ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​

ಪುಟ್ಟ ಬಾಲಕಿಗೆ ಕಥಕ್​ ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಇದು ಪಂಡಿತ್​ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ಕಳೆದುಕೊಂಡಿದುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​
ಬಿರ್ಜೂ ಮಹಾರಾಜ್​
Follow us
TV9 Web
| Updated By: Pavitra Bhat Jigalemane

Updated on:Jan 18, 2022 | 12:02 PM

ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿರ್ಜೂ ಮಹರಾಜ್​ (Birju Maharaj )ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕಲಾ ಸೇವೆ, ಅವರ ಆದರ್ಶಗಳು ಸದಾ ಜೀವಂತವಾಗಿರುತ್ತವೆ. ಪಂಡಿತ್​ ಬಿರ್ಜೂ ಮಹಾರಾಜ್ (Pandith Birju Maharaj)​​ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ.  ಈ ನಡುವೆ ಬಿರ್ಜೂ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪುಟ್ಟ ಬಾಲಕಿಗೆ ಕಥಕ್ (Kathak)​ ಕಲಿಸುವ ವೇಳೆ ಆಕೆಯ ಕಾಲುಗಳನ್ನು ಮುಟ್ಟಿ ಪ್ರೀತಿಯಿಂದ ಕಲಾಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಇದು ಪಂಡಿತ್​ ಬಿರ್ಜೂ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದು ನೆಟ್ಟಿಗರು ಬಿರ್ಜೂ ಅವರನ್ನು ಕಳೆದುಕೊಂಡಿದುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​ನಲ್ಲಿ Sarvan_K86 ಎನ್ನುವವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಬಿರ್ಜೋ ಪುಟ್ಟ ಬಾಲಕಿಗೆ ಒಂದು ಜೋಡಿ ಗೆಜ್ಜೆಯನ್ನು ನೀಡುತ್ತಾರೆ ನಂತರ ಆಕೆಯ ಹಣೆಗೆ ತಿಲಕವನ್ನು ಇಡುತ್ತಾರೆ. ಆ ಬಳಿಕ ನೃತ್ಯದ ಆರಂಭದಲ್ಲಿ ಹೆಗೆ ನಮಸ್ಕರಿಸಬೇಕು ಎನ್ನುವುದನ್ನು ಬಾಲಕಿಯ ಕಾಲನ್ನು ಮುಟ್ಟಿ ನಮಸ್ಕರಿಸಿಯೇ ತೋರಿಸುತ್ತಾರೆ. ಕಥಕ್​ ವಿದ್ವಾಂಸ ಬಿರ್ಜೂ ಮಹಾರಾಜ್​ ಅವರ ಈ ಸರಳ ವ್ಯಕ್ತಿತ್ವಕ್ಕೆ ನೋಡುಗರು ಮಾರುಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕಥಕ್​ ಮಾಂತ್ರಿಕ ಬಿರ್ಜೂ ಮಹಾರಾಜ್​ ಅವರ ಮೂಲ ಹೆಸರು ಬ್ರಿಜ್​​ ಮೋಹನ್​ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದರು.  ಬಾಲ್ಯದಲ್ಲೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಕಥಕ್​ ಮಾಂತ್ರಿಕ ಎಂದೇ ಹೆಸರು ಪಡೆದರು. ಬಿರ್ಜೂ ಅವರ ಕಲಾ ಸೇವೆಗೆ 1986 ರಲ್ಲಿ ಭಾರತದ ಅತ್ಯನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 83 ವರ್ಷದ ಬಿರ್ಜೂ ಮಹಾರಾಜ್​  ಭಾನುವಾರ (ಜ. 16)ರಂದು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:

ಗೂಗಲ್​ ಮೀಟ್​ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ

Published On - 12:02 pm, Tue, 18 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್