ಪುಷ್ಪ ಚಿತ್ರದ ‘ಓ ಅಂಟಾವಾ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ಡ್ಯಾಡ್: ವಿಡಿಯೋ ವೈರಲ್
ಭಾರತೀಯ ಚಿತ್ರಗಳ ಹಾಡಿಗೆ ಹೆಚ್ಚೆ ಹಾಕಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ರಿಕಿ ಪೌಂಡ್ ಇದೀಗ ಪುಷ್ಟ ಚಿತ್ರದ ಹಾಡಿಗೂ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಹಾಗೂ ಸಮಂತಾ ಅಭಿನಯದ ಪುಷ್ಟ ಚಿತ್ರದ ಹಾಡು ಸಖತ್ ವೈರಲ್ ಆಗಿದೆ. ಪುಷ್ಟ ಚಿತ್ರದ ಓ ಅಂಟವಾ ಮಾಮಾ ಹಾಡು ಎಲ್ಲರ ನೆಚ್ಚಿನ ಹಾಡಾಗಿದೆ. ಇನ್ಸ್ಟಾಗ್ರಾಮ್ನಲ್ಲಂತೂ ಹಾಡಿನ ರೀಲ್ಸ್ ಮಾಡಿ ಲಕ್ಷಾಂತರ ಜನ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಯುಎಸ್ ರಿಕಿ ಪೌಂಡ್ ಎನ್ನುವ ವ್ಯಕ್ತಿ ಓಅಂಟವಾ ಮಾಮ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಭಾರತೀಯ ಚಿತ್ರಗಳ ಹಾಡಿಗೆ ಹೆಚ್ಚೆ ಹಾಕಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ರಿಕಿ ಪೌಂಡ್ ಇದೀಗ ಪುಷ್ಟ ಚಿತ್ರದ ಹಾಡಿಗೂ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಕಿ ಅವರ ನೃತ್ಯದ ವೀಡಿಯೋ ಸಿಕ್ಕಪಟ್ಟೆ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹಂಚಿಕೊಂಡಿರುವ ರಿಕಿ ಸಮಂತಾ ಹಾಗೂ ಅಲ್ಲು ಅರ್ಜುನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೋ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಹಲವರು ರಿಕಿ ಅವರ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದು ಪ್ರೋತ್ಸಾಹಿಸಿ ಕಾಮೆಂಟ್ ಮಾಡಿದ್ದಾರೆ. ರಿಕಿ ಅವರ ನೃತ್ಯಕ್ಕೆ ಮೆಚ್ಚಿದ ಜನ ಡ್ಯಾನ್ಸಿಂಗ್ ಡ್ಯಾಡ್ ಎಂದೇ ಕರೆಯುತ್ತಾರೆ.
View this post on Instagram
ಸಾಮಾನ್ಯವಾಗಿ ಭಾರತೀಯ ಎಲ್ಲಾ ಭಾಷೆಗಳ ಹಾಡುಗಳಿಗೆ ಡ್ಯಾನ್ಸ್ ಮಾಡಿ ವೀಡಿಯೋ ಹಂಚಿಕೊಳ್ಳುವ ರಿಕಿ ಅವರಿಗೆ ಪುಷ್ಟ ಚಿತ್ರದ ಹಾಡು ಹೆಚ್ಚು ಮೆಚ್ಚುಗೆಯಾಗಿದೆಯಂತೆ. ಹೀಗಾಗಿ ಅವರು ತಮ್ಮದೇ ಸ್ಟೆಪ್ಗಳ ಮೂಲಕ ಹಾಡಿಗೆ ತಕ್ಕ ಹಾಗೆ ಹೆಜ್ಜೆ ಹಾಕಿದ್ದಾರೆ. ನೃತ್ಯ ನೋಡಿದ ನೆಟ್ಟಿಗರು ಇಳಿ ವಯಸ್ಸಿನಲ್ಲಿಯೂ ಇಷ್ಟು ಎನರ್ಜಿಯಿಂದ ಡ್ಯಾನ್ಸ್ ಮಾಡಿದ್ದಕ್ಕೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
‘ಟಿಪ್ ಟಿಪ್ ಬರ್ಸಾ ಪಾನಿ’ ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?
Published On - 11:17 am, Fri, 7 January 22