ಗೂಗಲ್​ ಮೀಟ್​ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ

ಗೂಗಲ್​ ಮೀಟ್​ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ
ಗಾಯಕ ಸುರೋಜಿತ್​ ಚಟರ್ಜಿ ಜೊತೆ ಅಧಿತಿ ಹಾಗೂ ಸಂದೀಪನ್​

ಪಶ್ಚಿಮ ಬಂಗಾಳದಲ್ಲಿ ಕೊರೋನಾ ಗಣನೀಯ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಹೀಗಾಗಿ ಸಂದೀಪನ್​ ಹಾಗೂ ಅಧಿತಿ  ಗೂಗಲ್​ ಮೀಟ್​ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 18, 2022 | 11:27 AM

ಕೊರೋನಾ (Corona) ಎಲ್ಲೆಡೆ ಹರಡುತ್ತಿದೆ. ಜನ ಕಾಯಿಲೆಯಿಂದ ಪಾರಾಗಲು ವ್ಯಾಕ್ಸಿನ್​ಗಳನ್ನು ಪಡೆದುಕೊಂಡಿದ್ದರೂ ರೋಗಕ್ಕೆ ತುತ್ತಾಗುತ್ತಿದ್ದರೆ. ಇದರಿಂದ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಜನ ಹೋಗದಂತಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಪಶ್ಚಿಮ ಬಂಗಾಳದ ಜೋಡಿಯೊಂದು ಮದುವೆಯನ್ನು ವರ್ಚುವಲ್​ ಆಗಿ ಆಗಲು ನಿರ್ಧರಿಸಿದ್ದಾರೆ. ಹೌದು, ಗೂಗಲ್​ ಮೀಟ್ (Google Meet)​ ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಜೊಮಾಟೋ (Zomato) ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಸಂದೀಪನ್​ ಸರ್ಕಾರ್​ ಮತ್ತು ಅಧಿತಿ ದಾಸ್​ ಎನ್ನುವ ಜೋಡಿ ಇದೇ ಜನವರ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೋನಾ ಗಣನೀಯ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಹೀಗಾಗಿ ಸಂದೀಪನ್​ ಹಾಗೂ ಅಧಿತಿ  ಗೂಗಲ್​ ಮೀಟ್​ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಸದ್ಯ ಇವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.  ಈ ಕುರಿತು ನ್ಯೂಸ್​ 18 ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ವರ ಸಂದೀಪನ್​ ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ ಕೊರೋನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಅಲ್ಲದೇ  ಸ್ವತಃ ನಾನೇ ಸೋಂಕಿಗೆ ತುತ್ತಾದ ಕಾರಣ ಹಲವು ದಿನ ಐಸೋಲೇಷನ್​ನಲ್ಲಿದ್ದೆ. ಈ ಬಾರಿಯೂ ಕೊರೋನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್​ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್​ ಮೀಟ್​ ಲಿಂಕ್​ಅನ್ನು ಕಳುಹಿಸಲಾಗುವುದು. ಊಟವನ್ನು ಜೊಮಾಟೋ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಜಾರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

ಮದುವೆಯನ್ನು ಗೂಗಲ್​ ಮೀಟ್​ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್​ ಟೆಕ್ನಿಕಲ್​ ಟೀಮ್​ ಅನ್ನು ನೇಮಿಸಿದ್ದಾರೆ. ಅಧಿತಿ ಹಾಗೂ ಸಂದೀಪನ್​ಗೆ ಫ್ಯಾಮಿಲಿ ಫ್ರೆಂಡ್​ ಆಗಿರುವ ಗಾಯಕ ಸುರೋಜಿತ್​ ಚಟರ್ಜಿ ಮಾತನಾಡಿ, ಇದು ಎಲ್ಲರೂ ಅನುಸರಿಬೇಕಾದ ಕ್ರಮವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದಿದ್ದಾರೆ. ಕೊರೋನಾ ಸಾಂಕ್ರಾಮಿಕ ವರ್ಕ್​ ಫ್ರಾಮ್​ ಹೋಮ್​ ಎನ್ನುವ ಹೊಸ ಕಾನ್ಸೆಪ್ಟ್​ಅನ್ನು ಜಾರಿಗೆ ತಂದಿದೆ. ಇನ್ನು ಮದುವೆ, ಸಮಾರಂಭಗಳನ್ನೂ ವರ್ಚುವಲ್​ ಮೂಲಕ ನಡೆಸುವಂತಹ ದಿನಗಳು ಬಂದರೂ ಅಚ್ಚರಿಯಿಲ್ಲ.

ಇದನ್ನೂ ಓದಿ:

ಅಡ್ವಾನ್ಸ್​ ಹಣ ಹಿಂತಿರುಗಿಸದ ಮಾಲೀಕ: ಸಿಟ್ಟಿನಲ್ಲಿ ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಗೌನ್​ಗಳನ್ನು ಕತ್ತರಿಸಿದ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada