ಪ್ಯಾರಾಗ್ಲೈಡಲಿಂಗ್ ವೇಳೆ ಭಯಗೊಂಡು ಕೂಗಿದ ಮಹಿಳೆ: ವಿಡಿಯೋ ವೈರಲ್​

ಪ್ಯಾರಾಗ್ಲೈಡಲಿಂಗ್ ವೇಳೆ ಭಯಗೊಂಡು ಕೂಗಿದ ಮಹಿಳೆ: ವಿಡಿಯೋ ವೈರಲ್​
ವಿಡಿಯೋದಿಂದ ಸೆರೆಹಿಡಿದ ಚಿತ್ರ

ಇತ್ತೀಚಿನ ದಿನಗಳಲ್ಲಿ ಪ್ಯಾರಾಗ್ಲೈಡಲಿಂಗ್ ಸಾಹಸಪ್ರಿಯರ ನೆಚ್ಚಿನ ಕ್ರೀಡೆಯಾಗಿದೆ. ಇದೀಗ ಮಹಿಳೆಯೊಬ್ಬಳು ಪ್ಯಾರಾಗ್ಲೈಡಲಿಂಗ್  ಮಾಡುವ ವೇಳೆ ಭಯಗೊಂಡು ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Jan 18, 2022 | 2:55 PM

ಪ್ಯಾರಾಗ್ಲೈಡಲಿಂಗ್ (Paragliding)​ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಅದನ್ನು ಪ್ರಯತ್ನಿಸಲು ಧೈರ್ಯ ಸಾಲುವುದಿಲ್ಲ  ಸಾವಿರಗಟ್ಟಲೆ ಕಿ ಮೀ ಎತ್ತರಕ್ಕೆ ಹಗ್ಗ ಕಟ್ಟಿಕೊಂಡು ಹಾರುವುದು ಸುಲಭದ ಮಾತಲ್ಲ. ಅಷ್ಟೇ ಗಟ್ಟಿ ಗುಂಡಿಗೆ ಬೇಕು. ಇತ್ತೀಚಿನ ದಿನಗಳಲ್ಲಿ ಪ್ಯಾರಾಗ್ಲೈಡಲಿಂಗ್ ಸಾಹಸಪ್ರಿಯರ ನೆಚ್ಚಿನ ಕ್ರೀಡೆಯಾಗಿದೆ. ಇದೀಗ ಮಹಿಳೆಯೊಬ್ಬಳು ಪ್ಯಾರಾಗ್ಲೈಡಲಿಂಗ್  ಮಾಡುವ ವೇಳೆ ಭಯಗೊಂಡು ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಯಾರಾಗ್ಲೈಡಲಿಂಗ್  ವೇಳೆ ನಿರ್ವಾಹಕನ ಬಳಿ ಸುರಕ್ಷಿತವಾಗಿ ತನನ್ನು ಕೆಳಕ್ಕೆ ಇಳಿಸುವಂತೆ ಮಹಿಳೆ ಕೇಳಿಕೊಳ್ಳುತ್ತಾರೆ ಇದರ ವಿಡಿಯೋ ( Viral Video)ವನ್ನು ಐಎಎಸ್​ ಅಧಿಕಾರಿ (IAS Officer) ಎಂ ವಿ ರಾವ್​  ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಮಹಿಳೆ ನಿರ್ವಾಹಕನ ಬಳಿ ಅಣ್ಣಾ ನನಗೆ ತುಂಬಾ ಭಯವಾಗುತ್ತಿದೆ ಎಂದು ನಡುಗುವ ಧ್ವನಿಯಲ್ಲಿ ಕೂಗುತ್ತಾಳೆ. ಜೊತೆಯಲ್ಲಿದ್ದ ನಿರ್ವಾಹಕ ಮಹಿಳೆಯ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುವುದನ್ನು ಕಾಣಬಹುದು. ಪ್ಯಾರಾಗ್ಲೈಡಲಿಂಗ್  ಮಾಡಲು ಒತ್ತಾಯಿಸಿದ ತನ್ನ ಭಾವೀ ಪತಿಯ ಮೇಲೆ ಸಿಟ್ಟಿಗೆದ್ದ ಮಹಿಳೆ  ಕೂಗಾಡುವುದನ್ನು ಕಾಣಬಹುದು. ವಿಡಿಯೋ ನೋಡಿ ನೆಟ್ಟಿಗರು ತಾವು ಪ್ಯಾರಾಗ್ಲೈಡಲಿಂಗ್  ಮಾಡಿದ ವೇಳೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

2019 ರಲ್ಲಿ ಇದೇ ರೀತಿ ಪ್ಯಾರಾಗ್ಲೈಡಲಿಂಗ್  ಮಾಡಿವ ವೇಳೆ ಹೆದರಿ ಕೂಗಿಕೊಂಡ ವಿಪಿನ್​ ಸಾಹು ಎನ್ನುವವರ ವಿಡಿಯೋ ರಾತ್ರಿ ಬೆಳಗಾಗುವಷ್ಟರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗ ಮಹಿಳೆ ಕೂಡ ಹೆದರಿ ಕೂಗಿಕೊಂಡಿರುವುದು ಹಳೆಯ ವಿಡಿಯೋವನ್ನು ನೆನಪಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada