25 ವರ್ಷಗಳ ಹಿಂದೆ ಅಮೆಜಾನ್ ವೆಬ್ಸೈಟ್ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್
ಅಮೆಜಾನ್ ಸಂಸ್ಥಾಪಕ ಜೆಪ್ ಬೆಜೋಸ್ 1997ರಲ್ಲಿ ಒಂದು ಡೆಮೋ ವೀಡಿಯೋ ಹಂಚಿಕೊಂಡಿದ್ದರು. ಅದೇ ವೀಡಿಯೋವನ್ನು ಈಗ ರೀ ಟ್ವಿಟ್ ಮಾಡಿದ್ದಾರೆ.
ಇಂದು ಅಮೆಜಾನ್ ಹೆಸರನ್ನು ಕೇಳಿರದ ವ್ಯಕ್ತಿಗಳಿಲ್ಲ. ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ನಲ್ಲಿ ಅಮೇಜಾನ್ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ ಗಾಜೆಟ್ಗಳವರೆಗೂ ಎಲ್ಲವೂ ಆನ್ಲೈನ್ ಶಾಪಿಂಗ್ ವೇದಿಕೆ ಅಮೆಜಾನ್ಲ್ಲಿ ದೊರೆಯುತ್ತದೆ. ಅಮೇಜಾನ್ ಆರಂಭವಾಗಿದ್ದು 1995ರಲ್ಲಿ. ಆರಂಭದ ದಿನಗಳಲ್ಲಿ ಅಮೆಜಾನ್ನಲ್ಲಿ ಕೇವಲ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಅಮೆಜಾನ್ ಸಂಸ್ಥಾಪಕ ಜೆಪ್ ಬೆಜೋಸ್ 1997ರಲ್ಲಿ ಒಂದು ಡೆಮೋ ವೀಡಿಯೋ ಹಂಚಿಕೊಂಡಿದ್ದರು. ಅದೇ ವೀಡಿಯೋವನ್ನು ಈಗ 25 ವರ್ಷಗಳ ಬಳಿಕ ರೀ ಟ್ವಿಟ್ ಮಾಡಿದ್ದಾರೆ.
ಸದ್ಯ ಟ್ವಿಟರ್ನಲ್ಲಿ ವೀಡಿಯೋ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಅಮೆಜಾನ್ಎಲ್ಲ ಬಗೆಯ ವಸ್ತುಗಳಿಗೆ ಅಂಗಡಿಯಾಗಲಿದೆ ಎಂದು ಬೆಜೋಸ್ ಹೇಳಿದ್ದರು. ಅದೇ ರೀತಿ ಇಂದು ಅಮೇಜಾನ್ನಲ್ಲಿ ಸಿಗದ ವಸ್ತುಗಳಿಲ್ಲ ಎಂಬಂತಾಗಿದೆ. ಜಾನ್ ಎರ್ಲಿಚ್ಮನ್ ಎನ್ನುವ ಪತ್ರಕರ್ತ ವೀಡಿಯೋವನ್ನು ಮೊದಲು ಹಂಚಿಕೊಂಡಿದ್ದು, ನಂತರ ಜೆಫ್ ಬೆಜೋಸ್ ರೀಟ್ವೀಟ್ ಮಾಡಿದ್ದಾರೆ. ಈ ವೀಡಿಯೊವನ್ನು 1997ರಲ್ಲಿ ಅಮೇಜಾನ್ ವೇರ್ ಹೌಸ್ ಸಿಯಾಟಲ್ ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.
On this day in 1997: Jeff Bezos demos Amazon’s websitepic.twitter.com/YrokNm9zgu
— Jon Erlichman (@JonErlichman) January 5, 2022
ವೀಡಿಯೋದಲ್ಲಿ ‘ಉತ್ತಮ ಪುಸ್ತಕ ಮಾರಾಟಗಾರರಿಗೆ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತದೆ. ಆದರೆ ಈ ಬಾರಿ ನ್ಯೂಯಾರ್ಕ್ ಟೈಮ್ಸ್ನಿಂದ ಪರಿಶೀಲನೆಗೊಂಡ ಪುಸ್ತಕಗಳಿಗೂ ಶೇ.30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ. 25 ವರ್ಷಗಳ ಹಿಂದೆ ಪುಸ್ತಕದ ರಿಯಾಯಿತಿ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡುವ ವಿಡಿಯೋ ಇದಾಗಿದೆ. ಈ ಬಗ್ಗೆ ನೆಟ್ಟಿಗರು ಜೆಫ್ ಬೆಜೋಸ್ ಬದಲಾವಣೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದು, ಇನ್ನೂ ಹಲವರು ಅಮೆಜಾನ್ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ
Published On - 5:14 pm, Thu, 6 January 22