Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ
ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ ಮಾಂಗೋಲಿಯನ್ ಗುಲ್ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ.
ಭುವನೇಶ್ವರ: ಚಳಿಗಾಲದಲ್ಲಿ ಎಲ್ಲೆಡೆ ವಲಸೆ ಹಕ್ಕಿಗಳದೇ ಕಲವರ. ಲಕ್ಷಾಂತರ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ವಲಸೆ ಹಕ್ಕಿಗಳು ಹಿಂಡು ಹಿಂಡಾಗಿ ತೆರಳುವುದನ್ನು ನೋಡುವುದೇ ಒಂದು ಸುಂದರ ಅನುಭವ. ಅಂತಹ ಸುಂದರ ದೃಶ್ಯಕ್ಕೆ ಇದೀಗ ಒಡಿಶಾದ ಚಿಲಿಕಾ ಸರೋವರ ಸಾಕ್ಷಿಯಾಗಿದೆ. ಏಷ್ಯಾದ ಅತೀ ದೊಡ್ಡ ಉಪ್ಪುನೀರಿನ ಸರೋವರ ಎಂದು ಖ್ಯಾತಿ ಪಡೆದ ಒಡಿಶಾದ ಚಿಲಿಕಾ ಸರೋವರದಲ್ಲೀಗ 10 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬಂದಿವೆ. ಈ ಕುರಿತು ಒಡಿಶಾದ ಸಿಡಿಎ ಮುಖ್ಯ ನಿರ್ವಾಹಕ ಸುಸಾಂತ್ ನಂದಾ ಎನ್ನುವವರು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ ಮಾಂಗೋಲಿಯನ್ ಗುಲ್ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ. ಚಿಲಿಕಾ ಸರೋವರವು ಪೂರಿ, ಗಂಜಮ್ ಮತ್ತು ಖೋರಡಾ ಜಿಲ್ಲೆಗಳಲ್ಲಿ ಸುಮಾರು 1,100 ಚದರ ಕಿಮೀ ವರೆಗೆ ವಿಸ್ತಾರವಾಗಿದೆ. ಹೀಗಾಗಿ ಲಕ್ಷಾಂತರ ಪಕ್ಷಿಗಳು ಬಂದು ಹಾರಾಟ ನಡೆಸುತ್ತವೆ.
#ChilikaLake ….The Paradise#ଚିଲିକା ??? pic.twitter.com/19mnore9aU
— Bhabani Prasad Das?? (@Bhabanijourno) January 4, 2022
ಈ ಬಾರಿ ಪಿಂಟೈಲ್, ಗಡ್ವಾಲ್, ಯುರೇಷಿಯನ್ ವೆಗಾನ್ ಸೇರಿದಂತೆ ಹಲವು ಪಕ್ಷಿಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿಲಿಕಾ ಸರೋವರದಲ್ಲಿ ಪಕ್ಷಿಗಳ ಹಾರಾಟದ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಚಿಲಿಕಾ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ, ನೂರಾರು ಹಕ್ಕಿಗಳು ಒಂದೇ ಸಲಕ್ಕೆ ಹಾರುವ ವೀಡಿಯೋಗಳು, ಪಕ್ಷಿಗಳು ಏಕಾಂತದಲ್ಲಿ ಕುಳಿತ ಫೋಟೋಗಳು ನೋಡುಗರ ಮನ ಸೆಳೆದಿದೆ.
ಇದನ್ನೂ ಓದಿ:
ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು: ವಿಡಿಯೋದಲ್ಲೇನಿದೆ?