Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!
ವಿಡಿಯೋ ತುಣುಕು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 06, 2022 | 7:56 PM

ಗಂಡನ ಬಗ್ಗೆ ಮಹಿಳೆಯರಿಗೆ ಪೊಸೆಸಿವ್​ನೆಸ್​ ಇದ್ದೇ ಇರುತ್ತದೆ. ತನ್ನ ಮದುವೆಯ ರಿಸೆಪ್ಷನ್​ಗೆ ಬಂದಿದ್ದ ಬುರ್ಖಾ ಧರಿಸಿದ ಮಹಿಳೆಯೊಬ್ಬರು ವರನನ್ನು ಪದೇಪದೆ ತಬ್ಬಿಕೊಳ್ಳುತ್ತಿದ್ದಳು. ಗಂಡನನ್ನು ಯಾರೋ ಮಹಿಳೆ ಬಂದು ಅಪ್ಪಿಕೊಂಡಿದ್ದರಿಂದ ವಧುವಿಗೆ ತಳಮಳ ಶುರುವಾಗಿತ್ತು. ನಂತರ ಆ ಮಹಿಳೆ ತನ್ನ ಮುಖದ ಮೇಲಿನ ಮುಸುಕನ್ನು ತೆಗೆದುಹಾಕಿದ್ದಾಳೆ. ಆ ಬುರ್ಖಾಧಾರಿ ಮಹಿಳೆಯಲ್ಲ ಗಂಡು ಎಂದು ಗೊತ್ತಾದ ನಂತರ ಅಲ್ಲಿದ್ದ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಭಾರತದಲ್ಲಿ ಮದುವೆಯ ಸೀಸನ್ ಮುಗಿಯುತ್ತಿದೆ. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇವೆ. ಮದುವೆಯಲ್ಲಿ, ವೇದಿಕೆಯಲ್ಲಿ ವಧು-ವರರನ್ನು ಅಭಿನಂದಿಸಲು ಸಂಬಂಧಿಕರ ಸಾಲು ಇರುತ್ತದೆ. ಈ ಸಮಯದಲ್ಲಿ, ವಧು-ವರರ ಸ್ನೇಹಿತರು ಕೂಡ ಅವರನ್ನು ಅಭಿನಂದಿಸಲು ವೇದಿಕೆಯ ಮೇಲೆ ಬರುತ್ತಾರೆ. ಈ ಸಮಯದಲ್ಲಿ ತಮಾಷೆಯ ಸಂಗತಿಗಳೂ ನಡೆಯುತ್ತವೆ.

ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ವಧುವಿಗೆ ವಿಷ್ ಮಾಡಿದ ಆಕೆ ಮದುಮಗನನ್ನು ಅಪ್ಪಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

ಪದೇಪದೆ ಆ ಬುರ್ಖಾಧಾರಿ ತನ್ನ ಗಂಡನನ್ನು ಅಪ್ಪಿಕೊಂಡಿದ್ದನ್ನು ನೋಡುತ್ತಾ ನಿಂತಿದ್ದ ಆ ವಧುವಿನ ಎದುರು ಬುರ್ಖಾಧಾರಿ ತನ್ನ ಮುಸುಕನ್ನು ತೆಗೆದಿದ್ದಾಳೆ. ವಾಸ್ತವವಾಗಿ, ವರನ ಸ್ನೇಹಿತ ಬುರ್ಖಾ ಧರಿಸಿ ಪ್ರಾಂಕ್ ಮಾಡಲು ವೇದಿಕೆ ಮೇಲೇರಿದ್ದ. ಬುರ್ಖಾದಲ್ಲಿ ವರನ ಸ್ನೇಹಿತರನ್ನು ನೋಡಿ, ಅಲ್ಲಿ ವಧು-ವರರು ಶಾಕ್ ಆಗಿದ್ದಾರೆ. ಇದೆಲ್ಲವನ್ನೂ ನೋಡಿ ಸಂಬಂಧಿಕರು ಮತ್ತು ಅತಿಥಿಗಳು ನಕ್ಕು ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಎಂಗೇಜ್​ಮೆಂಟ್ ಮಾಡಿಕೊಂಡ ಸಲಿಂಗಿ ವೈದ್ಯರು!

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Published On - 7:55 pm, Thu, 6 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್