Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು
ಮಸಾಲಾ ದೋಸೆ ಐಸ್​ಕ್ರೀಮ್​
Follow us
TV9 Web
| Updated By: Pavitra Bhat Jigalemane

Updated on:Jan 19, 2022 | 4:29 PM

ಭಾರತದ ವಿವಿದೆಡೆ ವಿವಿಧ ರೀತಿಯ ಅಹಾರಗಳು ಪ್ರಸಿದ್ಧಿ ಪಡೆದಿರುತ್ತವೆ. ದಕ್ಷಿಣ ಭಾರತದಲ್ಲಿ ಒಂದು ರೀತಿಯ ಆಹಾರ ಶೈಲಿಯಿದ್ದರೆ, ದಕ್ಷಣ ಭಾರತದಲ್ಲಿ ಬೇರೆ ರೀತಿಯ ಆಹಾರ ಹೆಚ್ಚು ಜನಪ್ರಿಯವಾಗಿರುತ್ತದೆ. ಅವುಗಳಲ್ಲಿ ಮಸಾಲಾ ದೋಸೆ (Masala dosa) ಕೂಡ ಒಂದು. ಮಸಾಲಾ ದೋಸೆ ದಕ್ಷಿಣ ಭಾರತದ ಹೊಟೇಲ್​ಗಳಲ್ಲಿ ಸಿಗುವ ಸಾಮಾನ್ಯ ತಿನಿಸಾಗಿದೆ. ಅಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಬಾಯಿ ಚಪ್ಪರಿಸಿ ತಿನ್ನುವ ಖಾದ್ಯವಾಗಿದೆ. ಇದಕ್ಕೆ ಐಸ್​ಕ್ರೀಮ್​ ಮಿಕ್ಸ್​​ ಮಾಡಿದರೆ ಹೇಗಿರುತ್ತದೆ? ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಮಸಾಲಾದೋಸೆಗೆ ಐಸ್​ಕ್ರಿಮ್​ ಸೇರಿಸಿ ಕೊಡುವ ಈ ಖಾದ್ಯ ವೈರಲ್​ ಆಗಿದೆ. ಈ ಮಸಾಲಾ ದೋಸಾ ಐಸ್​ಕ್ರೀಮ್​ (Masala dosa ice cream) ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ. ದೆಹಲಿಯ ಬೀದಿ ಬದಿ ವ್ಯಾಪಾರಿಯೊಬ್ಬ ತಯಾರಿಸುವ ಈ ತಿನಿಸಿನ ವಿಡಿಯೋ ಸಖತ್​ ವೈರಲ್ (Viral Video) ಆಗಿದೆ.

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ನೋಡಿ ನೆಟ್ಟಿಗರು ಇದೆಂತಹ ತಿನಿಸು ಎಂದು ದೂರಿದ್ದಾರೆ. ವಿಡಿಯೋದಲ್ಲಿ ಅಂಗಡಿಯ ಮಾಲೀಕ ಮಸಾಲಾ ದೋಸೆಯನ್ನು ಮೊದಲು ಕತ್ತರಿಸಿ, ನಂತರ ಅದಕ್ಕೆ ಐಸ್​ಕ್ರೀಮ್​ ಮಿಶ್ರಣ ಮಾಡುತ್ತಾನೆ. ನಂತರ ಅದನ್ನು  ಪ್ಲೇಟ್​ಗೆ ಹಾಕಿ ಕೊಡುತ್ತಾನೆ. ಸದ್ಯ ವಿಡಿಯೋ ನೋಡಿದ ಕೆಲವರು ಈ ತಿಂಡಿಯನ್ನು ತಿನ್ನಲೇಬೇಕು ಎಂದಿದ್ದಾರೆ. ಇನ್ನೂ ಕೆಲವರು ಹೊಸ ಖಾದ್ಯವನ್ನು ನೊಡಿ ಮುಗುಮುರಿದ್ದಾರೆ.

ಈ ಹಿಂದೆ ಲಕ್ನೌನ ಪಾಸ್ಟ್​ಫುಡ್​ ತಯಾರಕನೊಬ್ಬ ಗೋಲಗಪ್ಪಾದೊಂದಿಗೆ ನೂಡಲ್ಸ್​ ಮಿಶ್ರಣ ಮಾಡಿ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದೀಗ ಐಸ್​ಕ್ರೀಮ್​ ಮಸಾಲಾ ದೋಸೆಯ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ: 30 ಲಕ್ಷ ರೂ.ಗೆ ಬೇಡಿಕೆ

Published On - 4:28 pm, Wed, 19 January 22