ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು: ವಿಡಿಯೋದಲ್ಲೇನಿದೆ?
ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ಸೆರೆಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ವೈರಲ್ ಆಗಿದೆ.
ಕೆಲವೊಮ್ಮೆ ನಮಗೆ ಕಾಣಿಸುವುದೇ ಒಂದು ನಮ್ಮದೆರು ಇರುವ ವಸ್ತುಗಳೇ ಇನ್ನೊಂದು ಎನ್ನುವ ಸನ್ನಿವೇಶ ಎದುರಾಗುತ್ತದೆ. ಅದಕ್ಕೆ ಹೇಳುವುದು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದು. ಇಲ್ಲೊಂದು ವೀಡಿಯೋ ನೋಡಿದರೆ ನೀವೇ ಎಂದುಕೊಳ್ಳುತ್ತೀರಿ ನಿಮ್ಮ ಕಣ್ಣು ನಿಮಗೆ ಸುಳ್ಳು ಹೇಳಿದೆ ಎಂದು. ಹೌದು, ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ಸೆರೆಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ವೈರಲ್ ಆಗಿದೆ. ಆದರೆ ಅಲ್ಲಿರುವುದು ನಿಜಕ್ಕೂ ನಾಯಿಯ ಮುಖವಾಗಿರುವುದಿಲ್ಲ ಅಲ್ಲಿ ಕುಳಿತಿರುವುದು ಬೆಕ್ಕು ಎಂದು ವಿಡಿಯೋವನ್ನು ಕೊನೆಯವರೆಗೆ ನೋಡಿದರೆ ಮಾತ್ರ ತಿಳಿಯುತ್ತದೆ.
11 ಸೆಕೆಂಡುಗಳ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ವೀಡಿಯೋದಲ್ಲಿ ಮೊದಲು ದೂರದಲ್ಲಿ ನಾಯಿಯ ಮುಖ ಕಾಣಿಸುತ್ತದೆ. ನಂತರ ವೀಡಿಯೋದಲ್ಲಿ ಕ್ಯಾಮರಾ ಜೂಮ್ ಆದಂತೆ ದೂರದಲ್ಲಿ ಕುಳಿತಿರುವ ಪ್ರಾಣಿ ಸರಿಯುತ್ತದೆ. ಆಗ ಅಲ್ಲಿರುವುದು ಬೆಕ್ಕು ಎಂದು ತಿಳಿಯುತ್ತದೆ. ಈ ವಿಡಿಯೋ ನೋಡುಗರನ್ನು ಅಚ್ಚರಿಗೊಳಿಸಿದೆ. ಈ ಘಟನೆ ಡಿಸೆಂಬರ್ 23ರಂದ ನಡೆದಿದೆ. ಆದರೆ ಜನವರಿ 4ರಂದು ವೈರಲ್ಹಾಗ್ ಎನ್ನುವ ಯುಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋ 12 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ವೀಡಿಯೋ ನೋಡಿದ ನೆಟ್ಟಿಗರು ನಿಜ ತಿಳಿಯುವುದಕ್ಕಿಂತ ಮೊದಲು ಅವರು ಅಂದುಕೊಂಡಿದ್ದರ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಬಳಕೆದಾರರೊಬ್ಬರು ನಾನು ನಾಯಿಯ ತಲೆ ಎಂದಕೊಂಡೆ ಎಂದರೆ ಇನ್ನೊಬ್ಬರು ಕೋಳಿ ಎಂದುಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ವೀಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:
ಕೆಸರಿನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡ ಜೋಡಿ: ವೈರಲ್ ಆದ ಫೋಟೋಗಳು
Published On - 3:34 pm, Thu, 6 January 22