ್​
ಡೆಮೋ ತೋರಿಸಿದ ಕಳ್ಳ

ಪೊಲೀಸ್​ ಅಧಿಕಾರಿಯೊಬ್ಬರು ತಾವು ಹಿಡಿದ ಕಳ್ಳ ಮನೆಗೆ ಹೇಗೆ ನುಗ್ಗಿದ್ದನು ಎಂದದು ಆತನ ಬಳಿಯೇ ಕೇಳಿ ಡೆಮೋ ಪಡೆದುಕೊಳ್ಳುವ ವಿಡಿಯೋ ವೈರಲ್​ ಆಗಿದೆ. ವ್ಯಕ್ತಿಯೋರ್ವ ಕಿಟಕಿಯಿಂದ ಮನೆಯೊಳಗೆ ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Jan 20, 2022 | 9:38 AM

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಪೊಲೀಸ್​ ಅಧಿಕಾರಿಯೊಬ್ಬರು ತಾವು ಹಿಡಿದ ಕಳ್ಳ ಮನೆಗೆ ಹೇಗೆ ನುಗ್ಗಿದ್ದನು ಎಂದು ಆತನ ಬಳಿಯೇ ಕೇಳಿ ಡೆಮೋ (Demo) ಪಡೆದುಕೊಳ್ಳುವ ವಿಡಿಯೋ ವೈರಲ್​ (Viral Video) ಆಗಿದೆ. ವ್ಯಕ್ತಿಯೋರ್ವ ಕಿಟಕಿಯಿಂದ ಮನೆಯೊಳಗೆ ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ನಂತರ  ಆತನ ಬಳಿ ಕಳ್ಳತನ ಮಾಡಲು ಮನೆಗೆ ಹೇಗೆ ನುಗ್ಗಿದ್ದನು ಎನ್ನುವುದನ್ನು ಪೊಲೀಸರಿಗೆ ಡೆಮೋ ತೋರಿಸಲು ಕಿಟಕಿಯ ಒಂದು ಬ್ಲಾಕ್​ನಲ್ಲಿ ತನ್ನ ಸಂಪೂರ್ಣ ದೇಹವನ್ನು ಒಳನುಗ್ಗಿಸಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋವನ್ನು ಜನವರಿ 17ರಂದು ಐಪಿಎಸ್ ಅಧಿಕಾರಿ (IPS Officer) ರುಪಿನ್​ ಶರ್ಮಾ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಬಳಿಕ 11 ಸಾವಿರಕ್ಕೂ ಹೆಚ್ಚು​​ ವೀಕ್ಷಣೆ ಪಡೆದಿದೆ. 

ವಿಡಿಯೋದಲ್ಲಿ ಕಳ್ಳನ ಕೈಗೆ ಕಟ್ಟಿದ್ದ ಹಗ್ಗವನ್ನು ಪೊಲೀಸರು ಬಿಚ್ಚುತ್ತಾರೆ. ನಂತರ ಆತ ಕಿಟಕಿಯ ಒಂದೆ ಬ್ಲಾಕ್​ನಲ್ಲಿ ಮೊದಲು ಕಾಲುನ್ನು ಹಾಕಿ ನಂತರ ನಿಧಾನವಾಗಿ ಇಡೀ ದೇಹವನ್ನು ಮನೆಯ ಒಳಗೆ ನುಗ್ಗಿಸಿದ್ದಾನೆ. ಇದರ ವಿಡಿಯೋ ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಈ ರೀತಿಯೂ ಕಳ್ಳತನ ಮಾಡಲು ಮನೆಯನ್ನು ನುಗ್ಗುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಲು ಮನೆಯ ಹೆಂಚುಗಳನ್ನು ತೆಗೆಯುವುದು, ಮನೆಯ ಬಾಗಿಲ್ನ್ನು ಒಡೆಯುವುದನ್ನು ಕಾಣಬಹುದು. ಆದರೆ ಕಿಟಿಕಿಯ ಸಣ್ಣ ಬ್ಲಾಕ್​​ನಿಂದ ಮನೆಗೆ ಕಳ್ಳ ಮನೆಗೆ ನುಗ್ಗಿರುವುದು ಕಳ್ಳನ ಚಾಣಾಕ್ಷತನವನ್ನು ತೋರಿಸಿದೆ.

ಇದನ್ನೂ ಓದಿ:

ಮೇಕಪ್​ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada