‘ಜಿಮ್​ನಲ್ಲಿ ಜೀವಿಸುವ ಸೈಕೋ’ ಅಂತ ಕರೆದುಕೊಂಡ ರಶ್ಮಿಕಾ ಮಂದಣ್ಣ; ಹೊಸ ಫೋಟೋ ವೈರಲ್​

ರಶ್ಮಿಕಾ ಮಂದಣ್ಣ ಈ ಫೋಟೋ ಪೋಸ್ಟ್​ ಮಾಡಿ ಒಂದು ಗಂಟೆ ಕಳೆಯುವುದರೊಳಗೆ ಬರೋಬ್ಬರಿ 10 ಲಕ್ಷ ಜನರು ಲೈಕ್​ ಮಾಡಿದ್ದಾರೆ. 6 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​ ಮಾಡಿದ್ದಾರೆ.

‘ಜಿಮ್​ನಲ್ಲಿ ಜೀವಿಸುವ ಸೈಕೋ’ ಅಂತ ಕರೆದುಕೊಂಡ ರಶ್ಮಿಕಾ ಮಂದಣ್ಣ; ಹೊಸ ಫೋಟೋ ವೈರಲ್​
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Jan 15, 2022 | 4:29 PM

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ದಿನದಿಂದ ದಿನಕ್ಕೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತಮ್ಮ ಪ್ರತಿದಿನದ ಚಟುವಟಿಕೆಗಳ ಬಗ್ಗೆ ಇನ್​ಸ್ಟಾಗ್ರಾಮ್​ (Rashmika Mandanna Instagram) ಮೂಲಕ ರಶ್ಮಿಕಾ ಅಪ್​ಡೇಟ್​ ನೀಡುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆಯಲ್ಲಿ ಸಂಪರ್ಕದಲ್ಲಿರುತ್ತಾರೆ. ಈಗ ಅವರೊಂದು ಹೊಸ ಫೋಟೋ ಅಪ್​ಲೋಡ್​ ಮಾಡಿಕೊಂಡಿದ್ದು, ಅದರ ಕ್ಯಾಪ್ಷನ್​ ಗಮನ ಸಳೆಯುತ್ತಿದೆ. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ರಶ್ಮಿಕಾ ವರ್ಕೌಟ್​ ಮಾಡೋದನ್ನು ತಪ್ಪಿಸುವುದಿಲ್ಲ. ಹೆಚ್ಚು ಹೊತ್ತು ಅವರು ಜಿಮ್​ನಲ್ಲಿ ಕಳೆಯುತ್ತಾರೆ. ‘ನಾನು ಜಿಮ್​ನಲ್ಲಿಯೇ ಜೀವಿಸುವ ಸೈಕೋ ಅಂತ ಸಾಬೀತಾಯ್ತು’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್​ ಆಗುತ್ತಿದೆ.

‘ಪುಷ್ಪ’ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಚಿತ್ರರಂಗದಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಫಿಟ್ನೆಸ್​ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ ಜಿಮ್​ನಲ್ಲಿ ಕಸರತ್ತು ನಡೆಸುತ್ತಾರೆ. ಆ ಕಾರಣದಿಂದಲೇ ಅವರು ಈ ರೀತಿ ಕ್ಯಾಪ್ಷನ್​ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಈ ಫೋಟೋ ಪೋಸ್ಟ್​ ಮಾಡಿ ಒಂದು ಗಂಟೆ ಕಳೆಯುವುದರೊಳಗೆ ಬರೋಬ್ಬರಿ 10 ಲಕ್ಷ ಜನರು ಲೈಕ್​ ಮಾಡಿದ್ದಾರೆ. 6 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 300 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

‘ಪುಷ್ಪ’ ಚಿತ್ರಕ್ಕೆ ಭಾರಿ ಗೆಲುವು ಸಿಕ್ಕ ಬಳಿಕ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡ ಹೆಚ್ಚಿದೆ ಎಂಬ ಬಗ್ಗೆ ಗುಸುಗುಸು ಹಬ್ಬಿದೆ. ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್​ ಗೆದ್ದ ಬಳಿಕ ಎರಡನೇ ಪಾರ್ಟ್​ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್​ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು

ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್​ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ