Samantha: ‘ಹೂ ಅಂತೀಯಾ ಮಾವ..’ ಡ್ಯಾನ್ಸ್​ ಹಿಂದಿನ ಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ ಸಮಂತಾ  

ಸಮಂತಾ ‘ಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾ ರಿಲೀಸ್​ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. ಹೀಗಾಗಿ, ಪ್ರ್ಯಾಕ್ಟೀಸ್​ ಮಾಡೋಕೂ ಹೆಚ್ಚು ಅವಕಾಶ ಇರಲಿಲ್ಲ.

Samantha: ‘ಹೂ ಅಂತೀಯಾ ಮಾವ..’ ಡ್ಯಾನ್ಸ್​ ಹಿಂದಿನ ಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ ಸಮಂತಾ  
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 07, 2022 | 3:21 PM

ಐದು ಭಾಷೆಗಳಲ್ಲಿ ತೆರೆಗೆ ಬಂದ ‘ಪುಷ್ಪ’ ಸಿನಿಮಾ (Pushpa Movie) ಗೆದ್ದು ಬೀಗಿದೆ. ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಮೊದಲೇ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ನಿರ್ದೇಶಕ ಸುಕುಮಾರ್ (Sukumar)​ ಹಾಗೂ ನಟ ಅಲ್ಲು ಅರ್ಜುನ್ (Allu Arjun)​ ಬತ್ತಳಿಕೆಗೆ ಮತ್ತೊಂದು ಗೆಲುವು ದಾಖಲಾಗಿದೆ. ಸಿನಿಮಾ ಗೆಲುವಿನಲ್ಲಿ ಚಿತ್ರದ ವಿಶೇಷ ಹಾಡು ‘ಹೂ ಅಂತೀಯಾ ಮಾವ..’ ಪಾತ್ರ ಕೂಡ ದೊಡ್ಡದಿದೆ. ಈ ಹಾಡಿಗೆ ಡ್ಯಾನ್ಸ್​ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಮಂತಾ ಇದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ಸಮಂತಾ ‘ಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾ ರಿಲೀಸ್​ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. ಹೀಗಾಗಿ, ಪ್ರ್ಯಾಕ್ಟೀಸ್​ ಮಾಡೋಕೂ ಹೆಚ್ಚು ಅವಕಾಶ ಇರಲಿಲ್ಲ. ಆದಾಗ್ಯೂ ಸಮಂತಾ ಹೆಚ್ಚು ಸಮಯ ವ್ಯಯಿಸಿ ಈ ಹಾಡಿನ ಹೆಜ್ಜೆ ಕಲಿತಿದ್ದಾರೆ. ಪ್ರ್ಯಾಕ್ಟೀಸ್​ ಹೇಗಿತ್ತು ಮತ್ತು ಸ್ಟೆಪ್​ ಹೇಳಿಕೊಟ್ಟವರು ಯಾರು ಎಂಬುದನ್ನು ವಿವರಿಸಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಸಮಂತಾ ಪ್ರ್ಯಾಕ್ಟಿಸ್​ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಡ್ಯಾನ್ಸ್​ ಹೇಳಿಕೊಡುತ್ತಿರುವ ಯಾರೂ ಕೂಡ ಬೆವರುತ್ತಿರಲಿಲ್ಲ. ಆದರೆ, ಸಮಂತಾ ಮುಖದಲ್ಲಿ ಬೆವರು ನೀರು ಹರಿದಂತೆ ಹರಿದು ಬರುತ್ತಿತ್ತು. ಅಲ್ಲದೆ, ತಾವು ತುಂಬಾನೇ ಸುಸ್ತಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. 9 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ನೋಡಿದ್ದಾರೆ. ‘ಊ ಅಂಟಾವಾ ಮಾವ..’ ಹಾಡು ಬರೋಬ್ಬರಿ 121 ಮಿಲಿಯನ್​ (12.1 ಕೋಟಿ) ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್​ ಕೂಡ ರಿಲೀಸ್​ ಆಗಿದ್ದು ಅದು 1.8 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಒಟಿಟಿಯಲ್ಲಿ ಪುಷ್ಪ..

ದೇಶಾದ್ಯಂತ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆ ಕಾರಣದಿಂದ ಒಂದು ವರ್ಗದ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಲು ಹಿಂಜರಿದಿದ್ದರು. ಅವರೆಲ್ಲರೂ ಈಗ ಮನೆಯಲ್ಲೇ ‘ಪುಷ್ಪ’ ಚಿತ್ರ ನೋಡಬಹುದು. ಈಗ ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ಶೇ.50ರಷ್ಟು ಆಸನಮಿತಿ ನಿರ್ಬಂಧ ಹೇರಲಾಗಿದೆ. ಹಾಗಾಗಿ ಗಲ್ಲಾಪೆಟ್ಟಿಗೆ ಕಲೆಕ್ಷನ್​ ನಿಧಾನಕ್ಕೆ ಕುಸಿದಿದೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸಿನಿಮಾ ಪ್ರಸಾರ ಮಾಡಲು ಇದು ಸೂಕ್ತ ಸಮಯ ಎಂದು ಚಿತ್ರತಂಡ ನಿರ್ಧರಿಸಿದೆ. ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಜ.7ರಂದು ‘ಪುಷ್ಪ’ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಪುಷ್ಪ ಚಿತ್ರದ ;ಓ ಅಂಟಾವಾ; ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ಡ್ಯಾನ್ಸಿಂಗ್​ ಡ್ಯಾಡ್​: ವಿಡಿಯೋ ವೈರಲ್​ 

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು? 

Published On - 1:44 pm, Fri, 7 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ