ಬಂಗಾರದ ಹೊದಿಕೆಯಿರುವ ಈ ಮಿಠಾಯಿಯ ಬೆಲೆ ಕೆಜಿಗೆ 16 ಸಾವಿರ ರೂ.!
ಈ ದುಬಾರಿ ಸ್ವೀಟ್ ಅನ್ನು ಹೂಡಿಕೆ ಮಾಡಲು ಬಳಸಿಕೊಳ್ಳಬಹುದು ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಭಾರತದಲ್ಲಿ ತರಾವರಿ ಸಿಹಿ ಖಾದ್ಯಗಳಿಗೇನು ಕೊರತೆಯಿಲ್ಲ. ವೈವಿಧ್ಯತೆಯಲ್ಲಿ ಏಕತೆ ಎನ್ನುವಂತೆ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಭಿನ್ನ ಖಾದ್ಯವನ್ನು ಹೊಂದಿದೆ. ಉತ್ತರ ಭಾರತದಲ್ಲಿ ಒಂದು ರೀತಿಯ ಸಿಹಿ ತಿನಿಸುಗಳು ಆಹಾರ ಪ್ರೀಯರನ್ನು ಸೆಳೆದರೆ ದಕ್ಷಿಣ ಭಾರತದ ಆಹಾರ ಶೈಲಿಯೇ ಭಿನ್ನ. ಹೀಗಿದ್ದಾಗ ದೆಹಲಿಯ ಸ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಜು ಬರ್ಫಿಯಂತಹ ಸಿಹಿ ತಿನಿಸುಗಳಿಗೆ ಬೆಳ್ಳಿಯ ಪೇಪರ್ಅನ್ನು ಸುತ್ತಿರುವುದನ್ನು ಕಾಣಬಹುದು. ಇಲ್ಲೊಂದು ಸ್ವೀಟ್ಅನ್ನು ಬಂಗಾರದ ಹೊದಿಕೆಯಿಂದ ಮುಚ್ಚಲಾಗಿದೆ. ಇದರ ಬೆಲೆ ಬರೋಬ್ಬರಿ 16 ಸಾವಿರ ರೂ ಆಗಿದೆ. ಈ ಗೋಲ್ಡ್ ಪದರ ಲೇಪಿತ ಮಿಠಾಯಿ ಒಂದು ಕೆಜಿಗೆ 16 ಸಾವಿರ ರೂ. ಆಗಿದೆ.
ದೆಹಲಿಯ ಮುಜಾಪುರ್ ಎನ್ನುವ ಪ್ರದೇಶದಲ್ಲಿ ಈ ಮೀಠಾಯಿಯನ್ನು ಅರ್ಜುನ್ ಚೌಹಾಣ್ ಎನ್ನುವ ಫುಡ್ ಬ್ಲಾಗರ್ ಒಬ್ಬರು ಟೇಸ್ಟ್ ಮಾಡಿದ್ದಾರೆ. ಬಂಗಾರದ ಹೊದಿಕೆಯನ್ನು ಸ್ವೀಟ್ಗೆ ಮುಚ್ಚುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ ಇದರ ಬೆಲೆ ಒಂದು ಕೆಜಿಗೆ 16 ಸಾವಿರ ರೂ ಆಗಿದೆ. ನಿಮ್ಮ ಶ್ರೀಮಂತ ಸ್ನೇಹಿತರನ್ನು ಟ್ಯಾಗ್ ಮಾಡಿ ಎಂದು ಬರೆದುಕೊಂಡಿದ್ದಾರೆ.
View this post on Instagram
ಡಿಸೆಂಬರ್ 26ರಂದು ಹಂಚಿಕೊಂಡ ಈ ವಿಡಿಯೋ 10 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದೆ. ಸಿಹಿ ಮಿಠಾಯಿಯ ಬೆಲೆಯನ್ನು ನೋಡಿ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈ ದುಬಾರಿ ಸ್ವೀಟ್ ಅನ್ನು ಹೂಡಿಕೆ ಮಾಡಲು ಬಳಸಿಕೊಳ್ಳಬಹುದು ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಅಪಘಾತದಲ್ಲಿ ಗಾಯಗೊಂಡ ಮಾಲೀಕನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್ ನಾಯಿ: ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
Published On - 11:28 am, Thu, 6 January 22