Blanket Octopus: 20 ವರ್ಷಗಳ ಬಳಿಕ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಪತ್ತೆ ಮಾಡಿದ ವಿಜ್ಞಾನಿಗಳು
20 ಬಳಿಕ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಅನ್ನು ಜೀವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಬಂಗಾರದ ಬಣ್ಣದಲ್ಲಿ ಹೊಳೆಯವ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಗ್ರೇಟ್ ಬಾರಿಯರ್ನ ಲೇಡಿ ಎಲಿಯಟ್ ಐಸ್ಲ್ಯಾಂಡ್ನಲ್ಲಿ ಕಂಡುಬಂದಿದೆ.
20 ಬಳಿಕ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ (Blanket Octopus) ಅನ್ನು ಜೀವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಬಂಗಾರದ ಬಣ್ಣದಲ್ಲಿ ಹೊಳೆಯವ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಗ್ರೇಟ್ ಬಾರಿಯರ್ನ ಲೇಡಿ ಎಲಿಯಟ್ ಐಸ್ಲ್ಯಾಂಡ್ (Lady Elliot Island ) ನಲ್ಲಿ ಕಂಡುಬಂದಿದೆ. ಆಸ್ಟ್ರೇಲಿಯಾದಲ್ಲಿ ಕಂಡುಬಂದ ಈ ಜೀವಿಯನ್ನು ಜೆಸಿಂತಾ ಶಾಕಲ್ಟನ್ ಎನ್ನುವ ಸಮುದ್ರ ಜೀವಶಾಸ್ತ್ರಜ್ಞೆ ಈ ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಅನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ನ ವಿಡಿಯೋ ಹಾಗೂ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
View this post on Instagram
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ, ಕ್ವೀನ್ಸ್ಲ್ಯಾಂಡ್ ಪ್ರವಾಸೋದ್ಯಮ ಮತ್ತು ಈವೆಂಟ್ಗಳಿಗಾಗಿ ಕಂಟೆಟ್ ಕ್ರಿಯೇಟ್ ಮಾಡುವ ಶಾಕಲ್ಟನ್ ಅವರು ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗಿದ್ದು, ಜೀವಶಾಸ್ತ್ರಜ್ಞರ ಗಮನ ಸೆಳೆದಿದೆ. ಈ ಕುರಿತು ಅವರು ನಾನು ಅದನ್ನು ಮೊದಲು ಉದ್ದವಾದ ರೆಕ್ಕೆಗಳಿರುವ ಮೀನಿನ ಮರಿ ಎಂದುಕೊಂಡೆ ಆದರೆ ಹತ್ತಿರ ಬರುತ್ತಿದ್ದಂತೆ ನನಗೆ ಅಚ್ಚರಿಯಾಗಿತ್ತು. ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಎಂದು ತಿಳಿದಾಗ ಅಗಾಧವಾದ ಸಂತೋಷವಾಯಿತು. ಜೀವನದಲ್ಲಿ ಈ ಅಪರೂಪದ ಜೀವಿಯನ್ನು ನೋಡಿ ಪುಳಕಿತನಾಗಿದ್ದೇನೆ. ಅದರ ಚಲನೆ, ಕಣ್ಣ ಸೆಳೆಯುವ ಅದರ ಮೈಬಣ್ಣ ನನ್ನನ್ನು ಆಕರ್ಷಿಸಿತ್ತು ಎಂದಿದ್ದಾರೆ. ಕಳೆದ 3 ವರ್ಷಗಳಿಂದ ಗ್ರೇಟ್ ಬ್ಯಾರಿಯರ್ ದ್ವೀಪದಲ್ಲಿ ನಡೆಸುತ್ತಿರುವ ಸಮುದ್ರ ಜೀವಿಗಳ ಮೇಲಿನ ಅಧ್ಯಯನದ ವೇಳೆ ಕೇವಲ 3 ಬಾರಿ ಮಾತ್ರ ಈ ಆಕ್ಟೋಪಸ್ ಕಾಣಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನ್ಯೂಜಿಲೆಂಡ್ನ ಜರ್ನಲ್ ಆಫ್ ಮೆರೈನ್ ಆ್ಯಂಡ್ ಫ್ರೆಶ್ ವಾಟರ್ ರಿಸರ್ಚ್ ಪ್ರಕಾರ, ಬ್ಲಾಂಕೆಟ್ ಆಕ್ಟೋಪಸ್ ಅಪರೂಪವಾಗಲು ಕಾರಣ ಅವುಗಳ ಲೈಂಗಿಕ ಗಾತ್ರದ ದ್ವಿರೂಪತೆ. ಹೆಣ್ಣು ಬ್ಲಾಂಕೆಟ್ ಆಕ್ಟೊಪಸ್ಗಳು ಆರು ಅಡಿಗಳವರೆಗೆ ಬೆಳೆಯುತ್ತವೆ. ಗಂಡು ಆಕ್ಟೋಪಸ್ಗಳು 2.4 ಸೆಂ.ಮೀ ಗಳವರೆಗೆ ಬೆಳೆಯುತ್ತವೆ. ಹೆಣ್ಣು ಆಕ್ಟೋಪಸ್ಗಳು ಗಂಡು ಆಕ್ಟೋಪಸ್ಗಳಿಗಿಂತ 40 ಸಾವಿರಪಟ್ಟು ಹೆಚ್ಚು ತೂಕವಿರುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿ ಸೇರಿದ ಸೈಕಲ್