Sign In

By signing in or creating an account, you agree with Associated Broadcasting Company's Terms & Conditions and Privacy Policy.

Pandit Birju Maharaj Died: ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹಾರಾಜ್​ ನಿಧನ

ಬಿರ್ಜೂ ಮಹಾರಾಜ್​ ಅವರ ಮೂಲ ಹೆಸರು ಬ್ರಿಜ್​​ ಮೋಹನ್​ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಕಥಕ್​ ನೃತ್ಯಗಾರರ ಮಹಾರಾಜ್​ ಕುಟುಂಬದಲ್ಲಿ.

Pandit Birju Maharaj Died: ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹಾರಾಜ್​ ನಿಧನ
ಬಿರ್ಜೂ ಮಹಾರಾಜ್​
Follow us
TV9 Web
| Updated By: Lakshmi Hegde

Updated on:Jan 17, 2022 | 8:19 AM

ಖ್ಯಾತ ಕಥಕ್​ ನೃತ್ಯಪಟು ಬಿರ್ಜೂ ಮಹಾರಾಜ್(Pandit Birju Maharaj)​ ನಿಧನರಾದರು. ಅವರಿಗೆ 83ವರ್ಷ ವಯಸ್ಸಾಗಿತ್ತು.  ಭಾನುವಾರ ತಡರಾತ್ರಿ ಹೃದಯಾಘಾತದಿಂದ ನಿಧನಹೊಂದಿದ್ದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ. ಕಲಾಸೇವೆಯನ್ನೇ ಬದುಕಾಗಿಸಿಕೊಂಡಿದ್ದ ಅವರು, ನಮ್ಮ ದೇಶದ ಎರಡನೇ ಅತ್ಯುನ್ನತ ಗೌರವ ಪುರಸ್ಕಾರ ಪದ್ಮ ವಿಭೂಷಣಕ್ಕೆ ಭಾಜನರಾಗಿದ್ದರು.  ಶಿಷ್ಯರು ಮತ್ತು ಅನುಯಾಯಿಗಳು ಬಿರ್ಜೂ ಮಹಾರಾಜ್​ರನ್ನು ಪ್ರೀತಿಯಿಂದ ಪಂಡಿತ್​ ಜೀ, ಮಹಾರಾಜ್​ ಜೀ ಎಂದೇ ಕರೆಯುತ್ತಿದ್ದರು.  ಬಿರ್ಜೂ ಮಹಾರಾಜ್​ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಡಯಾಲಿಸಿಸ್ ಕೂಡ ಮಾಡಲಾಗಿತ್ತು. ಭಾನುವಾರ ತಡ ರಾತ್ರಿ ಬಿರ್ಜೂ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರ ಆರೋಗ್ಯ ಹದಗೆಟ್ಟಿ,  ಪ್ರಜ್ಞಾಹೀನರಾದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು  ಅವರನ್ನು ಬದುಕಿಸಲು ಆಗಲಿಲ್ಲ ಎಂದು ವರದಿಯಾಗಿದೆ.

ಬಿರ್ಜೂ ಮಹಾರಾಜ್​ ಅವರ ಮೂಲ ಹೆಸರು ಬ್ರಿಜ್​​ ಮೋಹನ್​ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಕಥಕ್​ ನೃತ್ಯಗಾರರ ಮಹಾರಾಜ್​ ಕುಟುಂಬದಲ್ಲಿ. ಇವರ ತಂದೆ ಅರ್ಚನ್​ ಮಹಾರಾಜ್​ ಮತ್ತು ಚಿಕ್ಕಪ್ಪಂದಿರಾದ ಶಂಭು ಮತ್ತು ಲಚ್ಚು ಮಹಾರಾಜ್​ ಕೂಡ ಕಥಕ್​ ನೃತ್ಯಪಟುಗಳೇ ಆಗಿದ್ದರು. ಪಂಡಿತ್​ ಬಿರ್ಜೂ ಅವರು ಬಾಲ್ಯದಿಂದಲೇ, ತಮ್ಮ ತಂದೆಯೊಂದಿಗೆ ಸೇರಿ ನೃತ್ಯಪ್ರದರ್ಶನ ನೀಡಲು ಪ್ರಾರಂಭಿಸಿದ್ದರು. ಹರೆಯದಲ್ಲೇ ನೃತ್ಯ ಕಲಿಸಲು ಪ್ರಾರಂಭಿಸಿದ ಗುರುಸ್ಥಾನಕ್ಕೆ ಏರಿದರು. ರಾಂಪುರ ನವಾಬನ ದರ್ಬಾರ್​ನಲ್ಲೂ ನೃತ್ಯಪ್ರದರ್ಶನ ನೀಡಿದ್ದರು.

ಬಹುಮುಖ ಪ್ರತಿಭೆ ಪಂಡಿತ್​ ಬಿರ್ಜೂ ಮಹಾರಾಜ್​ ಅವರು ಕೇವಲ ನೃತ್ಯಪಟು ಆಗಿರಲಿಲ್ಲ. ಅದರೊಂದಿಗೆ ಅದ್ಭುತ ಗಾಯಕರೂ ಹೌದು. ತುಂಬ ಸುಂದರವಾಗಿ ಡ್ರಮ್​ ಬಾರಿಸುತ್ತಿದ್ದರು. ತಬಲಾ ಮತ್ತು ನಾಲ್​ಗಳನ್ನು ವಿಶೇಷವಾಗಿ ನುಡಿಸುತ್ತಿದ್ದರು. ಅಷ್ಟೇ ಅಲ್ಲ, ಯಾವುದೇ ವಿಧದ ಡ್ರಮ್​ ಆದರೂ ಸರಿ ತುಂಬ ನಿಖರವಾಗಿ ಬಾರಿಸುತ್ತಿದ್ದರು. ಗಾಯಕರಾಗಿದ್ದ ಅವರು, ಠುಮ್ರಿ, ದಾದ್ರಾ, ಭಜನ್​ ಮತ್ತು ಗಝಲ್​ಗಳನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಿದ್ದರು.

ಇದನ್ನೂ ಓದಿ: Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

Published On - 8:13 am, Mon, 17 January 22

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ