ವ್ಯಾಕ್ಸಿನೇಷನ್ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ
ಜರ್ಮನಿಯ ಕ್ಯಾಂಪೇನರ್ ಒಬ್ಬರು 700 ಕುರಿಗಳನ್ನು ಸಿರಿಂಜ್ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಿದ್ದಾರೆ. ಅದರ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೋನಾ ಸಾಂಕ್ರಾಮಿಕ ಜಗತ್ತಿನೆಲ್ಲೆಡೆ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಹಿನ್ನಲೆಯಲ್ಲಿ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ಜನ ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜರ್ಮನಿಯ ಕ್ಯಾಂಪೇನರ್ ಒಬ್ಬರು 700 ಕುರಿಗಳನ್ನು ಸಿರಿಂಜ್ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಿದ್ದಾರೆ. ಅದರ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನಿಯಲ್ಲಿ ಕೊರೋನಾದಿಂದ ಲಕ್ಷಾಂತರ ಸಾವುಗಳು ಸಂಭವಿಸಿವೆ. ದಿನನಿತ್ಯದ ಪ್ರಕರಣಗಳೂ ಕೂಡ ಏರಿಕೆಯಲ್ಲೇ ಇವೆ. ಹೀಗಿದ್ದರೂ ಜನ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜರ್ಮನಿಯಲ್ಲಿ ಕುರಿಗಳ ಬಗ್ಗೆ ಅಪಾರ ನಂಬಿಕೆಯಿದೆ. ಧನಾತ್ಮಕ ದೃಷ್ಟಿಕೋನದಲ್ಲಿ ಕುರಿಗಳನ್ನು ಜರ್ಮನಿಯ ಜನ ನೋಡುತ್ತಾರೆ ಈ ಹಿನ್ನಲೆಯಲ್ಲಿ ಎಟ್ಜೋಲ್ಡ್ ಎನ್ನುವ ವ್ಯಕ್ತಿ ಜರ್ಮನ್ ಪಟ್ಟಣವಾದ ಷ್ನೆವರ್ಡಿಂಗನ್‌ನಲ್ಲಿ ತನ್ನದೇ ತಂಡವನ್ನು ಕಟ್ಟಿಕೊಂಡು ಕುರಿಗಳ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 100 ಮೀ ಉದ್ದದ ಸಿರಿಂಜ್ ಆಕೃತಿಯನ್ನು 700 ಕುರಿಗಳ ಮೂಲಕ ನಿರ್ಮಿಸಿದ್ದಾರೆ. ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Using drones and a local flock belonging to shepherd, a team-builder in northern Germany is using approximately 700 sheep and a few goats to form a giant 328-foot-long syringe to spread a COVID-19 vaccine message https://t.co/OJrpImxm6G pic.twitter.com/gAB0hMmYW9
— Reuters (@Reuters) January 5, 2022
ಜರ್ಮನ್ನಲ್ಲಿ ಶೇ.71.3 ರಷ್ಟು ಜನ ಮಾತ್ರ ಕೊರೋನಾ ಲಸಿಕೆಯ ಎರಡೂ ಡೋಸ್ನ್ನು ಪಡೆದಿದ್ದಾರೆ ಹಾಗೂ 39.3 ಪ್ರತಿಶತದಷ್ಟು ಜನರು ಕಳೆದ ಎರಡು ದಿನಗಳ ಹಿಂದೆ ವ್ಯಕ್ಸಿನ್ ಪಡೆದಿದ್ದಾರೆ ಎಂದು ಜರ್ಮನ್ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಫಾರ್ ಇನ್ಫೆಕ್ಷನ್ ಡಿಸೀಸ್ ಸಂಸ್ಥೆ ವರದಿ ತಿಳಿಸಿದೆ. ಜತೆಗೆ ಶೇ5 ರಿಂದ 10 ಜನರು ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ. ಯುರೋಪಿಯನ್ ದೇಶಗಳಲ್ಲಿ ಜರ್ಮನಿಯಲ್ಲಿ ಅತೀ ಕಡಿಮೆ ಜನರು ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆ ವರದಿ ತಿಳಿಸಿದೆ.
ಇದನ್ನೂ ಓದಿ:
Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!
Published On - 9:40 am, Fri, 7 January 22