ಸಾಮಾನ್ಯವಾಗಿ ಮಾತನಾಡುವ ಗಿಳಿಯನ್ನು ನೋಡಿರುತ್ತೇವೆ ಅಥವಾ ಗಿಳಿ ಮಾತನಾಡುತ್ತದೆ ಎನ್ನುವುದನ್ನು ಕೇಳಿರುತ್ತೇವೆ. ಇನ್ನೂ ಕೆಲವು ಗಿಳಿಗಳು ಧ್ವನಿಯನ್ನು ಅನುಕರಿಸುತ್ತವೆ ಅಂತಹ ಗಿಳಿಗಳು ಅಪರೂಪವಾಗಿ ಕಾಣಸಿಗುತ್ತವೆ. ಆದರೆ ಇಲ್ಲೊಂದು ಗಿಳಿ ಆಪಲ್ ಐಫೋನ್ನ ರಿಂಗ್ಟೋನ್ (iPhone ringtone) ನಂತಯೇ ಅನುಕರಣೆ ಮಾಡಿ ಧ್ವನಿ ಹೊರಡಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಗಿಳಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.ಈ ಗಿಳಿಯ ಹೆಸರು ಗುಸ್ಸಿ (Gucci) ಎಂದಾಗಿದೆ. ಇಂಟರ್ನೆಟ್ನಲ್ಲಿ ಸದ್ಯ ಗಿಳಿ ತನ್ನ ಧ್ವನಿಯ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಗಿಳಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಗುಸ್ಸಿ ಗೌಡ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವೋಸ್ಮೇರಿ ಎಕ್ಲೆಕ್ಟಸ್ ಜಾತಿಗೆ ಸೇರಿದ ಈ ಗಿಳಿಯ ವಿಶೇಷ ಧ್ವನಿಗೆ ನೆಟ್ಟಗರು ಮರುಳಾಗಿದ್ದಾರೆ.
View this post on Instagram
ವಿಡಿಯೋದಲ್ಲಿ ಕೆಂಪು ನೀಲಿ ಮಿಶ್ರಿತ ಬಣ್ಣ್ದದ ಗಿಳಿಯನ್ನು ಕಾಣಬಹುದು. ಈ ಗುಸ್ಸಿಯ ಗಿಳಿಯ ಮಾಲೀಕ ಅದರ ತಲೆಯನ್ನು ನೇವರಿಸುವುದನ್ನು ಕಾಣಬಹುದು. ಆಗ ಗಿಳಿ ಐಫೋನ್ ರಿಂಗ್ಟೋನ್ನ ಶಬ್ದದಂತೆ ಧ್ವನಿ ಹೊರಡಿಸುತ್ತದೆ. ವೋಸ್ಮೇರಿ ಎಕ್ಲೆಕ್ಟಸ್ ಗಿಳಿಗಳ ಇನ್ಸ್ಟಾಗ್ರಾಮ್ ಖಾತೆಯನ್ನು ಹರ್ಷಿತ್, ಪೂಜಾ ಮತ್ತು ದೇವರಾಜ್ ಎನ್ನುವವರು ಹ್ಯಾಂಡಲ್ ಮಾಡುತ್ತಾರೆ.ವಿಡಿಯೋ ನೋಡಿ ನೆಟ್ಟಿಗರು ಇಂತಹ ಅದ್ಭುತ ಗಿಳಿಯ ವಿಡಿಯೋವನ್ನು ಇದೇ ಮೊದಲು ನೋಡುತ್ತಿರುವುದು ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ವೈರಲ್ ಅಗಿರುವ ವಿಡಿಯೋಗೆ ಸಖತ್ ವೈರಲ್ ಆಗಿದೆ. ವೋಸ್ಮೇರಿ ಎಕ್ಲೆಕ್ಟಸ್ ಜಾತಿಯ ಗಿಳಿಗಳು ಸಣ್ಣ ರೆಕ್ಕೆಯನ್ನು ಹೊಂದಿದ್ದು, ಇವುಗಳ ಆಯಸ್ಸು 40 ವರ್ಷವಾಗಿದೆ. ಈ ಗಿಳಿಗಳು ಹೆಚ್ಚಾಗಿ ಇಂಡೋನೆಷ್ಯಾದಲ್ಲಿ ಕಂಡುಬರುತ್ತವೆ.
ಇದನ್ನೂ ಓದಿ:
Blanket Octopus: 20 ವರ್ಷಗಳ ಬಳಿಕ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಪತ್ತೆ ಮಾಡಿದ ವಿಜ್ಞಾನಿಗಳು