Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

ಪುಷ್ಯ ಪೂರ್ಣಿಮಾ ದಿನದಂದು, ಚಂದ್ರನು ತನ್ನ ರಾಶಿಚಕ್ರ ಚಿಹ್ನೆಯಾದ ಕಟಕ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ. ಇದು ಮನಸ್ಸು, ಮೆದುಳು ಮತ್ತು ನೀರಿನ ಅಂಶದ ಮೇಲೆ ಪರಿಣಾಮ ಬೀರುತ್ತದೆ.

Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ
ಪುಷ್ಯ ಪೂರ್ಣಿಮಾ
Follow us
TV9 Web
| Updated By: ಆಯೇಷಾ ಬಾನು

Updated on: Jan 17, 2022 | 6:55 AM

ಪುಷ್ಯ ಪೂರ್ಣಿಮಾ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಪುಷ್ಯ ಪೂರ್ಣಿಮಾದ ವಿಶೇಷ ಮಹತ್ವವನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪುಷ್ಯ ತಿಂಗಳ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ಪುಷ್ಯ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ಬಾರಿ ಈ ಶುಭ ದಿನ ಜನವರಿ 17 ರಂದು ಸೋಮವಾರ ಬಂದಿದೆ. ಈ ಪೂರ್ಣಿಮಾ ತಿಥಿಯಂದು ಜನರು ಗಂಗಾ, ಯಮುನಾ, ನರ್ಮದಾ, ಗೋದಾವರಿ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ದಿನವಿಡೀ ಉಪವಾಸ ಮಾಡುತ್ತಾರೆ. ಈ ದಿನದಂದು, ಜಪಕ್ಕೆ, ತಪಸ್ಸಿಗೆ ಮತ್ತು ದಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಬಾರಿ, ಪುಷ್ಯ ಪೂರ್ಣಿಮಾದಂದು ಗುರುಪುಷ್ಯ ಎಂಬ ಯೋಗವು ರಚಿತವಾಗುತ್ತದೆ. ಇದು ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಪುಷ್ಯ ಪೂರ್ಣಿಮಾ ವ್ರತ 2022 ದಿನಾಂಕ ಈ ವರ್ಷ ಪುಷ್ಯ ಪೂರ್ಣಿಮಾ ವ್ರತವನ್ನು ಜನವರಿ 17 ರಂದು ಆಚರಿಸಲಾಗುತ್ತದೆ.

ಪುಷ್ಯ ಪೂರ್ಣಿಮಾ 2022 ತಿಥಿ ಸಮಯ ಪೂರ್ಣಿಮಾ ತಿಥಿಯು ಜನವರಿ 17 ರಂದು ಬೆಳಿಗ್ಗೆ 3:18ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜನವರಿ 18 ರಂದು ಬೆಳಿಗ್ಗೆ 5:17 ಕ್ಕೆ ಕೊನೆಗೊಳ್ಳುತ್ತದೆ.

ಪುಷ್ಯ ಪೂರ್ಣಿಮಾ ದಿನದ ಮಹತ್ವ ಪುಷ್ಯ ಪೂರ್ಣಿಮಾ ದಿನದಂದು, ಚಂದ್ರನು ತನ್ನ ರಾಶಿಚಕ್ರ ಚಿಹ್ನೆಯಾದ ಕಟಕ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ. ಇದು ಮನಸ್ಸು, ಮೆದುಳು ಮತ್ತು ನೀರಿನ ಅಂಶದ ಮೇಲೆ ಪರಿಣಾಮ ಬೀರುತ್ತದೆ. ಈ ದಿನ, ಸೂರ್ಯ ಮತ್ತು ಚಂದ್ರರು ಮುಖಾಮುಖಿಯಾಗಿರುತ್ತಾರೆ, ಈ ಕಾರಣದಿಂದಾಗಿ ಸಮಪ್ತಕ ಯೋಗ ಸೃಷ್ಟಿಯಾಗುತ್ತದೆ. ಇದರೊಂದಿಗೆ ಈ ದಿನ ಗುರು ಪುಷ್ಯ ಯೋಗ ಮತ್ತು ಸರ್ವಾರ್ಥ ಸಿದ್ಧಿ ಎಂಬ ಎರಡು ಯೋಗವು ರೂಪುಗೊಳ್ಳುತ್ತದೆ. ಈ ದಿನ ಪ್ರೀತಿ ಯೋಗವೂ ಕೂಡ ಸೃಷ್ಟಿಯಾಗುತ್ತದೆ. ಪುಷ್ಯ ಪೂರ್ಣಿಮೆಯ ಬೆಳಿಗ್ಗೆ ರವಿ ಯೋಗವೂ ಕೂಡ ರೂಪುಗೊಳ್ಳುತ್ತದೆ. ಈ ಮಹಾಯೋಗಗಳೊಂದಿಗೆ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಶುಭ ಯೋಗದಲ್ಲಿ ನಾವು ಜಪವನ್ನು, ತಪಸ್ಸನ್ನು, ಸ್ನಾನವನ್ನು ಮತ್ತು ದಾನವನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ನಮ್ಮೆಲ್ಲಾ ಆಸೆಯೂ ಬಹುಬೇಗ ಈಡೇರುತ್ತದೆ.

ಪವಿತ್ರ ನದಿ ಸ್ನಾನ ಭಕ್ತಾದಿಗಳು ಪುಷ್ಯ ಪೂರ್ಣಿಮಾ ವ್ರತವನ್ನು ಸೂರ್ಯೋದಯದಿಂದ ಚಂದ್ರೋದಯದವರೆಗೆ ಆಚರಿಸುತ್ತಾರೆ. ಪುಷ್ಯ ಪೂರ್ಣಿಮೆಯ ಸಂದರ್ಭದಲ್ಲಿ, ಗ್ರಹಗಳಲ್ಲಿ ಮತ್ತು ಕ್ಷತ್ರಪುಂಜಗಳಲ್ಲಿ ಶುಭ ಸಂಯೋಜನೆಯು ಸೃಷ್ಟಿಯಾಗುತ್ತದೆ. ಚಂದ್ರನು ಈ ದಿನ ಪ್ರಾಣದಾಯಿನಿ, ಅಮೃತಮಯಿ ಕಿರಣಗಳನ್ನು ಹರಡುತ್ತಾನೆ ಮತ್ತು ಈ ಕಿರಣವು ನೀರಿನಲ್ಲಿ ಶಕ್ತಿಯನ್ನು ಹರಡುತ್ತದೆ. ಆದ್ದರಿಂದ ಈ ದಿನ ಸ್ನಾನ ಮಾಡುವುದರಿಂದ ಆರೋಗ್ಯಕರ ದೇಹ ಸೇರಿದಂತೆ ಆರೋಗ್ಯವು ನಮ್ಮದಾಗುತ್ತದೆ. ಮೋಕ್ಷವನ್ನು ಪಡೆಯಲು ಈ ದಿನದಂದು ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಪುಷ್ಯ ತಿಂಗಳು ಭಗವಾನ್ ಸೂರ್ಯ ನಾರಾಯಣನಿಗೆ ಸಮರ್ಪಿತವಾದ ದಿನವಾಗಿದೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪದ್ಧತಿಯಿದೆ. ನಿಮಗೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಗಂಗಾ ನೀರನ್ನು ಮನೆಯ ನೀರಿನಲ್ಲಿ ಹಾಕಿ, ವಿಷ್ಣುವನ್ನು ಸ್ಮರಿಸಿ ಅದರಲ್ಲಿ ಸ್ನಾನ ಮಾಡಬಹುದು.

ಪುಷ್ಯ ಹುಣ್ಣಿಮೆಯನ್ನೂ ಶಾಕಾಂಬರಿ ಪೂರ್ಣಿಮಾ ಎಂದೂ ಸಹ ಕರೆಯುತ್ತಾರೆ ಪುಷ್ಯ ತಿಂಗಳ ಹುಣ್ಣಿಮೆಯ ದಿನದಂದು, ತಾಯಿ ಭಗವತಿ ತನ್ನ ಭಕ್ತರ ಕರೆಯ ಮೇರೆಗೆ ಶಾಕಾಂಭರಿ ದೇವಿಯಾಗಿ ಅವತಾರವನ್ನು ತಾಳಿದಳು. ಆದ್ದರಿಂದ ಈ ಹುಣ್ಣಿಮೆಯನ್ನು ಶಾಕಾಂಬರಿ ಪೂರ್ಣಿಮಾ ಎಂದೂ ಸಹ ಕರೆಯುತ್ತಾರೆ. ಮತ್ತು ಈ ದಿನವನ್ನು ತಾಯಿ ಶಾಕಾಂಬರಿ ಜಯಂತಿ ಎಂದೂ ಸಹ ಕೆಲ ಕಡೆ ಆಚರಿಸುತ್ತಾರೆ.

ಇದನ್ನೂ ಓದಿ: ಪರಿಷತ್ ಆಪರೇಷನ್ ಆಟ ಶುರು: ಬೆಳಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಪೂರ್ಣಿಮಾ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ