Zojila Tunnel Project: ಜೋಜಿಲಾ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಎಂಇಐಎಲ್: 5 ಕಿಮೀ ಉದ್ದದ ಸುರಂಗ ಕಾಮಗಾರಿ ಮುಕ್ತಾಯ

MEIL: ಜೊಜಿಲಾ ಸುರಂಗದ 5 ಕಿಮೀ ಸುರಂಗ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 18 ಕಿಮೀ ಉದ್ದದ ಸರ್ವಋತು ರಸ್ತೆಯ ಈ ಯೋಜನೆಯನ್ನು ದಾಖಲೆಯ 14 ತಿಂಗಳಲ್ಲಿ ಪೂರ್ಣಗೊಳಿಸಿರುವುದು ಸಾಧನೆ ಎನಿಸಿದೆ

Zojila Tunnel Project: ಜೋಜಿಲಾ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಎಂಇಐಎಲ್: 5 ಕಿಮೀ ಉದ್ದದ ಸುರಂಗ ಕಾಮಗಾರಿ ಮುಕ್ತಾಯ
ಜೋಜಿಲಾ ಸುರಂಗ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 16, 2022 | 10:24 PM

ದೆಹಲಿ: ಸವಾಲೆಸಿದ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ನಿರ್ವಹಿಸಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ಸ್​ ಲಿಮಿಟೆಡ್ (Megha Engineering & Infrastructures Limited – MEIL) ಜೊಜಿಲಾ ಸುರಂಗದ 5 ಕಿಮೀ ಸುರಂಗ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 18 ಕಿಮೀ ಉದ್ದದ ಸರ್ವಋತು ರಸ್ತೆಯ ಈ ಯೋಜನೆಯನ್ನು ದಾಖಲೆಯ 14 ತಿಂಗಳಲ್ಲಿ ಪೂರ್ಣಗೊಳಿಸಿರುವುದು ಸಾಧನೆ ಎನಿಸಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (National Highways and Infrastructure Development Corporation Ltd – NHIDCL) ಯೋಜನೆಯನ್ನು ಎಂಇಐಎಲ್ ಅನುಷ್ಠಾನಗೊಳಿಸುತ್ತಿದೆ. ಶ್ರೀನಗರ ಮತ್ತು ಲಡಾಖ್ ನಡುವೆ ಯಾವುದೇ ಅಡೆತಡೆಯಿಲ್ಲದೆ ವರ್ಷವಿಡೀ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಜೊಜಿಲಾ ರಸ್ತೆ ಯೋಜನೆಯಲ್ಲಿ ನೀಲ್​ಗ್ರಾರ್ 1, 2 ಮತ್ತು ಜೋಜಿಲಾ ಮುಖ್ಯ ಸುರಂಗಗಳನ್ನು ಈಗಾಗಲೇ ಅಭೂತಪೂರ್ವವಾಗಿ ನಿರ್ಮಿಸಲಾಗಿದೆ. ಹಿಮಪಾತ ಮತ್ತು ಶೀತಗಾಳಿಯಂಥ ಸವಾಲುಗಳ ನಡುವೆ ಸಮುದ್ರಮಟ್ಟಕ್ಕಿಂತ 3,528 ಮೀಟರ್​ಗಳಷ್ಟು ಎತ್ತರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಇದು ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರ ಸೌಲಭ್ಯವಿರುವ ಸುರಂಗ ಮಾರ್ಗವಾಗಿದೆ. ಭಾರತದ ಗಡಿ ರಕ್ಷಣೆ ದೃಷ್ಟಿಯಿಂದಲೂ ಇದು ಅತ್ಯಂತ ಮುಖ್ಯ ಯೋಜನೆಯಾಗಿದೆ. ‘ನಮ್ಮ ಎಂಇಐಎಲ್ ತಂಡವು ಯೋಜನೆಯನ್ನು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಬದ್ಧತೆ ಮತ್ತು ಪರಿಶ್ರಮದಿಂದ ಅನುಷ್ಠಾನಗೊಳಿಸಿದೆ’ ಎಂದು ಯೋಜನೆಯ ನಿರ್ದೇಶಕ ಹರ್​ಪಾಲ್ ಸಿಂಗ್ ಹೇಳಿದ್ದಾರೆ.

ಪ್ರಸಕ್ತ ಸಾಲಿನ ಚಳಿಗಾಲವು ಜಮ್ಮು ಮತ್ತು ಕಾಶ್ಮೀರ ಇತಿಹಾಸದಲ್ಲಿಯೇ ಅತ್ಯಂತ ತೀವ್ರವಾದುದು ಎಂದು ಪರಿಗಣಿಸಲಾಗಿದೆ. ಉಷ್ಣಾಂಶಗಳು ಕೆಲವೊಮ್ಮೆ -30 ಡಿಗ್ರಿ ಸೆಲ್ಷಿಯಸ್​ನಷ್ಟು ಕುಸಿದಿದ್ದೂ ಉಂಟು. ಯೋಜನೆಯಲ್ಲಿ ಮೂರು ಸುರಂಗಗಳು, ನಾಲ್ಕು ಸೇತುವೆಗಳು, ಹಿಮದಿಂದ ರಕ್ಷಿಸುವ ನಿರ್ಮಾಣಗಳು, ಕಲ್​ವರ್ಟ್​ಗಳು, ನೀರು ಸಂಗ್ರಹ ಜಲಾಶಯಗಳು, ನೀರು ನಿಯಂತ್ರಣ ವ್ಯವಸ್ಥೆ, ಸುರಂಗದ ಮಾರ್ಗದ ಆರಂಭ ಮತ್ತು ಅಂತ್ಯದಲ್ಲಿ ವಿಶೇಷ ನಿರ್ಮಾಣಗಳು ಸೇರಿದಂತೆ ಹಲವು ಮಹತ್ವದ ಎಂಜಿನಿಯರಿಂಗ್ ಸವಾಲುಗಳನ್ನು ಈ ಯೋಜನೆಯು ಒಳಗೊಂಡಿದೆ.

ಯೋಜನೆಯನ್ನು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಎಂಇಐಎಲ್ ಪರಿಶ್ರಮವನ್ನು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಮ್ಮ ಈ ಹಿಂದಿನ ಭೇಟಿಯ ಸಂದರ್ಭದಲ್ಲಿ ಹೊಗಳಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಡುವಣ ಸಂಪರ್ಕ ವ್ಯವಸ್ಥೆಯನ್ನು ಈ ಯೋಜನೆಯು ಸುಧಾರಿಸಲಿದೆ ಎಂದು ಆಶಯ ವ್ಯಕ್ತಪಡಿಸಿದ್ದರು.

ಜೊಜಿಲಾ ಸುರಂಗ ಯೋಜನೆಯ ಬಗ್ಗೆ ಭಾರತದ ಮೂಲಸೌಕರ್ಯ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಎಂಇಐಎಲ್​ಗೆ ಸರ್ವಋತು ಸಂಪರ್ಕ ಯೋಜನೆ (ಜೊಜಿಲಾ ಯೋಜನೆ) ಅನುಷ್ಠಾನದ ಹೊಣೆ ಒಪ್ಪಿಸಲಾಗಿದೆ. ಈ ಯೋಜನೆಯು ಕಾಶ್ಮೀರ ಕಣಿವೆಯನ್ನು ಲಡಾಖ್​ಗೆ ಸಂಪರ್ಕಿಸುತ್ತದೆ. ಅಕ್ಟೋಬರ್ 1, 2020ರಂದು ಯೋಜನೆಯನ್ನು ಎಂಇಐಎಲ್​ಗೆ ವಹಿಸಲಾಯಿತು. 32 ಕಿಲೊಮೀಟರ್ ಉದ್ದದ ಈ ರಸ್ತೆ ಕಾಮಗಾರಿಯು ಎರಡು ಭಾಗಗಳಾಗಿ ವಿಂಗಡನೆಯಾಗುತ್ತದೆ.

ಯೋಜನೆಯ ಮೊದಲ ಹಂತವು 18 ಕಿಮೀ ಉದ್ದವಿದ್ದು, ಸೊನಾಮರ್ಗ್ ಮತ್ತು ತಲ್​ತಲ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಲ್ಲಿ ಹಲವು ಮುಖ್ಯ ಸೇತುವೆಗಳು ಹಾಗೂ ಜೋಡಿ ಸುರಂಗಗಳಿವೆ. ಸಂಪರ್ಕ ರಸ್ತೆಗಳ ಕಾಮಗಾರಿ ಪೂರ್ಣಗೊಂಡ ನಂತರ, ಮೇ 2021ರಂದು ಮುಖ್ಯ ಯೋಜನೆಯ ಕಾಮಗಾರಿ ಆರಂಭಿಸಲಾಯಿತು. ಹಿಮಾಲಯದಲ್ಲಿ ಸುರಂಗ ತೋಡುವುದು ಯಾವಾಗಲೂ ಸವಾಲಿನ ಸಂಗತಿಯೇ ಆಗಿರುತ್ತದೆ. ಆದರೆ ಎಂಇಐಎಲ್ ಅತ್ಯಂತ ಸುರಕ್ಷಿತ, ಅತ್ಯುತ್ತಮ ಗುಣಮಟ್ಟ ಹಾಗೂ ನಿಗದಿತ ವೇಗದಲ್ಲಿ ಪೂರ್ಣಗೊಳಿಸಿದೆ.

ಜೊಜಿಲಾ ಮುಖ್ಯ ಸುರಂಗ ಮಾರ್ಗವು 13.3 ಕಿಮೀ ಉದ್ದವಿದೆ. ಈ ಕಾಮಗಾರಿಯು ಪೂರ್ಣ ವೇಗದಲ್ಲಿ ನಡೆಯುತ್ತಿದೆ. ಲಡಾಖ್ ಕಡೆಯಿಂದ 600 ಮೀಟರ್​ಗಳನ್ನು ಕ್ರಮಿಸಲಾಗಿದೆ. ಕಾಶ್ಮೀರದ ಕಡೆಯಿಂದ 300 ಮೀಟರ್ ಕ್ರಮಿಸಲಾಗಿದೆ. ಈ ಯೋಜನೆ ಪೂರ್ಣಗೊಳಿಸಲು ಸೆಪ್ಟೆಂಬರ್ 2026ರ ಗಡುವು ನೀಡಲಾಗಿದೆ.

ಎಂಇಐಎಲ್ ಬಗ್ಗೆ ಮೆಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿಯು ಬಹುಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಜಾಗತಿಕ ಕಂಪನಿಯಾಗಿದೆ. 1989ರಲ್ಲಿ ಹೈದರಾಬಾದ್​ನಲ್ಲಿ ಆರಂಭವಾದ ಕಂಪನಿಯು ಕಳೆದ 30 ವರ್ಷಗಳಲ್ಲಿ ವಿಶ್ವದ 60 ದೇಶಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೀರಾವರಿ, ನೈಸರ್ಗಿಕ ತೈಲ ಮತ್ತು ಅನಿಲ, ಸಾರಿಗೆ, ಇಂಧನ, ಎಲೆಕ್ಟ್ರಿಕ್ ವಾಹನಗಳು, ರಕ್ಷಣಾ ಮತ್ತು ಉತ್ಪಾದನಾ ವಲಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮೂಲಸೌಕರ್ಯ ರಂಗದ ದೊಡ್ಡ ಹೆಸರಾಗಿರುವ ಕಂಪನಿಯು ವಿಶ್ವದ ಅತಿದೊಡ್ಡ ಏತ ನೀರಾವರಿ ಯೋಜನೆಯಾದ ಕಾಳೇಶ್ವರಂ ಯೋಜನೆಯನ್ನು ತೆಲಂಗಾಣದಲ್ಲಿ ಅನುಷ್ಠಾನಗೊಳಿಸಿದೆ. ತನ್ನ ಅತ್ಯುನ್ನತ ಎಂಜಿನಿಯರಿಂಗ್ ಕೌಶಲ ಮತ್ತು ಸಾಮರ್ಥ್ಯದಿಂದ ಸವಾಲೆನಿಸುವ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.

ಇದನ್ನೂ ಓದಿ: Zojila Tunnel Project: ಜೋಜಿಲಾ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಎಂಇಐಎಲ್: 5 ಕಿಮೀ ಉದ್ದದ ಸುರಂಗ ಕಾಮಗಾರಿ ಮುಕ್ತಾಯ

ಇದನ್ನೂ ಓದಿ: ಮೇಘಾ ಕಂಪನಿಯ ಮೆಗಾ ಸಾಧನೆ! ಎಂಜಿನಿಯರಿಂಗ್​ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೆ ಸಾಕ್ಷಿ ಲಡಾಖ್​ನ ಜೋಜಿಲಾ ಸುರಂಗ ಮಾರ್ಗ

Published On - 10:09 pm, Sun, 16 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್