Shocking Video: ನೋಡನೋಡುತ್ತಿದ್ದಂತೆ ಮೆಟ್ರೋ ರೈಲ್ವೆ ಹಳಿ ಮೇಲೆ ಮಹಿಳೆಯನ್ನು ತಳ್ಳಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಅದೃಷ್ಟವಶಾತ್ ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೆಳಗೆ ಬಿದ್ದು ದಿಗ್ಭ್ರಮೆಗೊಂಡ ಮಹಿಳೆ ರೈಲ್ವೆ ಹಳಿಯಿಂದ ಮೇಲೇಳಲು ಆಗದೆ ಹೆಣಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

Shocking Video: ನೋಡನೋಡುತ್ತಿದ್ದಂತೆ ಮೆಟ್ರೋ ರೈಲ್ವೆ ಹಳಿ ಮೇಲೆ ಮಹಿಳೆಯನ್ನು ತಳ್ಳಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ
ಮೆಟ್ರೋ ರೈಲ್ವೆ ಹಳಿ ಮೇಲೆ ಬಿದ್ದ ಮಹಿಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 17, 2022 | 5:21 PM

ಬೆಲ್ಜಿಯಂನಲ್ಲಿ ಓರ್ವ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಸುರಂಗಮಾರ್ಗದಲ್ಲಿ ಎದುರಿಗೆ ಬರುತ್ತಿದ್ದ ರೈಲಿನ ಹಳಿಯ ಮೇಲೆ ತಳ್ಳಿದ ಘಟನೆ ನಡೆದಿದೆ. ಆದರೆ, ಆಕೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಕೂದಲು ನಿಮಿರೇಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಕೇವಲ 30 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​ನಲ್ಲಿ ಶುಕ್ರವಾರ ಸಂಜೆ ಬ್ರಸೆಲ್ಸ್‌ನ ರೋಜಿಯರ್ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರನ್ನು ನೋಡಬಹುದು. ಆಕೆ ಮೆಟ್ರೋ ರೈಲು ನಿಲ್ದಾಣದೊಳಗೆ ಬರುತ್ತಿದ್ದಂತೆ, ಕಪ್ಪು ಟಿ-ಶರ್ಟ್‌ನ ವ್ಯಕ್ತಿಯೊಬ್ಬ ಮಹಿಳೆಯ ಹಿಂದೆ ಬಂದು ಆಕೆಯನ್ನು ಇದ್ದಕ್ಕಿದ್ದಂತೆ ತಳ್ಳುತ್ತಾನೆ.

ಆ ಪುರುಷ ಆಕೆಯನ್ನು ತಳ್ಳಿದ್ದಕ್ಕೆ ಬ್ಯಾಲೆನ್ಸ್​ ತಪ್ಪಿದ ಆಕೆ ಎದುರಿನಿಂದ ಬರುತ್ತಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಬಿದ್ದಿದ್ದಾಳೆ. ಅದೃಷ್ಟವಶಾತ್ ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೆಳಗೆ ಬಿದ್ದು ದಿಗ್ಭ್ರಮೆಗೊಂಡ ಮಹಿಳೆ ರೈಲ್ವೆ ಹಳಿಯಿಂದ ಮೇಲೇಳಲು ಆಗದೆ ಹೆಣಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯಿಂದ ಮೆಟ್ರೋ ರೈಲು ಕೇವಲ ಕೆಲವೇ ಇಂಚುಗಳಷ್ಟು ದೂರದಲ್ಲಿ ನಿಂತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ತಕ್ಷಣ ಅಲ್ಲಿದ್ದ ಪ್ರಯಾಣಿಕರು ಆಕೆಯನ್ನು ರೈಲ್ವೆ ಹಳಿಯಿಂದ ಎತ್ತಲು ಸಹಾಯ ಮಾಡಲು ಧಾವಿಸುತ್ತಾರೆ.

ಆ ಮಹಿಳೆ ಹಳಿಗಳ ಮೇಲೆ ಬೀಳುತ್ತಿರುವುದನ್ನು ಗಮನಿಸಿದ ರೈಲು ಚಾಲಕ ತಕ್ಷಣ ತುರ್ತು ಬ್ರೇಕ್‌ಗಳನ್ನು ಹಾಕಿದ್ದರಿಂದ ಮೆಟ್ರೋ ರೈಲು ತಕ್ಷಣವೇ ಸ್ಥಗಿತಗೊಂಡಿತು ಎಂದು ಬ್ರಸೆಲ್ಸ್ ಟೈಮ್ಸ್ ವರದಿ ಮಾಡಿದೆ. ಕೆಳಗೆ ಬಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಹಿಳೆಯನ್ನು ರೈಲಿನ ಮುಂದೆ ತಳ್ಳಿ ಓಡಿ ಹೋಗಿದ್ದ ಆರೋಪಿಯನ್ನು ನಂತರ ಬಂಧಿಸಲಾಗಿದೆ. ಆತನ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಅವರ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಮನೋವೈದ್ಯಕೀಯ ತಜ್ಞರನ್ನು ನೇಮಿಸಲಾಗಿದೆ.

ಇದನ್ನೂ ಓದಿ: Viral Video: ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಾಲೆಯಿಂದ ಸಸ್ಪೆಂಡ್ ಆದ ಟೀಚರ್; ಗಂಡನಿಂದಲೂ ಡೈವೋರ್ಸ್

Shocking News: ವಿಮಾನದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕಸದ ಬುಟ್ಟಿಯಲ್ಲಿ ಬಿಸಾಡಿದ ಮಹಿಳೆ!

Published On - 5:21 pm, Mon, 17 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ