Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು

Rasmika Madona: ‘ಪುಷ್ಪ’ ಸಿನಿಮಾ ಪೂರ್ಣಗೊಂಡ ನಂತರದಲ್ಲಿ ಕೊನೆಯಲ್ಲಿ ಎಲ್ಲಾ ಕಲಾವಿದರ ಫೋಟೋವನ್ನು ಹಾಕಿ ಹೆಸರು ತೋರಿಸಲಾಗಿದೆ. ಅಲ್ಲು ಅರ್ಜುನ್​, ಫಹಾದ್​ ಫಾಸಿಲ್​ ಆದ ಬಳಿಕ ರಶ್ಮಿಕಾ ಅವರ ಹೆಸರು ಬಂದಿದೆ.

ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು
ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 08, 2022 | 2:26 PM

ಅಲ್ಲು ಅರ್ಜುನ್ (Allu Arjun)​ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ ಸಿನಿಮಾ (Pushpa Movie) ಚಿತ್ರಮಂದಿರದಲ್ಲಿ ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಈ ಸಿನಿಮಾ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ (Amazon Prime Video) ರಿಲೀಸ್​ ಆಗಿದೆ. ಈ ಸಿನಿಮಾಗೆ ಒಟಿಟಿಯಲ್ಲೂ ಮೆಚ್ಚುಗೆ ಕೇಳಿ ಬರುತ್ತಿದೆ. ರಶ್ಮಿಕಾ ಮಂದಣ್ಣ ಅವರನ್ನು ನಿರ್ದೇಶಕ ಸುಕುಮಾರ್ (Sukumar)​ ಅವರು ಹೊಗಳಿದ್ದರು. ಆದರೆ, ಈಗ ಅದೇ ಚಿತ್ರತಂಡದಿಂದ ಅಚಾತುರ್ಯ ಒಂದು ನಡೆದು ಹೋಗಿದೆ. ರಶ್ಮಿಕಾ ಹೆಸರನ್ನು ತಪ್ಪಾಗಿ ಹಾಕಲಾಗಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ರಶ್ಮಿಕಾ ಅಭಿಮಾನಿಗಳು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ಕೆಲವರು ಗರಂ ಆಗಿದ್ದಾರೆ.

‘ಪುಷ್ಪ’ ಸಿನಿಮಾ ಪೂರ್ಣಗೊಂಡ ನಂತರದಲ್ಲಿ ಕೊನೆಯಲ್ಲಿ ಎಲ್ಲಾ ಕಲಾವಿದರ ಫೋಟೋವನ್ನು ಹಾಕಿ ಹೆಸರು ತೋರಿಸಲಾಗಿದೆ. ಅಲ್ಲು ಅರ್ಜುನ್​, ಫಹಾದ್​ ಫಾಸಿಲ್​ ಆದ ಬಳಿಕ ರಶ್ಮಿಕಾ ಅವರ ಹೆಸರು ಬಂದಿದೆ. ಎಲ್ಲಾ ಹೆಸರುಗಳು ಇಂಗ್ಲಿಷ್​ನಲ್ಲಿವೆ. ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ರಶ್ಮಿಕಾ ಮಂದಣ್ಣ ಬದಲು, ರಸ್ಮಿಕಾ ಮಡೋನಾ ಎಂದು ಬರೆಯಲಾಗಿದೆ. ಚಿತ್ರತಂಡ ಮಾಡಿದ ಈ ಅಚಾತುರ್ಯಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

ರಶ್ಮಿಕಾ ಸ್ಯಾಂಡಲ್​ವುಡ್​ನಿಂದ ಟಾಲಿವುಡ್​ಗೆ ಹೋದವರು. ಹೀಗಾಗಿ, ಅಲ್ಲಿಯವರಿಗೆ ರಶ್ಮಿಕಾ ಅವರ ಸರ್​ನೇಮ್​ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ. ಮಂದಣ್ಣ ಎಂಬುದು ಅವರಿಗೆ ಹೊಸದೂ ಇರಬಹುದು. ಈ ಕಾರಣಕ್ಕೆ ತಿಳಿಯದೇ ಮಡೋನಾ ಎಂದು ಹಾಕಿರಬಹುದು. ಆದರೆ, ನಟಿಯ ಹೆಸರನ್ನೇ ಈ ರೀತಿ ತಪ್ಪಾಗಿ ಬರೆದಿರುವುದು ಎಷ್ಟು ಸರಿ ಎನ್ನುವ ವಿಚಾರವನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ನಿರ್ದೇಶಕರು ಈ ಬಗ್ಗೆ ಏಕೆ ಗಮನ ಹರಿಸಿಲ್ಲ ಎಂಬ ಪ್ರಶ್ನೆ ಅನೇಕರಿಂದ ಬಂದಿದೆ.

‘ಪುಷ್ಪ’ ಸಿನಿಮಾ ರಿಲೀಸ್​ ಆಗಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಮಹೇಶ್​ ಬಾಬು ಅವರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಸುಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆದರೆ, ಎಲ್ಲಿಯೂ ಅವರು ರಶ್ಮಿಕಾ ನಟನೆ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಿಲ್ಲ. ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ನಟನೆ ಬಗ್ಗೆ ಪಾಸಿಟಿವ್​ ರೆಸ್ಪಾನ್ಸ್​ ಬಂದಿದೆ. ಆದರೆ, ಕೆಲವರು ಅವರ ಪಾತ್ರದ ಬಗ್ಗೆ ಅಷ್ಟಾಗಿ ಮೆಚ್ಚುಗೆ ಸೂಚಿಸಿಲ್ಲ. ಈಗ ಮಹೇಶ್​ ಬಾಬು ಕೂಡ ಈ ಬಗ್ಗೆ ಮಾತನಾಡದೆ ಇರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಅವರಿಗೆ ಪಾತ್ರ ಇಷ್ಟವಾಗಿಲ್ಲವೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಕೆಲವರು ಮಹೇಶ್​ ಬಾಬುಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Samantha: ‘ಹೂ ಅಂತೀಯಾ ಮಾವ..’ ಡ್ಯಾನ್ಸ್​ ಹಿಂದಿನ ಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ ಸಮಂತಾ  

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ