Swastika: 6000 ವರ್ಷಗಳ ಇತಿಹಾಸ ಹೊಂದಿರುವ ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ!

Swastika: 6000 ವರ್ಷಗಳ ಇತಿಹಾಸ ಹೊಂದಿರುವ ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ!
6000 ವರ್ಷಗಳ ಇತಿಹಾಸ ಹೊಂದಿರುವ ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ!

ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು 6,000 ವರ್ಷದ ಇತಿಹಾಸವಿದೆ. ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ.

TV9kannada Web Team

| Edited By: sadhu srinath

Jan 17, 2022 | 6:06 AM

ಭಾರತೀಯರು ಸಾಮಾನ್ಯವಾಗಿ ತಮ್ಮ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ (Swastika) ಹಾಕಿಸಿರುತ್ತಾರೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ (Hinduism) ವಿಶೇಷ ಮಹತ್ವವಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು 6,000 ವರ್ಷದ ಇತಿಹಾಸವಿದೆ. ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ. ಮನೆಯಲ್ಲಿ ಧನಾತ್ಮಕತೆ ಮೂಡತ್ತದೆ (Auspicious) ಎಂಬ ನಂಬಿಕೆ ಇದೆ. ಹಾಗಾದರೆ ಸ್ವಸ್ತಿಕದಿಂದ ಮನೆಗೆ ಯಾವ ರೀತಿ ಒಳಿತಾಗುತ್ತದೆ ? ಗಣೇಶನನ್ನು ಪ್ರತಿನಿಧಿಸುವ ಈ ಚಿಹ್ನೆಯ ವಿಶೇಷವೇನು ? ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಹಿಂದೂ ಧರ್ಮದ ಪ್ರಕಾರ ಸ್ವಸ್ತಿಕ ಚಿಹ್ನೆ ಪ್ರಾಮುಖ್ಯತೆ, ಪ್ರಾಧಾನ್ಯತೆ ಏನೆಂಬುದರ ವಿವರ ಇಲ್ಲಿ ನೀಡಲಾಗಿದೆ. ಪವಿತ್ರವಾದ ಸ್ವಸ್ತಿಕ ಆಕಾರದಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಸ್ವಸ್ತಿಕ (卐) ಲಾಂಛನದ ನಾಲ್ಕು ಬಾಹುಗಳು 90 ಡಿಗ್ರಿಯಲ್ಲಿ ಬಾಗಿರುತ್ತವೆ. ಸಾಮಾನ್ಯವಾಗಿ ಒಂದು ಸಮಬಾಹು ಕ್ರಾಸ್ ಆಕಾರದ ರೂಪವನ್ನು ತೆಗೆದುಕೊಳ್ಳುವ ಒಂದು ಸಂಕೇತ.

ಸ್ವಸ್ತಿಕ ಆಕಾರದ ಆಭರಣಗಳ ಅತ್ಯಂತ ಪ್ರಾಚೀನ ಪುರಾತತ್ವ ಪುರಾವೆಗಳು ಸಿಂಧೂ ಕಣಿವೆಯ ನಾಗರಿಕತೆ, ಮತ್ತು ಜೊತೆಗೆ ಮೆಡಿಟರೇನಿಯನ್ ಶಾಸ್ತ್ರೀಯ ಪ್ರಾಚೀನತೆ ಹಾಗು ಪ್ರಾಚೀನ ಶಿಲಾಯುಗದ ಯೂರೋಪ್‍ನ ಕಾಲಮಾನದ್ದೆಂದು ನಿರ್ಧರಿಸಲಾಗಿದೆ. ಟರ್ಕಿ, ಭಾರತ, ಇರಾನ್, ನೇಪಾಳ, ಚೀನಾ, ಜಪಾನ್, ಕೊರಿಯಾ ಮತ್ತು ಯೂರೋಪ್ ಅನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ನಾನಾ ಪ್ರಾಚೀನ ನಾಗರಿಕತೆಗಳಲ್ಲೂ ಸ್ವಸ್ತಿಕ ಚಿಹ್ನೆಗಳನ್ನು ಬಳಸಲಾಗಿದೆ. ಇಂತಹ ನಿಗೂಢ ಸ್ವಸ್ತಿಕ ಚಿಹ್ನೆ ಮಹತ್ವಗಳ ಬಗ್ಗೆ ತಿಳಿಯೋಣ ಬನ್ನೀ.

1. ಸ್ವಸ್ತಿಕ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ  ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ.

2. ಧನಾತ್ಮಕತೆ ಸೃಷ್ಟಿಸುವ ಸ್ವಸ್ತಿಕ್: ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು  ವಾಸ್ತು ಶಾಸ್ತ್ರವೂ ಹೇಳುತ್ತದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಸಿಟಿವ್ ಎನರ್ಜಿಯನ್ನು ವೃದ್ಧಿಸುತ್ತದೆ.

3. ದುಷ್ಟ  ಶಕ್ತಿ ದಮನ: ಸ್ವಸ್ತಿಕ ಚಿಹ್ನೆಯನ್ನು ಮನೆ ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆಯಿದೆ.

4. ಸ್ವಸ್ತಿಕ್ ಲಾಂಛನದ ಮೇಲೆ ದೇವರ ತೀರ್ಥ, ಗಂಗಾ ಜಲ ಮತ್ತು ಹಸುವಿನ ಗಂಜಲವನ್ನು ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚಾಗುತ್ತದೆ.

5. ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ಧೂಳು ಬೀಳದೆ ಇರುವ ಹಾಗೆ ಆಗಾಗ ಒರೆಸುತ್ತಿರಬೇಕು.

6. ಸ್ವಸ್ತಿಕ್ ಲಾಂಛನವು ಹಿತ್ತಾಳೆ ಅಥವಾ ಪಂಚಲೋಹದಿಂದ ಮಾಡಿದ್ದರೆ ಒಳ್ಳೆಯದು.

7. ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

8. ಸ್ವಸ್ತಿಕ್ ಲಾಂಛನವು ಮನೆಯ ಸುತ್ತಲಿನ ಜಾಗವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

9. ಮನೆಯ ಗೇಟ್ ಹಾಗೂ ಕಾಂಪೌಂಡ್ ಗೋಡೆ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

ಇದನ್ನೂ ಓದಿ

‘ಜಿಮ್​ನಲ್ಲಿ ಜೀವಿಸುವ ಸೈಕೋ’ ಅಂತ ಕರೆದುಕೊಂಡ ರಶ್ಮಿಕಾ ಮಂದಣ್ಣ; ಹೊಸ ಫೋಟೋ ವೈರಲ್​

ಲತಾ ಮಂಗೇಶ್ಕರ್​ಗೆ ಐಸಿಯುನಲ್ಲೇ ಮುಂದುವರಿದ ಚಿಕಿತ್ಸೆ; ಇನ್ನೂ 10 ದಿನ ವಿಶೇಷ ನಿಗಾದಲ್ಲಿ ಗಾಯಕಿ

Follow us on

Related Stories

Most Read Stories

Click on your DTH Provider to Add TV9 Kannada