Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ

ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಬಾಲ್​ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ
ಕಾರನ್ನು ಪಲ್ಟಿಮಾಡುತ್ತಿರುವ ಆನೆ
Follow us
TV9 Web
| Updated By: Pavitra Bhat Jigalemane

Updated on: Jan 18, 2022 | 3:51 PM

ಸಾಮಾನ್ಯವಾಗಿ ಆನೆ (Elephant) ಎದುರಿಗೆ ಬಂದು ಒಂದು ಬಾರಿ ಘೀಳಿಟ್ಟರೆ  ಜೀವ ಬಾಯಿಗೆ ಬಂದಂತಹ ಅನುಭವವಾಗುತ್ತದೆ. ಅಂತಹದ್ದರಲ್ಲಿ ಕುಳಿತಿದ್ದ ಕಾರನ್ನೇ ಚೆಂಡಿನಂತೆ ಉರುಳಿಸಿದರೆ ಏನಾಗಬಹುದು? ಹೌದು ಇಂತಹದ್ದೊಂದು ಘಟನೆ ದಕ್ಷಿಣ ಆಫ್ರಿಕಾದ iSimangaliso ವೆಟ್ಲ್ಯಾಂಡ್ (iSimangaliso Wetland )  ಎನ್ನುವ ಪಾರ್ಕ್​ನಲ್ಲಿ ನಡೆದಿದೆ. ಕೋಪಗೊಂಡ ಆನೆಯೊಂದು 4 ಜನರಿದ್ದ ಕಾರನ್ನು ಕಾಲಿನಲ್ಲಿ ಉರುಳಿಸಿ ಚೆಂಡಿನಂತೆ ತಳ್ಳಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಝುಲುಲ್ಯಾಂಡ್​  ಅಬ್ಸರ್ವರ್​ ( Zululand Observer) ಎನ್ನುವ ಯುಟ್ಯೂಬ್​ ಚಾನಲ್ (Youtube Channel)​ ಒಂದು ಇದರ ವಿಡಿಯೋ ಹಂಚಿಕೊಂಡಿದ್ದರು ನೆಟ್ಟಿಗರು ವಿಡಿಯೋ ನೋಡಿ ಹೌಹಾರಿದ್ದಾರೆ. ವಿಡಯೋವನ್ನು ದೃಶ್ಯ ನಡೆಯುತ್ತಿರುವ ಪ್ರದೇಶದಿಂದ ಕೊಂಚ ದೂರದಲ್ಲಿ ಸೆರೆಹಿಡಿಯಲಾಗಿದೆ.

ವಿಡಿಯೋದಲ್ಲಿ ಆನೆ ಕಾರನ್ನು ಕಾಲಿನಿಂದ ತಳ್ಳಿ ಪಲ್ಟಿಮಾಡುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಗಂಡ ಹಂಡತಿ ಹಾಗೂ  8 ಮತ್ತು 10 ವರ್ಷದ ಇಬ್ಬರು ಮಕ್ಕಳು ಇದ್ದರು ಎಂದು ವರದಿಯಾಗಿದೆ. ಕಾರನ್ನು ಪಲ್ಟಿ ಮಾಡಿದ ನಂತರ ಆನೆ ಅಲ್ಲಿಂದ ತೆರಳಿದ್ದು, ಬಳಿಕ ಕಾರಿನಲ್ಲಿದ್ದವನ್ನು ರಕ್ಷಿಸಲಾಗಿದೆ ಎಂದು ಡೈಲಿ ಮೇಲ್​ ವರದಿ ಮಾಡಿದೆ. ವರದಿಯ ಪ್ರಕಾರ ಕಾರಿನಲ್ಲಿದ್ದ ಕುಟುಂಬದವರು ಮಾತನಾಡಿ, ಎಲ್ಲರೂ ಭಯಗೊಂಡಿದ್ದೆವು, ಜೀವವೇ ಹೋಯಿತು ಎಂದುಕೊಂಡಿದ್ದೆವು. ಅದೃಷ್ಟವಶಾತ್​ ಬದುಕುಳಿದಿದ್ದೇವೆ ಎಂದಿದ್ದಾರೆ.

ಆನೆಗಳೇ ಹಾಗೆ ಕೋಪಗೊಂಡರೆ ಎಂತಹ ವಸ್ತುಗಳೇ ಆಗಲಿ, ಮನುಷ್ಯರನ್ನೇ ಆಗಲಿ ಕಾಲಿನಿಂದ ತುಳಿದು ಬಿಡುತ್ತವೆ. ಆನೆಯ ಕಾಲ್ತುಳಿತಕ್ಕೆ ಸಿಕ್ಕಮೆಲೆ ಬದುಕುಳಿಯುವ ಅಥವಾ ವಸ್ತು ಅದೇ ರೀತಿ ಇರಲಿದೆ ಎನ್ನುವುದು ಊಹೆಯೇ ಸರಿ.

ಇದನ್ನೂ ಓದಿ:

ಪ್ಯಾರಾಗ್ಲೈಡಲಿಂಗ್ ವೇಳೆ ಭಯಗೊಂಡು ಕೂಗಿದ ಮಹಿಳೆ: ವಿಡಿಯೋ ವೈರಲ್​

ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್