ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು

ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು
ಸೂರ್ಯನಾರಾಯಣ ದೇವಾಲಯ

ಪ್ರಮುಖವಾಗಿ ಯಾಜ್ನವಲ್ಕರ ಜಯಂತಿಯನ್ನು ಆಚರಣೆ ಮಾಡುತ್ತಾ ಪ್ರತಿದಿನ ಸೂರ್ಯೋಪಾಸನೆಗಳನ್ನು ಮಾಡುತ್ತಿದ್ದ ಶುಕ್ಷಯಜುರ್ವೇದಿಗಳು ಸುಮಾರು ನೂರಾರು ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿದರು.

TV9kannada Web Team

| Edited By: sandhya thejappa

Aug 22, 2021 | 5:21 PM

ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯದಲ್ಲಿ ಅತ್ಯಂತ ವಿಶೇಷವಾದ ಹಾಗೂ ಅಪರೂಪವಾದ ಸೂರ್ಯನಾರಾಯಣ ಸ್ವಾಮಿ ದೇವಾಲಯವಿದೆ. ಈ ಪ್ರದೇಶದಲ್ಲಿ ಯಾಜ್ನವಲ್ಕ ಆಶ್ರಮವೊಂದು ನೂರಾರು ವರ್ಷಗಳಿಂದ ಇತ್ತು. ಇಲ್ಲಿ ಶುಕ್ಲ ಯಜುರ್ವೇದಿಗಳು ಸೂರ್ಯನ ಆರಾಧನೆ ಮಾಡುತ್ತಿದ್ದರು. ಆದರೆ ಅಷ್ಟ ಗ್ರಹ ಕೂಟ ಒಂದಾದ ಸಂದರ್ಭದಲ್ಲಿ ಇಲ್ಲಿ ಸೂರ್ಯ ದೇವಾಲಯವನ್ನು ಸ್ಥಾಪನೆ ಮಾಡಲಾಯಿತು ಎಂಬ ಪ್ರತೀತಿ ಇದೆ. ಪ್ರಮುಖವಾಗಿ ಮುಳಬಾಗಿಲು ಪಟ್ಟಣದಲ್ಲಿ ಶುಕ್ಲ ಯಜುರ್ವೇದಿಗಳು ಯಾಜ್ನವಲ್ಕರ ಜಯಂತಿ, ರಥಸಪ್ತಮಿ, ಸೂರ್ಯೋಪಾಸನೆ ಸೇರಿದಂತೆ ಹಲವು ಆಚರಣೆಗಳನ್ನು ಮಾಡುತ್ತಾ ಬಂದಿದ್ದರು. ಈ ವೇಳೆ ಮುಳಬಾಗಿಲು ಹರಪ್ಪನಾಯಕನಹಳ್ಳಿ ಬಿಸ್ಸೇಗೌಡರ ವಂಶಸ್ಥರು ಸಹಾಯದೊಂದಿಗೆ ಇಲ್ಲಿ ನವಗ್ರಹಗಳ ಅಧಿಪತಿ ಸೂರ್ಯ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದರು. ಅದರಂತೆ ಇಲ್ಲಿ ಯಾಜ್ನವಲ್ಕರ ಮೂರ್ತಿಯ ಜೊತೆಗೆ ಸೂರ್ಯದೇವರ ದೇವಾಲಯವನ್ನು ನಿರ್ಮಾಣ ಮಾಡಲಾಯಿತು.

ಸೂರ್ಯ ಉಪಾಸನೆಯಿಂದ ಏನೇನಾಗುತ್ತೆ ಗೊತ್ತಾ? ಪ್ರಮುಖವಾಗಿ ಯಾಜ್ನವಲ್ಕರ ಜಯಂತಿಯನ್ನು ಆಚರಣೆ ಮಾಡುತ್ತಾ ಪ್ರತಿದಿನ ಸೂರ್ಯೋಪಾಸನೆಗಳನ್ನು ಮಾಡುತ್ತಿದ್ದ ಶುಕ್ಷಯಜುರ್ವೇದಿಗಳು ಸುಮಾರು ನೂರಾರು ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿದರು. ಪ್ರಮುಖವಾಗಿ ಸೂರ್ಯ ದೇವರ ಆರಾಧನೆಯಿಂದ ಉಷ್ಣಾಂಶ ಕಡಿಮೆಯಾಗುತ್ತದೆ. ತೇಜಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಮಕ್ಕಳು, ಮದುವೆಯಾಗಿ ಮಕ್ಕಳಾಗದವರು, ವ್ಯವಸಾಯದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ರೈತರು, ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸೋದು ವಾಡಿಕೆ.

ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು ಮನುಷ್ಯನ ದೇಹದ ಪ್ರಮುಖ ಅಂಗ, ಶಿರವನ್ನು ಸೂರ್ಯನಿಗೆ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ದೇಹ ಸಂಬಂಧಿ ಯಾವುದೇ ಕಾಯಿಲೆಗಳಿದ್ದರೂ ಇಲ್ಲಿಗೆ ಭಾನುವಾರ ಬಂದು ಸೂರ್ಯದೇವರನ್ನು ಒಲಿಸಿಕೊಳ್ಳುವ ಆದಿತ್ಯ ಹೃದಯ ಪಠನೆ ಮಾಡಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕ ಇದೆ. ಶ್ರೀರಾಮನೂ ರಾಮಾಯಣ ಯುದ್ಧಕ್ಕೂ ಮುನ್ನ ಆಧಿತ್ಯ ಹೃದಯವನ್ನು ಪಠನೆ ಮಾಡಿದ್ದರಿಂದಲೇ ರಾಮಾಯಣ ಯುದ್ಧದಲ್ಲಿ ಜಯಗಳಿಸಿದ್ದ ಅನ್ನೋ ಮಾತಿದೆ. ಈ ಕಾರಣ ಇಲ್ಲಿ ಪ್ರತಿ ಭಾನುವಾರ ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಎಲ್ಲಾ ಧರ್ಮದವರು ಈ ದೇವಾಲಯಕ್ಕೆ ಸಾಮಾನ್ಯ ಭಕ್ತರಂತೆ ಬಂದು ತಮ್ಮ ಹರಕೆಯನ್ನು ಈಡೇರಿಸಿಕೊಳ್ಳುತ್ತಾರೆ.

ರಥಸಪ್ತಮಿಯಂದು ನಡೆಯಲಿದೆ ಸೂರ್ಯನ ಉತ್ಸವ ಆದಿತ್ಯಾದಿ ನವಗ್ರಹ ಅಧಿಪತಿಯಾದ ಸೂರ್ಯದೇವನಿಗೆ ಪ್ರಿಯವಾದ ದಿನ ಭಾನುವಾರ. ಹಾಗಾಗಿ ಪ್ರತಿ ಭಾನುವಾರ ಈ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಏರ್ಪಡಿಸಲಾಗುತ್ತದೆ. ಜೊತೆಗೆ ಈ ದೇವಾಲಯದಲ್ಲಿ ರಥಸಪ್ತಮಿಯಂದು ಸೂರ್ಯೋಪಾಸನೆ, ಮಾರ್ತಾಂಡ ಹೋಮ, ಸೇರಿದಂತೆ ರಥೋತ್ಸವಗಳು ನಡೆಯುತ್ತದೆ. ಜೊತೆಗೆ ಯಾಜ್ನಮಲ್ಕರ ಜಯಂತಿ, ಸೂರ್ಯ ಜಯಂತಿ, ನವರಾತ್ರಿ ಉತ್ಸವಗಳು, ಧನುರ್ಮಾಸಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

ಇದನ್ನೂ ಓದಿ

Yakshagana: ಭೂಜಾತೆ ಸೀತೆಗೆ ಭೂಮಿಯಷ್ಟೇ ಸಹನೆ; ಅದು ನಮಗೆ ದಾರಿದೀಪ

Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

(There is a very special and rare Suryanarayana Swamy Temple in Kolar)

Follow us on

Related Stories

Most Read Stories

Click on your DTH Provider to Add TV9 Kannada